ಮೈಸೂರು: ಅಧ್ಯಯನ ಹಾಗೂ ತಿಳಿವಳಿಕೆಗೆ ಯಾವುದೇ ಮಿತಿ ಮತ್ತು ವ್ಯಾಪ್ತಿ ಎಂಬುದಿಲ್ಲ. ಹಾಗಾಗಿ ಓದಿನಲ್ಲಿ ಯಾವುದೇ ಮಿತಿ ಹಾಕಿಕೊಳ್ಳದಿರಿ ಎಂದು ಡಿಸಿಪಿ ಎಂ.ಮುತ್ತುರಾಜ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಏರ್ಪಡಿಸಿದ್ದ ೫೦ ದಿನಗಳ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧಯನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಸ್ಪರ್ಧಾರ್ಥಿಗೂ ಏಕಾಗ್ರತೆ ಬಹುಮುಖ್ಯವಾಗಿದೆ. ಅದಕ್ಕಾಗಿ ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಕೆಲವೊಮ್ಮೆ ವಿಫಲರಾದರು ಮುಂದೊಂದು ದಿನ ಸಫಲರಾಗಬಹುದು. ಅದಕ್ಕಾಗಿ ನಿರಂತರ ಓದಿನಲ್ಲಿ ತಲ್ಲೀನರಾಗಬೇಕು ಎಂದರು.
ನಾನು ವಿಜ್ಞಾನ ವಿಷಯದಲ್ಲಿ ಅಧಯನ ಮಾಡಿದ್ದರು, ಕೆಎಸ್‌ಒಯುನಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದೆ. ಹಿಗಾಗಿ ಜ್ಞಾನ ಸಂಪಾದನೆಗೆ ಮಿತಿ ಹಾಕಿಕೊಳ್ಳಬಾರದು. ಅದು ನಮಗೆ ವಿವಿಧ ಆಯಾಮಗಳಲ್ಲಿ ಪ್ರಯೋಜನಕಾರಿಯಾಯಿತು. ಗ್ರಾಮೀಣ ಭಾಗದ ಅನೇಕರಿಗೆ ಅವಕಾಶಗಳಿರುವುದಿಲ್ಲ. ಆದರೆ ಕೆಎಸ್‌ಒಯು ಉತ್ತಮ ಅವಕಾಶ ಕಲ್ಪಿಸಿದ್ದು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಭಾರತೀಯ ಸ್ಟೇಟ್ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಆರ್.ಸತೀಶ ಮಾತನಾಡಿ, ವಿದ್ಯಾರ್ಥಿಗಳು ಬದುಕಿನಲ್ಲಿ ಛಲ ಹೆಚ್ಚಿಸಿಕೊಂಡು ಗುರಿಯೆಡೆಗೆ ಸಾಗಬೇಕು. ಎಲ್ಲರಿಗೂ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಆಸೆಯಿರುತ್ತದೆ. ಅದಕ್ಕಾಗಿ ಏನೇನು ಶ್ರಮ ಪಡುತ್ತೇವೆ ಎಂಬುದು ಮುಖ್ಯವಾಗಲಿದೆ. ಮೊದಲಿಗೆ ಉದ್ಯೋಗಾವಕಾಶಗಳು ಎಲ್ಲೆಲ್ಲಿ ಲಭವಿದೆ ಎಂಬುದನ್ನು ಕಂಡುಕೊಳ್ಳಿ, ನಂತರ ಅದಕ್ಕಾಗಿ ತಯಾರಾಗಿ, ಸ್ಪರ್ಧಾತ್ಮಕ ಮನೋಭಾವವನ್ನು ನಿರಂತರವಾಗಿ ಕಾಯ್ದುಕೊಂಡು ಸಲರಾಗಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ, ಅಧಯನ ಕೇಂದ್ರದ ಡೀನ್ ಪ್ರೊ.ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಗಣೇಶ್ ಕೆ.ಜಿ.ಕೊಪ್ಪಲ್, ಸಿzಶ್ ಹೊನ್ನೂರ್ ಇದ್ದರು.