ಮೈಸೂರು: ನಾಡಹಬ್ಬ ಮೈಸೂರು ದಸರಾ ಇಂದು ಧಾರ್ಮಿಕ ಆಚರಣೆಗಳೊಂದಿಗೆ ಆರಂಭವಾದರೂ, ಉದ್ಘಾಟನಾ ಕಾರ್ಯಕ್ರಮದ ವೈಭವಕ್ಕೆ ಒಂದಷ್ಟು ಮಂಕು ಹರಿದಿತು. ಚಾಮುಂಡಿಬೆಟ್ಟದ ದೇವಾಲಯದ ಆವರಣದಲ್ಲಿ ನಡೆದ ಉದ್ಘಾಟನೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿತವಾಗಿದ್ದ ಕಾರಣ, ಕಾರ್ಯಕ್ರಮದ ಸ್ಥಳದಲ್ಲಿ ಖಾಲಿ ಆಸನಗಳು ಕಂಡುಬಂದವು. ಈ ಹಿನ್ನೆಲೆಯಲ್ಲಿ, ಜಿಲ್ಲಾ ಆಡಳಿತ ತುರ್ತು ಕ್ರಮವಾಗಿ ವಿದ್ಯಾರ್ಥಿಗಳನ್ನು ಕರೆತಂದು ಆಸನಗಳನ್ನು ತುಂಬಿಸಲು ಹರಸಾಹಸ ಪಟ್ಟಿದೆ.
ಮಹಾರಾಣಿ ಮಹಿಳಾ ಕಾಲೇಜು, ಒಂಟಿಕೊಪ್ಪಲು ಸರ್ಕಾರಿ ಕಾಲೇಜು, ಹಾಗೂ ಇತರ ಹಾಸ್ಟೆಲ್‌ಗಳಲ್ಲಿ ವಾಸವಿರುವ ವಿದ್ಯಾರ್ಥಿನಿಯರನ್ನು ಮುಂಜಾನೆ, ಪಾಸ್‌ಗಳನ್ನು ವಿತರಿಸಿ, ಶಿಕ್ಷಕರ ನೇತೃತ್ವದಲ್ಲಿ ಸರ್ಕಾರಿ ಬಸ್‌ಗಳ ಮೂಲಕ ನೇರವಾಗಿ ಉದ್ಘಾಟನಾ ಸ್ಥಳಕ್ಕೆ ಕರೆತರಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಗೆ ಪಾಸ್ ನೀಡಲಾಗಿದ್ದು, ಕಾಲೇಜು ಸಿಬ್ಬಂದಿ ವರ್ಗದ ಮಾರ್ಗದರ್ಶನದಲ್ಲಿ ಈ ಯೋಜನೆ ಮುಂದುವರಿಸಲಾಯಿತು.
ಕಾರ್ಯಕ್ರಮದ ಮುಂಭಾಗದಲ್ಲಿ ಖಾಲಿ ಖಾಲಿ ಕಾಣುತ್ತಿದ್ದ ಆಸನಗಳನ್ನು ತುಂಬಿಸಲು ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಅಲ್ಲದೆ, ಕಾರ್ಯಕ್ರಮದಲ್ಲಿ ಭಕ್ತಿ ಹಾಗೂ ಶ್ರದ್ಧೆಯ ನೋಟವನ್ನು ಪ್ರದರ್ಶಿಸಲು ವಿದ್ಯಾರ್ಥಿಗಳ ಹಾಜರಾತಿಯನ್ನು ಹೆಚ್ಚಿಸಲಾಗಿದೆ.
ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಆಕ್ರೋಶಕ್ಕೂ ಕಾರಣ
ಸಾಮಾನ್ಯವಾಗಿ ಸಾವಿರಾರು ಭಕ್ತರು ಭಾಗವಹಿಸುವ ಚಾಮುಂಡಿಬೆಟ್ಟದ ದಸರಾ ಉದ್ಘಾಟನೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ಮಾಡಲಾಗಿದ್ದು, ಇದರಿಂದ ಜನಸಾಮಾನ್ಯರ ಅಸಮಾಧಾನ ತೀವ್ರಗೊಂಡಿದೆ. ಭದ್ರತಾ ಕಾರಣಗಳ ನೆಪದಲ್ಲಿ ಸಾರ್ವಜನಿಕ ಪ್ರವೇಶವನ್ನು ನಿರಾಕರಿಸಿ, ಆಸನಗಳ ಖಾಲಿತನವನ್ನು ವಿದ್ಯಾರ್ಥಿ ಭಕ್ತರ? ಮೂಲಕ ಮುಚ್ಚುವ ಕ್ರಮವನ್ನೂ ಕೆಲವರು ಟೀಕಿಸುತ್ತಿದ್ದಾರೆ.
ಚಾಮುಂಡಿಬೆಟ್ಟದ ಪರಿಸರವೂ ಈ ಬಾರಿ ಸೂಪರ್ಸಿಲೆಂಟ್ ಆಗಿದ್ದು, ಸಾಮಾನ್ಯವಾಗಿ ಕಂಡುಬರುವ ಭಕ್ತರ ಸೆಳೆತ, ಹರಕೆ ಪೂಜೆಗಳ ಹುರುಪು ಮತ್ತು ಉತ್ಸವದ ಗದ್ದಲ ಈ ಬಾರಿಗೆ ಕಾಣಿಸಿಕೊಂಡಿಲ್ಲ.
ಪ್ರಶ್ನೆ ಉದ್ಭವಿಸುತ್ತಿದೆ: ಇದು ನಾಡಹಬ್ಬದ ಜನಪರತೆ ಯಾಕೆ ಇಲ್ಲ: ದಸರಾ ನಾಡಹಬ್ಬವಾದರೂ, ಈ ಬಾರಿ ಸಾರ್ವಜನಿಕರ ಪಾಲಿಗೆ ಉತ್ಸವದ ಆರಂಭವೇ ದೂರವಾಗಿದೆ ಎಂಬ ಭಾವನೆ ಮನೆ ಮಾಡಿದೆ. ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರುವುದು ವೈಭವ ಕಾಪಾಡಲು ತೆಗೆದುಕೊಳ್ಳುವ ತಾತ್ಕಾಲಿಕ ವ್ಯವಸ್ಥೆ ಎಂದು ಅಧಿಕಾರಿಗಳು ವಿವರಿಸುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳ ಸಮಯ, ಆಸಕ್ತಿಯ ಅನುಕೂಲತೆಗಳನ್ನು ಲೆಕ್ಕಿಸದೇ ಈ ರೀತಿಯ ಭಾಗವಹಿಸು ಮಾಡಲು ಜೋರಾಗಿರುವುದಾಗಿ ಕೆಲ ಪೋಷಕರು ಮತ್ತು ನಾಗರಿಕರು ಶಂಕೆ ವ್ಯಕ್ತಪಡಿಸಿದ್ದಾರೆ.
