ಬೆಟ್ಟದಪುರ: ಸಂಗರಶೆಟ್ಟಳ್ಳಿ ಹಾಲು ಉತ್ಪಾದಕರ ಸಂಘವು 2022-23ನೇ ಸಾಲಿನಲ್ಲಿ ನಿವ್ವಳ ಲಾಭ ರೂ.1,74,143 ಲಕ್ಷ ರೂ ನಿವ್ವಳ ಲಾಭಗಳಿಸಿದೆ ಎಂದು ಮೈಮುಲ್ ವಿಸ್ತರಣಾಧಿಕಾರಿ ಸತೀಶ್ ಹೇಳಿದರು.
ಬೆಟ್ಟದಪುರ ಸಮೀಪದ ಸಂಗರಶೆಟ್ಟಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶನಿವಾರ ಆಯೋಜಿಸಿದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಉತ್ಪಾದಕರು ಹೆಚ್ಚಿನ ಆದಾಯ ಪಡೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಹಾಲಿಗೆ ಕಲಬೆರಕೆ ಮಾಡಬಾರದು. ಮೈಮುಲ್ ವತಿಯಿಂದ ದೊರೆಯುವಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕಾಳೇಗೌಡ, ಉಪಾಧ್ಯಕ್ಷೆ ಜ್ಯೋತಿ ಮಂಜುನಾಥ್, ನಿರ್ದೇಶಕರಾದ ರಾಧಾಕೃಷ್ಣ, ಎಸ್.ಕೆ ಪ್ರಕಾಶ್, ಎಸ್.ಬಿ ಸೋಮಚಾರಿ, ಎಸ್.ಪಿ ಸತೀಶ್, ಸಣ್ಣೇಗೌಡ, ಎಚ್.ಕೆ ಅನಂತ, ಮಹದೇವಿ, ಎಸ್.ಬಿ ಕುಮಾರ, ಎಸ್.ಎನ್ ಅನಿಲ್ ಕುಮಾರ್, ಕಾರ್ಯದರ್ಶಿ ಎಸ್.ಎಸ್ ಮಹೇಶ್, ಸಿಬ್ಬಂದಿ ವೈ.ಎಸ್ ನವೀನ್ ಕುಮಾರ್ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.