ಎಡತೊರೆ ಮಹೇಶ್
ಎಚ್.ಡಿ. ಕೋಟೆ: ಕಾಲೇಜಿಗೆ, ಶಿಕ್ಷಕರಿಗೆ ಮತ್ತು ತಂದೆ ತಾಯಿಗಳಿಗೆ ವಿದ್ಯಾರ್ಥಿಗಳು ಒಳ್ಳೆಯ ಹೆಸರು ತರಬೇಕು ಎಂದು ವಕೀಲರಾದ ಸರಸ್ವತಿ ತಿಳಿಸಿದರು.
ಪಟ್ಟಣದ ವಿಶ್ವಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಸರಸ್ವತಿ ಪೂಜೆ ಮತ್ತು ಪ್ರಾಯೋಗಿಕ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳು ಲಾಭ ಮಾಡುವುದಕ್ಕೆ ಕಟ್ಟಿರುವುದಿಲ್ಲ, ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಬೇಕು, ತಾಲ್ಲೂಕಿನ ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ನಿರ್ಮಿಸಲಾಗಿರುತ್ತದೆ ಎಂದರು.
ಚಾಮರಾಜ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಚಾಮರಾಜು ಮಾತನಾಡಿ ನೀವು ಮೊದಲು ಚೆನ್ನಾಗಿ ಓದಿ ಒಳ್ಳೆ ಅಂಕಗಳನ್ನು ಗಳಿಸಿ, ನಿಮ್ಮ ಕುಟುಂಬದವರಿಗೆ ಒಳ್ಳೆ ಹೆಸರನ್ನು ತಂದುಕೊಡಿ, ನಂತರ ಶಾಲಾ ಶಿಕ್ಷಕರಿಗೆ ಒಳ್ಳೆ ಹೆಸರನ್ನು ತನ್ನಿ ನೀವು ಸಹ ಮುಂದೆ ಬನ್ನಿ ಈ ಸಂಸ್ಥೆ ನಿಮ್ಮದು ಬೆಳೆಸಿ ಮುಂದಿನ ಸಾಲಿನಲ್ಲಿ ಪ್ರಥಮ ಪಿಯುಸಿ ದ್ವಿತೀಯ ಪಿಯುಸಿ ಎರಡು ಸಹ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಗೋಪಾಲಸ್ವಾಮಿ ಮಾತನಾಡಿ ನಮ್ಮ ಊರಿನವರು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಮಕ್ಕಳಿಗೆ ತಾಲೂಕಿನಲ್ಲಿ ಒಳ್ಳೆಯ ಶಿಕ್ಷಣ ನೀಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ನಾವು ಸಹ ತಾಲೂಕಿನಲ್ಲಿ ಓದಬೇಕಾದರೆ ವಿಜ್ಞಾನ ವಿಭಾಗ ಯಾರು ಸಹ ಆಯ್ಕೆ ಮಾಡಿಕೊಳ್ಳಲು ಮುಂದೆ ಬರುತ್ತಿರಲಿಲ್ಲ ಹಾಟ್ಸ್ ಕಾಮರ್ಸ್ ತೆಗೆದುಕೊಂಡು ಓದುತ್ತಿದ್ದರು ನಾನು ಹಂದಿರ ಸಂದರ್ಭದಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡೆ ಮೈಸೂರಿನಲ್ಲಿ ವ್ಯಾಸಂಗ ಮಾಡಿ ಇಂಜಿನಿಯರ್ ಪದವಿಯನ್ನು ಪಡೆದೆ ಇವತ್ತು ವಿಶ್ವ ಭಾರತಿ ಸಂಸ್ಥೆಯಲ್ಲಿ ವಿಜ್ಞಾನ ವಿಭಾಗದ ಇಷ್ಟು ಮಕ್ಕಳನ್ನು ನೋಡಿದರೆ ಸಂತೋಷ್ ಆಗುತ್ತದೆ ನೀವು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಓದಿದರೆ ಜೀವನ ಸಾರ್ಥಕವಾಗುತ್ತದೆ ನಿಮ್ಮ ತಂದೆ ತಾಯಿಯ ಕನಸು ನನಸಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಭಾರತಿ ಸಂಸ್ಥೆಯ ಸಂಯೋಜಕ ಅಧಿಕಾರಿ ಶಿವರಾಜ್, ಭರತ್ ರಾಜ್, ಪ್ರದೀಪ್, ಭೋಗೋಳ ಶಾಸ್ತ್ರ ಹಿರಿಯ ಉಪನ್ಯಾಸಕರು ಕೆ ಮಹದೇವ, ಚಿಗುರು ಶಾಲೆ ಸಂಸ್ಥಾಪಕರು ಶಿವಪ್ಪ, ಉದ್ಯಮಿಗಳು ದಿನೇಶ್, ಜಿಮ್ ಮಾಲೀಕರು ಯಶ್ವಂತ್, ಶಿಕ್ಷಕರು ರಾಮುನಾಯಕ, ನಜ್ಮಾಬಾನು, ಮಹದೇವಪ್ಪ, ರವೀಂದ್ರ ಬಾಬು, ದಾಸಚಾರಿ, ಸತೀಶ್, ವಕೀಲ ವೇಣುಗೋಪಾಲ್, ಶ್ರೀನಿವಾಸ್ ನಾಯಕ್, ಶಿವಕುಮಾರ್, ವಿಜೇತ, ರಶ್ಮಿ, ನಯನ, ಮತ್ತು ವಿದ್ಯಾರ್ಥಿಗಳು ಇದ್ದರು.