Sunday, April 20, 2025
Google search engine

Homeರಾಜ್ಯಸುದ್ದಿಜಾಲಅಂಬೇಡ್ಕರ್ ಬಗ್ಗೆ ಅಧ್ಯಯನ ದೇಶದ ಅಭಿವೃದ್ಧಿಗೆ ಪೂರಕ-ಡಾ. ವಿನುತಾ

ಅಂಬೇಡ್ಕರ್ ಬಗ್ಗೆ ಅಧ್ಯಯನ ದೇಶದ ಅಭಿವೃದ್ಧಿಗೆ ಪೂರಕ-ಡಾ. ವಿನುತಾ

ಎಚ್.ಡಿ. ಕೋಟೆ : ಅಂಬೇಡ್ಕರ್ ಬಗ್ಗೆ ಅಧ್ಯಯನ ಮಾಡುವುದು ಇದೆಯೆಲ್ಲಾ ಅದು ದೇಶದ ಅಭಿವೃದ್ಧಿಗೆ ಪೂರಕ ಎಂದು ಬೆಂಗಳೂರಿನ ಪ್ರಾಧ್ಯಾಪಕಿ ಡಾ. ವಿನುತಾ ತಿಳಿಸಿದರು.
ಎಚ್.ಡಿ. ಕೋಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಎಚ್.ಡಿ. ಕೋಟೆ ಮತ್ತು ಸರಗೂರು ತಾಲ್ಲೂಕಿನ ಜಂಬೂದ್ವೀಪ ಮಹಿಳಾ ಘಟಕದ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಮಾತನಾಡಿದರು.
ಅಂಬೇಡ್ಕರ್ ರವರ ಹೋರಾಟದಿಂದಾಗಿ ಹೆಣ್ಣು ಮಕ್ಕಳು ಇಂದು ಸಮಾಜದಲ್ಲಿ ಪುರುಷರಷ್ಟೇ ಸಮಾನರಾಗಿ ನಿಲ್ಲಲು ಸಾಧ್ಯವಾಯಿತು. ಅಲ್ಲದೇ ಅಂಬೇಡ್ಕರ್ ರವರು ಅಧ್ಯಯನ ಮಾಡಿದಷ್ಟು ಇಡೀ ಮನುಕುಲದಲ್ಲಿ ಯಾರೂ ಸಹ ಓದಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಂವಿಧಾನದ ಪೀಠಿಕೆಯನ್ನು 16 ನೇ ಶತಮಾನದ ಪ್ರೆಂಚರಿಂದ ಪಡೆದಿಲ್ಲ, ನನ್ನ ಗುರುಗಳಾದ ಬುದ್ಧನಿಂದ ಪಡೆದಿದ್ದೇನೆ ಎಂದು ಅಂಬೇಡ್ಕರ್ ಒಮ್ಮೆ ತಿಳಿಸಿದ್ದರು ಎಂದು ತಿಳಿಸಿದರು.
ಬ್ರೀಟಷರು ಭಾರತಕ್ಕೆ ಬಂದ ಹಿನ್ನಲೆ ಶಿಕ್ಷಣ, ಆಸ್ಪತ್ರೆ ಸೇರಿದಂತೆ ಇನ್ನಿತರ ಜನಪರ ಯೋಜನೆಗಳು ದೊರೆತಿವೆ, ಅವರ ಬಾರದಿದ್ದರೆ ನಮಗೆ ಸಮಾಜದ ಪ್ರಮುಖ ಅಂಶಗಳು ದೊರೆಯುತ್ತಿರಲಿಲ್ಲ ಎಂದರು.
ಎಲ್ಲಿಯವರೆಗೆ ಪ್ರಪಂಚದಲ್ಲಿ ಶೋಷಣೆ ಇರುತ್ತದೋ ಅಲ್ಲಿಯವರೆಗೆ ಅಂಬೇಡ್ಕರ್ ಸಂವಿಧಾನ ರಕ್ಷಣೆಗೆ ಬರಲಿದೆ ಎಂದರು.

ರಾಮನಗರದ‌ ಆಪ್ತ ಸಮಾಲೋಚಕಿ ಸೌಜನ್ಯ, ಅಂತರಸಂತೆ ಬುದ್ಧ ಧಮ್ಮ ಕೇಂದ್ರದ ಗೌತಮಿ ಬಂತೇಜಿ, ನಿವೃತ್ತ ಮುಖ್ಯಶಿಕ್ಷಕಿ ಚೂಡಾಮಣಿ, ಜಂಬೂದ್ವೀಪದ ಅಧ್ಯಕ್ಷೆ ಚಂದ್ರಮ್ಮ, ಇಂಚರ, ಸುವರ್ಣ, ಎಚ್.ಸಿ. ನರಸಿಂಹಮೂರ್ತಿ, RPI ಜಿಲ್ಲಾ ಅಧ್ಯಕ್ಷ ಅನುಷಾ ,ಉದ್ಬುರ್ ಕಾಲೋನಿ ಮಂಜುಳಾ , ಸೋಗಹಳ್ಳಿ ಶಿವಣ್ಣ, ಮುದ್ದುಮಲ್ಲಯ್ಯ, ಎಚ್.ಬಿ. ಬಸವರಾಜು, ನೂರಲಕುಪ್ಪೆ ಉಮೇಶ್, ಕರ್ನಾಟಕ ಜನಪರ ವೇಧಿಕೆ ಅಧ್ಯಕ್ಷ ಪುರುಷೋತ್ತಮ, ಇದ್ದರು.

RELATED ARTICLES
- Advertisment -
Google search engine

Most Popular