Saturday, April 5, 2025
Google search engine

Homeಅಪರಾಧಕಾನೂನುಆತ್ಮಹತ್ಯೆ ಕೇಸ್‌ : ಶಾಸಕ ಪೊನ್ನಣ್ಣ ಮತ್ತು ವಿನಯ್‌ ಸೋಮಯ್ಯ ವಾಟ್ಸಪ್‌ ಚಾಟ್‌ ಬಹಿರಂಗ

ಆತ್ಮಹತ್ಯೆ ಕೇಸ್‌ : ಶಾಸಕ ಪೊನ್ನಣ್ಣ ಮತ್ತು ವಿನಯ್‌ ಸೋಮಯ್ಯ ವಾಟ್ಸಪ್‌ ಚಾಟ್‌ ಬಹಿರಂಗ

ಮೈಸೂರು: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಶಾಸಕ ಪೊನ್ನಣ್ಣ ಮತ್ತು ವಿನಯ್‌ ಸೋಮಯ್ಯ ವಾಟ್ಸಪ್‌ ಚಾಟ್‌ ಬಹಿರಂಗವಾಗಿದೆ.

ಜನವರಿಯಲ್ಲಿ ಪೊನ್ನಣ್ಣಗೆ ವಿನಯ್ ಸೋಮಯ್ಯ ಮೆಸೇಜ್‌ ಮಾಡಿದ್ದರು. ಕೊಡಗಿನ ಸಮಸ್ಯೆ, ಸಲಹೆ, ಸೂಚನೆಗಳು ಎಂಬ ವಾಟ್ಸಪ್‌ ಗ್ರೂಪ್‌ನಲ್ಲಿ ಪೊನ್ನಣ್ಣ ಮತ್ತು ವಿನಯ್ ಸೋಮಯ್ಯ ಇಬ್ಬರೂ ಸದಸ್ಯರಾಗಿದ್ದರು. ಆ ವಾಟ್ಸಪ್‌ ಗ್ರೂಪ್‌ನಲ್ಲಿ ಬಂದ ಒಂದು ಆಡಿಯೋ ಡಿಲೀಟ್ ಮಾಡಿಸುವಂತೆ ವೈಯಕ್ತಿಕವಾಗಿ ವಿನಯ್ ಸೋಮಯ್ಯ ಮೆಸೇಜ್‌ ಮಾಡಿದ್ದರು.

ಆಡಿಯೋ ಕಳಿಸಿದವರ ಮೇಲೆ ಕ್ರಮ ಕೈಗೊಳ್ಳುವ ಅರ್ಹತೆ ಇಲ್ವಾ ಎಂದು ಶಾಸಕ ಪೊನ್ನಣ್ಣರನ್ನು ವಿನಯ್ ಪ್ರಶ್ನಿಸಿದ್ದ. ಅದಕ್ಕೆ, ‘ನಾನು ಸಾವಿರ ಗ್ರೂಪ್‌ನಲ್ಲಿದ್ದೇನೆ. ಎಲ್ಲಾ ನೋಡಿ ಡಿಲೀಟ್ ಮಾಡೋದು ನನ್ನ ಕೆಲಸ ಅಲ್ಲ. ಯೋಚನೆ ಮಾಡಿ ಮೆಸೇಜ್ ಮಾಡಿ. ರಸ್ತೆ, ನೀರು, ಅಭಿವೃದ್ಧಿ ಬಗ್ಗೆ ಕೇಳಿ’ ಎಂದು ಆ ಮೆಸೇಜ್‌ಗೆ ಶಾಸಕರು ರಿಪ್ಲೈ ಮಾಡಿದ್ದರು.

ಅದಕ್ಕೆ ಶಾಂತಿ ಸುವ್ಯವಸ್ಥೆ ಕಾಪಾಡುವುದು ಜನಪ್ರತಿನಿಧಿ ಕೆಲಸ ಅಲ್ಲ ಎಂಬುದು ಈಗ ಗೊತ್ತಾಯಿತು. ನಿಮಗೆ ಹೇಳಿ ಏನೂ ಪ್ರಯೋಜನ ಇಲ್ಲ. Will not disturb any more on this ಎಂದು ವಿನಯ್ ರಿಪ್ಲೈ ಬರೆದಿದ್ದರು.

RELATED ARTICLES
- Advertisment -
Google search engine

Most Popular