ತುಮಕೂರು: ಸಾಲಬಾಧೆಗೆ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಆರೋಪಿಗಳಾದ ಖಲಂದರ್(45) ಪತ್ನಿ ಜರೀನಾ(38) ನ್ಯಾಯಾಂಗ ಬಂಧನಕ್ಕೆ ಒಳಗಾದವರು.
ಕಳೆದ ಭಾನುವಾರ ಸದಾಶಿವನಗರದ ಬಾಡಿಗೆ ಮನೆಯಲ್ಲಿ ಗರೀಬ್ ಸಾಬ್ ದಂಪತಿ ಸಾವಿಗೆ ಶರಣಾಗಿದ್ದರು. ಒಟ್ಟು ಐವರು ಆರೋಪಿಗಳ ಹೆಸರನ್ನು ಡೆತ್ ನೋಟಿನಲ್ಲಿ ಮೃತ ಗರೀಬ್ ಸಾಬ್ ಬರೆದಿದ್ದರು.
ಪ್ರಕರಣದಲ್ಲಿ ಖಲಂದರ್’ನ ಮಕ್ಕಳಾದ ಶಹಬಾಜ್, ಇಬ್ಬರು ಬಾಲಕಿಯರಿಗೆ ಕೋರ್ಟ್ ರಿಲೀಫ್ ನೀಡಿದೆ.