Wednesday, April 30, 2025
Google search engine

Homeರಾಜ್ಯ‌ಬೇಸಿಗೆ ರಜೆ; ಬೆಂಗಳೂರಿನಿಂದ ಬೆಳಗಾವಿ, ವಿಜಯಪುರಕ್ಕೆ ಹೆಚ್ಚುವರಿ ರೈಲುಗಳ ಟ್ರಿಪ್

‌ಬೇಸಿಗೆ ರಜೆ; ಬೆಂಗಳೂರಿನಿಂದ ಬೆಳಗಾವಿ, ವಿಜಯಪುರಕ್ಕೆ ಹೆಚ್ಚುವರಿ ರೈಲುಗಳ ಟ್ರಿಪ್

ಬೆಂಗಳೂರು: ಮೇ1 ರಿಂದ ಜಾರಿಗೆ ಬರುವಂತೆ ಈ ಕೆಳಕಂಡ ಮೂರು ರೈಲುಗಳ ವೇಗದ ಮಿತಿಯನ್ನು ಹೆಚ್ಚಿಸಿ ಮತ್ತು ಸಮಯವನ್ನು ಪುನರ್‌ ನಿಗದಿಪಡಿಸಿದೆ. ಕೆಎಸ್‌ ಆರ್‌ ಬೆಂಗಳೂರು- ಧಾರವಾಡ ಸಿದ್ದಗಂಗಾ ಡೈಲಿ ಎಕ್ಸ್‌ ಪ್ರೆಸ್‌ (ರೈಲಿನ ಸಂಖ್ಯೆ 12725), ಧಾರವಾಡ-ಕೆಎಸ್‌ ಆರ್‌ ಬೆಂಗಳೂರು ಸಿದ್ದಗಂಗಾ ಡೈಲಿ ಎಕ್ಸ್‌ ಪ್ರೆಸ್‌ (ರೈಲಿನ ಸಂಖ್ಯೆ 12726) ಮತ್ತು ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್‌ ಪ್ರೆಸ್‌ ( ರೈಲಿನ ಸಂಖ್ಯೆ 16239). 

ಬೇಸಿಗೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್​ ಮತ್ತು ಕಾನ್ಪುರ ಸೆಂಟ್ರಲ್‌ ನಡುವೆ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.

ರೈಲು ಸಂಖ್ಯೆ 04131 ಕಾನ್ಪುರ ಸೆಂಟ್ರಲ್‌ ನಿಲ್ದಾಣದಿಂದ ಪ್ರತಿ ಭಾನುವಾರ ರಾತ್ರಿ 7.50ಕ್ಕೆ ಹೊರಟು ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ ಅನ್ನು ಪ್ರತಿ ಮಂಗಳವಾರ ಸಂಜೆ 6.30ಕ್ಕೆ ತಲುಪಲಿದೆ. ಜೂನ್‌ 1ರ ವರೆಗೆ ಈ ರೈಲು ಸಂಚರಿಸಲಿದೆ.  ಹಿಂತಿರುಗುವಾಗ 04132 ನಂಬರ್‌ ನ ರೈಲು ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ ಅನ್ನು ಏಪ್ರಿಲ್‌ 30 ರಿಂದ ಜೂನ್‌  4 ರವರೆಗೆ  ಪ್ರತಿ ಬುಧವಾರ 7.10 ಕೆ ಹೊರಟು ಕಾನ್ಪುರ ಸೆಂಟ್ರಲ್‌ ನಿಲ್ದಾಣವನ್ನು ಪ್ರತಿ ಶುಕ್ರವಾರ ಮುಂಜಾನೆ  2 ಗಂಟೆಗೆ ತಲುಪಲಿದೆ.

ಎರಡೂ ಮಾರ್ಗಗಳಲ್ಲಿ ಫತೇಪುರ್.‌ ಪ್ರಯಾಗ್‌ ರಾಜ್‌, ಶಂಕರಗಢ, ಮಾಣಿಕ್‌ ಪುರ, ಸತ್ನಾ, ಕಾಂತಿ, ಜಬಲ್‌ ಪುರ, ಇಟರ್ಸಿ, ನಾಗ್ಪುರ, ಬಲ್ಲಾರ್‌ ಶಾ, ಸಿರ್ಪುರ್ ಕಾಗಜ್‌ ನಗರ್‌, ಬೆಲ್ಲಂಪಲ್ಲಿ, ಮಂಚಿರ್ಯಾಲ್‌, ವಾರಂಗಲ್‌, ಖಮ್ಮಂ, ವಿಜಯವಾಡ, ಚಿರಾಲಾ, ಒಂಗೊಲೆ, ನೆಲ್ಲೂರು, ಗುಡೂರು, ಪೆರಂಬೂರು, ಅರಕ್ಕೋಣಂ, ಕಾಟ್ಪಾಡಿ, ಜೊಲಾರ್‌ ಪೆಟ್ಟಿ, ಬಂಗಾರಪೇಟೆ ಮತ್ತು ಕೆ ಆರ್‌ ಪುರದಲ್ಲಿ ನಿಲುಗಡೆ ಮಾಡಲಿದೆ. ‌

ಬೇಸಿಗೆ ರಜೆ; ರೈಲುಗಳ ವಿಶೇಷ ಟ್ರಿಪ್:

