ಉತ್ತರಪ್ರದೇಶ: ಆಗಸ್ಟ್ ತಿಂಗಳಿನಲ್ಲಿ ಆಕಾಶದಲ್ಲಿ ಅನೇಕ ಖಗೋಳ ಘಟನೆಗಳು ಸಂಭವಿಸಿವೆ. ಚಂದ್ರಯಾನ -೩ ಸಹ ದಕ್ಷಿಣ ಧ್ರುವದಲ್ಲಿ ಇಳಿದಿದೆ. ಇದಾದ ಬಳಿಕ ಚಂದ್ರನ ಬಗ್ಗೆ ಜನರಲ್ಲಿ ಸಾಕಷ್ಟು ಆಕರ್ಷಣೆ ಮೂಡಿದೆ. ಆಗಸ್ಟ್ ೩೦ ರ ಬುಧವಾರದಂದು ಅಂದರೆ ಇಂದು ಮತ್ತೊಂದು ಖಗೋಳ ಘಟನೆ ನಡೆಯಲಿದ್ದು, ರಾತ್ರಿಯಲ್ಲಿ ಆಕಾಶದಲ್ಲಿ ಸೂಪರ್ ಬ್ಲೂ ಮೂನ್ ಗೋಚರಿಸಲಿದೆ.
ಈ ದಿನ ಚಂದ್ರನು ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಾನೆ. ಚಂದ್ರನು ತನ್ನ ಸಾಮಾನ್ಯ ಗಾತ್ರಕ್ಕಿಂತ ಸುಮಾರು ೮ ಪ್ರತಿಶತದಷ್ಟು ದೊಡ್ಡದಾಗಿ ಕಾಣಿಸಿಕೊಳ್ಳುತ್ತಾನೆ ಎಂದು ಖಗೋಳಶಾಸ್ತ್ರಜ್ಞರು ಹೇಳುತ್ತಾರೆ. ಇದನ್ನು ಸೂಪರ್ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನವು ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ದಿನದಂದು ಭಕ್ತರು ಶಿವನಿಗೆ ರುದ್ರಾಭಿಷೇಕವನ್ನು ಮಾಡುತ್ತಾರೆ, ಆಗ ಅವರಿಗೆ ಲಾಭವಾಗುತ್ತದೆ ಎನ್ನುತ್ತಾರೆ.
ಚಂದ್ರನ ಕಕ್ಷೆ ಭೂಮಿಯ ಹತ್ತಿರಕ್ಕೆ ಬರುತ್ತದೆ. ಈ ವೇಳೆ, ಚಂದ್ರನ ಸರಾಸರಿ ಗಾತ್ರದ ಶೇ ೮ರಷ್ಟು ಮತ್ತು ಚಂದ್ರನ ಹೊಳಪಿನ ಶೇ ೧೬ರಷ್ಟು ಹೆಚ್ಚಿರುತ್ತದೆ. ಚಂದ್ರನ ಕಕ್ಷೆ ಸರಿಯಾದ ವೃತ್ತಕಾರದಲ್ಲಿಲ್ಲ. ಕೆಲವು ವೇಳೆ ಇದು ತನ್ನ ಕಕ್ಷೆಗಿಂತ ಭೂಮಿಗೆ ಹತ್ತಿರವಿರುತ್ತದೆ. ಹಳೆ ರೈತ ಪಂಚಾಂಗದ ಪ್ರಕಾರ ಪೂರ್ಣ ಚಂದ್ರ ಇಂದು ಆ. ೩೦ರಂದು ರಾತ್ರಿ ೯:೩೬ಕ್ಕೆ ಉಚ್ಛ್ರಾಯ ಸ್ಥಿತಿಯಲ್ಲಿ ಇರುತ್ತದೆ.
ನಾಸಾ ವರದಿಯಂತೆ, ಬ್ಲೂ ಮೂನ್‌ನಲ್ಲಿ ಎರಡು ವಿಧ. ಒಂದು ಮಾಸಿಕ, ಮತ್ತೊಂದು ಋತುಮಾನ ಆಧಾರಿತ. ಮಾಸಿಕ ಬ್ಲೂ ಮೂನ್ ಕ್ಯಾಲೆಂಡರ್ ತಿಂಗಳಲ್ಲಿನ ಎರಡು ಪೂರ್ಣ ಚಂದ್ರನ ಎರಡನೇ ಪೂರ್ಣ ಚಂದ್ರವಾಗಿದೆ. ಋತುಮಾನದ ಚಂದ್ರ ಎಂದರೆ ಖಗೋಳ ಋತುವಿನ ಮೂರನೇ ಹುಣ್ಣಿಮೆ.
ನೀವು ರಾತ್ರಿಯಲ್ಲಿ ಆಕಾಶ ವೀಕ್ಷಿಸಬಹುದು. ಚಂದ್ರನ ಆಕಾರ ಮತ್ತು ಹೊಳಪಿನ ಬದಲಾವಣೆಯನ್ನು ನಿಮ್ಮ ಕಣ್ಣುಗಳಿಂದ ಸುಲಭವಾಗಿ ನೋಡಬಹುದಾಗಿದೆ. ವಿಶೇಷ ಬೈನಾಕ್ಯುಲರ್‌ಗಳ ಮೂಲಕ ಈ ವಿದ್ಯಮಾನವನ್ನು ಹತ್ತಿರದಿಂದ ನೋಡಬಹುದು. ಇಲ್ಲವಾದಲ್ಲಿ ಗೋರಖ್‌ಪುರನ ವಾಸಿಗಳು ವೀರ್ ಬಹದ್ದೂರ್ ಸಿಂಗ್ ನಕ್ಷತ್ರ ಶಾಲೆ (ಪ್ಲಾನೆಟೋರಿಯಂ) ಭೇಟಿ ನೀಡಬಹುದು. ಇತರರು ಸ್ಥಳೀಯ ಅಥವಾ ಹತ್ತಿರದ ಪ್ಲಾನೆಟೋರಿಯಂಗೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ. ಈ ಹುಣ್ಣಿಮೆ ಅಥವಾ ಬ್ಲೂ ಮೂನ್ / ಸೂಪರ್ ಬ್ಲೂ ಮೂನ್ ಬಗ್ಗೆ ವಿವರವಾದ ಮಾಹಿತಿಯನ್ನು ಸಹ ಪಡೆಯಬಹುದು ಎಂದು ಖಗೋಳಶಾಸ್ತ್ರಜ್ಞ ಅಮರ್ ಪಾಲ್ ಸಿಂಗ್ ಅವರು ಹೇಳಿದರು.