ಮದ್ದೂರು: ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಮನ್ ಮುಲ್ ನಿಂದ ನಡೆದ ಕ್ಷೀರ ಸಂಜೀವಿನಿ ಹಂತ2 ಮತ್ತು 3ನೇ ಹಂತದ 5 ಹೈನು ರಾಸು ನಿರ್ವಹಣೆ ತರಬೇತಿ ಕಾರ್ಯಕ್ರಮವನ್ನು ಮನ್ ಮುಲ್ ನಿರ್ದೇಶಕಿ ರೂಪಾ, ಹಾಗೂ ನಿರ್ದೇಶಕ ಎಸ್ ಪಿ ಸ್ವಾಮಿ ಜಂಟಿಯಾಗಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ನಿರ್ದೇಶಕ ಎಸ್ ಪಿ ಸ್ವಾಮಿ, ಬೇಸಿಗೆಗಾಲ ಹಾಗೂ ಉಳಿದ ಸಂದರ್ಭದಲ್ಲಿ ಕೂಡ ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ನಿವು ಕೂಡ ಒಕ್ಕೂಟ ಬೆಳೆಯಲು ಸಹಕರಿಸಬೇಕು. ಹಾಲಿನ ಗುಣಮಟ್ಟವನ್ನು ಪರೀಕ್ಷಿಸಲು ಎಲ್ಲಾ ಸಂಘಗಳಿಗೂ ಒಕ್ಕೂಟದ ವತಿಯಿಂದ ನೀಡಲಾಗಿದ್ದು, ಗುಣಮಟ್ಟವನ್ನು ಕಾಯ್ದುಕೊಂಡು ಹಾಲು ಪೂರೈಕೆ ಮಾಡಿ ಎಂದರು.
ಬಳಿಕ ಮಾತನಾಡಿದ ನಿರ್ದೇಶಕಿ ರೂಪಾ ಹಾಲನ್ನು ಪೂರೈಕೆ ಮಾಡುವ ಎಲ್ಲಾ ತಾಯಂದಿರು ಹಸುಗಳನ್ನು ಯಾವ ರೀತಿ ನೋಡಿಕೊಳ್ಳಬೇಕು ಎಂದು ತರಬೇತಿ ಪಡೆದುಕೊಳ್ಳಬೇಕು.
ಹಸುಗಳನ್ನು ಬಿಸಿಲಿನಲ್ಲಿ ಎಲ್ಲೆಂದರಲ್ಲಿ ಕಟ್ಟಬ್ಯಾಡದು ಅವುಗಳಿಗೂ ಕೂಡ ಮನುಷ್ಯರ ರೀತಿ ನೋಡಿಕೊಳ್ಳಬೇಕು ಫ್ಯಾನ್ಗಳನ್ನ ಅಳವಡಿಕೆ ಮಾಡಬೇಕು, ನೀರಿನಿಂದ ಹಾಲಿನ ಕೆಚ್ಚಲು ತೊಳೆದ ಮೇಲೆ ಒಣ ಬಟ್ಟೆಯಿಂದ ಹೊರಸಬೇಕು ಹೀಗೆ ನೋಡಿಕೊಳ್ಳುವುದರ ಮೂಲಕ ಹಸುವಿನ ಆರೋಗ್ಯದ ಜೊತೆಗೆ ಗುಣಮಟ್ಟದ ಹಾಲನ್ನು ನಮ್ಮ ತಾಯಂದಿರು ನೋಡಿಕೊಳ್ಳಬೇಕು ಎಂದರು.
ಮೈಸೂರಿನಲ್ಲಿ ನಿಮಗೆ ಈ ತರಬೇತಿ ನೀಡಬೇಕಾಗಿತ್ತು ಆದರೆ ನೀವೆಲ್ಲರೂ ಕೂಡ ಅಲ್ಲಿಗೆ ಹೋಗಲು ಸಾಧ್ಯವಾಗದ ಹಿನ್ನೆಲೆ ಇಲ್ಲೇ ಒಕ್ಕೂಟದ ವತಿಯಿಂದ ಏರ್ಪಡಿಸಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಈ ವೇಳೆ ಮನ್ ಮುಲ್ ಒಕ್ಕೂಟದ ಅಧಿಕಾರಿಗಳು ಭಾಗವಹಿಸಿದರು.
ಮೈಸೂರಿನ ತರಬೇತಿ ಸಂಸ್ಥೆಯ ಸಂಘಮೇಷ ತರಬೇತಿಯನ್ನು ನಡೆಸಿಕೊಟ್ಟರು.