ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ : ಬೆಕ್ಕರೆ ಪ್ರೀಮಿಯರ್ ಲೀಗ್ ಸೀಸನ್ – 1 ಕ್ರಿಕೆಟ್ ಟೂರ್ನಿಯಲ್ಲಿ ಬೆಕ್ಕರೆ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಯುಗಾದಿ ಹಬ್ಬದ ಪ್ರಯುಕ್ತ ಬೆಕ್ಕರೆ ಗ್ರಾಮದ ಹೊರವಲಯದ ಮೂರುರಮ್ಮ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮೂರು ದಿನ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ನವೀನ್ ನಾಯಕತ್ವದ ಬೆಕ್ಕರೆ ಸೂಪರ್ ಕಿಂಗ್ಸ್ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್ ಪಂದ್ಯದಲ್ಲಿ ರೋಹನ್ ಅಪ್ಪು ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಕ್ಕರೆ ತಂಡದ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಆಕರ್ಷಕ ಟ್ರೋಫಿ ಜೊತೆಗೆ ಆಟಗಾರರಿಗೆ ನೆನಪಿನ ಕಾಣಿಕೆ ಪಡೆದುಕೊಂಡಿತು, ರನ್ನರ್ ಆಫ್ ಆದ ರಾಯಲ್ ಚಾಲೆಂಜರ್ಸ್ ಬೆಕ್ಕರೆ ತಂಡ ಆಕರ್ಷಕ ಟ್ರೋಫಿ ಜೊತೆಗೆ ಆಟಗಾರರಿಗೆ ನೆನಪಿನ ಕಾಣಿಕೆ ಪಡೆದುಕೊಂಡಿತು, ಪ್ಲೇ ಆಫ್ ಹಂತ ತಲುಪಿದ್ದ ಬೆಕ್ಕರೆ ನೈಟ್ ರೈಡರ್ಸ್ ತಂಡ ಮೂರನೇ ಸ್ಥಾನ ಪಡೆದು ಟ್ರೋಫಿ ಹಾಗೂ ಆಟಗಾರರಿಗೆ ನೆನಪಿನ ಕಾಣಿಕೆ ಪಡೆದುಕೊಂಡಿತು, ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಹೆಚ್ಚು ವಿಕೆಟ್ ಪಡೆದಿದ್ದ ಬೆಕ್ಕರೆ ಇಂಡಿಯನ್ಸ್ ತಂಡದ ಸಚಿನ್ ಉತ್ತಮ ಬೌಲರ್, ಹೆಚ್ಚು ರನ್ ಗಳಿಸಿದ್ದ ಬೆಕ್ಕರೆ ನೈಟ್ ರೈಡರ್ಸ್ ತಂಡದ ನಾಯಕ ದರ್ಶನ್ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಗೆ ಭಾಜನರಾದರು, ಟೂರ್ನಿಯಲ್ಲಿ ಭಾಗವಹಿಸಿದ್ದ ಕಿಂಗ್ಸ್ ಇಲವೆನ್ ಬೆಕ್ಕರೆ, ಜೈ ಭೀಮ್ ಬಾಯ್ಸ್, ಬೆಕ್ಕರೆ ರಾಯಲ್ಸ್, ಬೆಕ್ಕರೆ ಇಂಡಿಯನ್ಸ್, ಬೆಕ್ಕರೆ ಟೈಟಾನ್ಸ್ ತಂಡದ ಆಟಗಾರರಿಗೆ ಮೆಡಲ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಗ್ರಾಮದ ನಿವೃತ್ತ ಇಂಜಿನಿಯರ್ ಪುಟ್ಟರಾಜು ಅವರು ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿ ಯುವಶಕ್ತಿ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಯಶಸ್ವಿಯಾಗಿ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದು ಉದಾಹರಣೆಯಾಗಿದೆ ಮುಂಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ಧಿ ವಿಚಾರದಲ್ಲಿಯೂ ಎಲ್ಲರೂ ಕೈಜೋಡಿಸುವ ಮೂಲಕ ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ಬೆಕ್ಕರೆ ಗ್ರಾಮದ ಇಂಜಿನಿಯರ್ ನಾಗರಾಜು, ಉದ್ಯಮಿ ಮಹದೇವ್, ಪ್ರಕಾಶ್, ಚಂದ್ರಶೇಖರ್, ರುಕ್ಮಂಗದಾಚಾರ್, ಗೋಪಾಲ್, ಸಾರಿಗೆ ಇಲಾಖೆಯ ಕುಮಾರ್, ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ, ಲೋಕೇಶ್, ಬಿ.ಬಿ ರವಿ ಹಾಗೂ ಎಲ್ಲ ತಂಡದ ಆಟಗಾರರು ಮತ್ತು ಗ್ರಾಮಸ್ಥರು ಇದ್ದರು.