ಬೇಸಿಗೆ ರಜೆಯಲ್ಲಿ ಹೆಚ್ಚಳವಾಗುವ  ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಪ್ರಯತ್ನವಾಗಿ ನೈಋತ್ಯ ರೈಲ್ವೆ ಹೆಚ್ಚುವರಿ ಟ್ರಿಪ್‌ ಗಳನ್ನು ನಡೆಸಲು ನಿರ್ಧರಿಸಿದೆ. ಬೆಂಗಳೂರಿನಿಂದ ಬೆಳಗಾವಿ, ಯಶವಂತಪುರದಿಂದ ವಿಜಯಪುರ ಮತ್ತು ಬೆಂಗಳೂರಿನಿಂದ ಮಧುರೈ ನಡುವೆ ಈ ವಿಶೇಷ ರೈಲುಗಳು ಸಂಚರಿಸಲಿವೆ. ಹಾಗಾದರೆ ಈ ವಿಶೇಷ ರೈಲುಗಳು ಸಂಚರಿಸುವ ದಿನಾಂಕ, ಸಮಯ ಮತ್ತು ಯಾವ ಸ್ಟೇಷನ್​ಗಳಲ್ಲಿ ನಿಲುಗಡೆ ಎಂಬ ವಿವಿರಗಳನ್ನು ನೋಡೋಣ.

1.ಬೆಂಗಳೂರು–ಬೆಳಗಾವಿ ನಡುವೆ  ವಿಶೇಷ ರೈಲು

ಎಸ್ಎಂವಿಟಿ (ನಂ 06551) ವಿಶೇಷ ಎಕ್ಸ್‌ ಪ್ರೆಸ್‌ ರೈಲು ಬೆಂಗಳೂರಿನಿಂದ ಬೆಳಗಾವಿ ನಡುವೆ ಸಂಚರಿಸಲಿದೆ. ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ ನಿಂದ ಏಪ್ರಿಲ್ 30 ಮತ್ತು ಮೇ 2 ರಂದು ಸಂಜೆ 7 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 7.30ಕ್ಕೆ ಬೆಳಗಾವಿಯನ್ನು ತಲುಪಲಿದೆ.

ಎಸ್ಎಂವಿಟಿ ವಿಶೇಷ ಎಕ್ಸ್‌ ಪ್ರೆಸ್‌ ರೈಲು (ನಂ. 06552) ಬೆಳಗಾವಿಯಿಂದ ಮೇ 1 ಮತ್ತು 3 ರಂದು ಸಂಜೆ 5.30ಕ್ಕೆ ಹೊರಟು, ಮರುದಿನ ಬೆಳಗಿನ ಜಾವ 4.30ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.

ಈ ರೈಲು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್.ಎಂ.ಎಂ. ಹಾವೇರಿ, ಎಸ್.ಎಸ್.ಎಸ್. ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

2. ಯಶವಂತಪುರ–ವಿಜಯಪುರ ಎಕ್ಸ್​ಪ್ರೆಸ್ ಟ್ರೈನ್

ಯಶವಂತಪುರ- ವಿಜಯಪುರ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06561) ರೈಲು ಯಶವಂತಪುರದಿಂದ ಏಪ್ರಿಲ್ 3 ರಂದು  ರಾತ್ರಿ 10 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 2.05 ಕ್ಕೆ ವಿಜಯಪುರ ತಲುಪಲಿದೆ. ಅಲ್ಲಿಂದ ಮೇ 1 ರಂದು ವಿಜಯಪುರ–ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06562) ಸಂಜೆ 7ಕ್ಕೆ  ಹೊರಟು, ಮರುದಿನ ಬೆಳಿಗ್ಗೆ 11.15 ಕ್ಕೆ ಯಶವಂತಪುರ ತಲುಪಲಿದೆ.

ಈ ರೈಲುಗಳು ಎರಡೂ ಮಾರ್ಗಗಳಲ್ಲಿ ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಬದಾಮಿ, ಬಾಗಲಕೋಟೆ ಮತ್ತು ಆಲಮಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿವೆ.

3. ಎಸ್ಎಂವಿಟಿ ಬೆಂಗಳೂರು–ಮಧುರೈ ವಿಶೇಷ ರೈಲು

ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು– ಮಧುರೈ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06521) ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ನಿಂದ ಏಪ್ರಿಲ್ 30 ರಂದು ಸಂಜೆ 7 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 6.15 ಕ್ಕೆ ಮಧುರೈ ತಲುಪಲಿದೆ.

ಮಧುರೈ– ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ವಿಶೇಷ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 06522) ಮಧುರೈಯಿಂದ ಮೇ 1, ರಂದು ಬೆಳಗ್ಗೆ 9 ಗಂಟೆಗೆ ಹೊರಟು, ಅದೇ ದಿನ ಸಂಜೆ 7.50 ಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರನ್ನು ತಲುಪಲಿದೆ.

ಈ ರೈಲುಗಳು ಉಭಯ ಮಾರ್ಗಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರು, ದಿಂಡಿಗುಲ್ ಮತ್ತು ಕೊಡೈಕೆನಾಲ್ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

RELATED ARTICLES
- Advertisment -
Google search engine

Most Popular