Thursday, April 3, 2025
Google search engine

Homeಸಿನಿಮಾಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ

ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಕಿಚ್ಚ ಸುದೀಪ್ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ಮ್ಯಾಕ್ಸ್’ ಸಿನಿಮಾ ಇಂದು (ಡಿಸೆಂಬರ್​ 25) ರಾಜ್ಯಾದ್ಯಂತ ಬಿಡುಗಡೆ ಆಗಿದೆ.

ಮಾಸ್ ಅವತಾರದಲ್ಲಿ ಸುದೀಪ್​ ಅವರು ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ. ಈ ಚಿತ್ರದಲ್ಲಿನ ಆ್ಯಕ್ಷನ್ ಸೀನ್​ಗಳನ್ನು ನೋಡಿ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ‘ಮ್ಯಾಕ್ಸ್’ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸೋಶಿಯಲ್ ಮೀಡಿಯಾ ಮೂಲಕ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ.

‘ಮ್ಯಾಕ್ಸ್’ ಸಿನಿಮಾದಿಂದ ಜನರಿಗೆ ಮುಖ್ಯವಾಗಿ ಸಿಗುವುದು ಆ್ಯಕ್ಷನ್. ಹೊಡಿ-ಬಡಿ ದೃಶ್ಯಗಳಿಗೆ ಈ ಸಿನಿಮಾದಲ್ಲಿ ಯಾವುದೇ ಕೊರತೆ ಇಲ್ಲ. ಸುದೀಪ್ ಅವರನ್ನು ಬಹಳ ದಿನಗಳ ಬಳಿಕ ಇಷ್ಟೊಂದು ಮಾಸ್ ಗೆಟಪ್​ನಲ್ಲಿ ನೋಡಿ ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದಾರೆ. ಸುದೀಪ್ ಅವರ ಅಭಿನಯಕ್ಕೆ ಮೆಚ್ಚುಗೆ ಕೇಳಿಬರುತ್ತಿದೆ.

ಈ ಸಿನಿಮಾ ನೋಡುವಾಗ ಕಿಂಚಿತ್ತೂ ಬೋರ್​ ಆಗಲ್ಲ ಎಂದು ಸುದೀಪ್ ಅಭಿಮಾನಿಗಳು ಹೇಳಿದ್ದಾರೆ. ಕತೆ ತುಂಬ ವೇಗವಾಗಿ ಸಾಗುವುದರಿಂದ ಜನರಿಗೆ ಇಷ್ಟ ಆಗುತ್ತಿದೆ. ಇದು ಸುದೀಪ್ ಅವರ ಒನ್​ ಮ್ಯಾನ್​ ಶೋ ಕೂಡ ಹೌದು. ಪಕ್ಕಾ ಅಭಿಮಾನಿಗಳಿಗಾಗಿ ‘ಮ್ಯಾಕ್ಸ್’ ಮೂಡಿಬಂದಿದೆ. ಸೂಪರ್ ಹಿಟ್ ಆಗಲಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.

ಚಿತ್ರಮಂದಿರದಲ್ಲಿ ‘ಮ್ಯಾಕ್ಸಿಮಮ್ ಮಾಸ್​..’ ಹಾಡು ಬಂದಾಗ ಜನರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸೆಲೆಬ್ರೇಷನ್ ಜೋರಾಗಿದೆ ಎಂದು ಅಭಿಮಾನಿಗಳು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಅನೇಕರು ಸಿನಿಮಾಗೆ ಪಾಸಿಟಿವ್ ವಿಮರ್ಶೆ ನೀಡುತ್ತಿದ್ದಾರೆ.

ಮೊದಲ ದಿನ ‘ಮ್ಯಾಕ್ಸ್’ ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿದೆ. ಬಹುತೇಕ ಶೋಗಳ ಟಿಕೆಟ್​ಗಳು ಸೋಲ್ಡ್​ ಔಟ್ ಆಗಿವೆ. ಇದಕ್ಕಾಗಿ ಸಿನಿಪ್ರಿಯರು ಅಭಿನಂದನೆ ತಿಳಿಸುತ್ತಿದ್ದಾರೆ. ಕ್ರಿಸ್​ಮಸ್​ ಮತ್ತು ವೀಕೆಂಡ್​ ರಜೆ ಇರುವುದರಿಂದ ಈ ಚಿತ್ರ ಉತ್ತಮ ಕಲೆಕ್ಷನ್ ಮಾಡುವ ಸೂಚನೆ ಸಿಕ್ಕಿದೆ.

ತಾಂತ್ರಿಕವಾಗಿಯೂ ‘ಮ್ಯಾಕ್ಸ್’ ಉತ್ತಮವಾಗಿ ಮೂಡಿಬಂದಿದೆ. ಮುಖ್ಯವಾಗಿ ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತಕ್ಕೆ ಮೆಚ್ಚುಗೆ ಸಿಗುತ್ತಿದೆ. ಅದೇ ರೀತಿ, ಶೇಖರ್​ ಚಂದ್ರ ಅವರ ಛಾಯಾಗ್ರಹಣ ಕೂಡ ಹೈಲೈಟ್ ಆಗಿದೆ. ಉಗ್ರಂ ಮಂಜು ಅವರಿಗೆ ಸುದೀಪ್ ಜೊತೆ ಉತ್ತಮ ಸ್ಕ್ರೀನ್​ ಸ್ಪೇಸ್ ಸಿಕ್ಕಿದೆ.

ಕೆಲವು ಪ್ರೇಕ್ಷಕರಿಂದ ನೆಗೆಟಿವ್ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಕಥೆಯಲ್ಲಿ ಇನ್ನಷ್ಟು ಹೊಸತನ ಬೇಕಿತ್ತು. ಆ್ಯಕ್ಷನ್ ಹೊರತಾಗಿ ಈ ಸಿನಿಮಾದಲ್ಲಿ ಬೇರೆ ಏನೂ ಇಲ್ಲ ಎಂದು ಕೂಡ ಕೆಲವರು ಹೇಳಿದ್ದಾರೆ. ಒಟ್ಟಾರೆ ಸೋಶಿಯಲ್ ಮೀಡಿಯಾದಲ್ಲಿ ‘ಮ್ಯಾಕ್ಸ್’ ಸಿನಿಮಾದ ಬಗ್ಗೆ ಟಾಕ್​ ಜೋರಾಗಿದೆ.

RELATED ARTICLES
- Advertisment -
Google search engine

Most Popular