ಕೆ.ಆರ್.ನಗರ: ಕೆ.ಆರ್.ನಗರ ಲೋಕೋಪಯೋಗಿ ಇಲಾಖೆಯ ನೂತನ ಎಇಇ ಯಾಗಿ ಸುಮಿತಾ ಬಸವರಾಜು ಅಧಿಕಾರ ಸ್ವೀಕಾರ ಮಾಡಿದರು.
ತುಮಕೂರು ಗ್ರಾಮಾಂತರ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಎಇಇ ಯಾಗಿದ್ದ ಸುಮಿತಾ ಅವರನ್ನು ಸರ್ಕಾರ ಇಲ್ಲಿಗೆ ವರ್ಗಾವಣೆ ಮಾಡಿದೆ.
ಪ್ರಭಾರ ಎಇಇ ಬೋರಯ್ಯ ಅವರಿಂದ ಬುಧವಾರ ಅಧಿಕಾರ ಸ್ವೀಕಾರ ಮಾಡಿದರು.
ಈ ಸಂದರ್ಭದಲ್ಲಿ ಇಂಜಿನಿಯರ್ ಗಳಾದ ಸಿದ್ದೇಶ್ವರ ಪ್ರಸಾದ್ , ಚಂದನ್, ಕೃತಿ,ಅಭಿಷೇಕ್,ಇಸ್ಮಾಯಿಲ್, ಮ್ಯಾನೇಜರ್ ಸಿ.ಜೆ.ಅರುಣ್ ಕುಮಾರ್ ಮತ್ತಿತರರು ಹಾಜರಿದ್ದರು.