Sunday, April 20, 2025
Google search engine

Homeಸ್ಥಳೀಯಚಾಮರಾಜನಗರದಲ್ಲಿ ೩೦,೭೭೯ಮತಗಳಿಂದ ಸುನೀಲ್ ಬೋಸ್ ಮುನ್ನಡೆ

ಚಾಮರಾಜನಗರದಲ್ಲಿ ೩೦,೭೭೯ಮತಗಳಿಂದ ಸುನೀಲ್ ಬೋಸ್ ಮುನ್ನಡೆ

ಚಾಮರಾಜನಗರ : ಲೋಕಸಭಾ ಚುನಾವಣೆಯ ಮತ ಎಣಿಕೆ ಈಗಾಗಲೇ ನಡೆಯುತ್ತಿದ್ದು, ಆರಂಭಿ ಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜು ಹಿನ್ನಡೆ ಅನುಭವಿಸಿದ್ದಾರೆ. ಅಂಚೆ ಮತಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ ಬಿಜೆಪಿ ಅಭ್ಯರ್ಥಿ ನಿಧಾನವಾಗಿ ಹಿನ್ನಡೆ ಅನುಭವಿಸಲು ಆರಂಭಿಸಿದರು. ಚಾಮರಾಜನಗರ ಮೊದಲ ಮತ್ತು ಎರಡನೇ ಸುತ್ತಿನ ಎಣಿಕೆ ಮುಕ್ತಾಯವಾದ ಬಳಿಕ ಎರಡು ಸುತ್ತಿನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಗೆ ಮುನ್ನಡೆಯಲ್ಲಿದ್ದರು. ಮೊದಲನೇ ಸುತ್ತಿನಲ್ಲಿ ೫೨೬೩ ಮತ್ತು ಎರಡನೇ ಸುತ್ತಿನಲ್ಲಿ ೨೫೫೭ ಮುನ್ನಡೆಯಲ್ಲಿದ್ದರು.

ಮೂರನೇ ಸುತ್ತಿನ ಎಣಿಕೆಯಲ್ಲಿ ಒಟ್ಟು ೧,೧೯,೩೮೯ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ತಮ್ಮದಾಗಿಸಿಕೊಂಡರು. ಬಿಜೆಪಿ ಅಭ್ಯರ್ಥಿ ಬಾಲರಾಜು ೯೫,೮೫೬ ಮತಗಳನ್ನು ಪಡೆದರು.

೪ ನೇ ಸುತ್ತಿನಲ್ಲಿ ೨೪ ಸಾವಿರ ಲೀಡ್ ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್, ಆರಂಭದಿಂದಲೂ ಸತತವಾಗಿ ಮುನ್ನಡೆ ಮತ ಹೆಚ್ಚಿಸಿಕೊಳ್ಳುತ್ತಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ. ಈವರೆಗೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ ೧,೫೦,೭೦೧ ಮತ್ತು ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜುಗೆ ೧,೧೯,೯೨೨ ಮತಗಳು ಬಂದಿವೆ.

RELATED ARTICLES
- Advertisment -
Google search engine

Most Popular