ಮೈಸೂರು: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರು ದಸರಾವನ್ನು ಅಚ್ಚುಕಟ್ಟಾಗಿ, ಸರಾಳವಾಗಿ ಆಯೋಜಿಸಲಾಗಿತ್ತು, ಸರಳ ದಸರಾದಲ್ಲಿ ಸಂಭ್ರಮದಿಂದ ಪಾಲ್ಗೊಂಡು, ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡದಂತೆ ಶಾಂತಿಯುತವಾಗಿ ನಡೆಸಿಕೊಟ್ಟ ಸಮಸ್ತ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದಗಳನ್ನು ತಿಳಿಸಿದ್ದಾರೆ.
ದಸರಾ ಉತ್ಸವವನ್ನು ಸುವ್ಯವಸ್ಥಿತವಾಗಿ ಆಯೋಜಿಸುವಲ್ಲಿ ಕೆಲಸ ಮಾಡಿದ ಎಲ್ಲಾ ಅಧಿಕಾರಿಗಳಿಗೆ, ರಕ್ಷಣಾ ಸಿಬ್ಬಂದಿಗಳಿಗೆ, ಜಿಲ್ಲಾಡಳಿತ, ದಸರಾ ಸಮಿತಿ, ಖಾಸಗಿ ಸಂಘ ಸಂಸ್ಥೆಗಳು ಹೀಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಬುಧವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.