Tuesday, April 15, 2025
Google search engine

Homeಸ್ಥಳೀಯಕಾಂಗ್ರೆಸ್ ಬೆಂಬಲಿಸಿ, ಎಂ. ಲಕ್ಷ್ಮಣ್ ಗೆಲ್ಲಿಸಿ : ಕೆ. ಮರೀಗೌಡ

ಕಾಂಗ್ರೆಸ್ ಬೆಂಬಲಿಸಿ, ಎಂ. ಲಕ್ಷ್ಮಣ್ ಗೆಲ್ಲಿಸಿ : ಕೆ. ಮರೀಗೌಡ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್‌ರವರನ್ನು ಬೆಂಬಲಿಸುವ ಮೂಲಕ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮುಡಾ ಅಧ್ಯಕ್ಷ ಕೆ. ಮರೀಗೌಡ ಮನವಿ ಮಾಡಿದರು.

ರಾಮಕೃಷ್ಣನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಪರವಾಗಿ ಮನೆಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು ಕಳೆದ ೧೦ ವರ್ಷಗಳ ಅವಧಿಯಲ್ಲಿ ಬರೀ ಸುಳ್ಳು ಹೇಳಿಕೊಂಡು ಜನರನ್ನು ಮರುಳು ಮಾಡುತ್ತಿರುವ ಬಿಜೆಪಿಯನ್ನು ಜನರು ತಿರಸ್ಕರಿಸಬೇಕು. ಮೋದಿ ಸರ್ಕಾರ ದಲಿತರು, ಬಡವರು, ಶೋಷಿತರು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ೨೦ ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರು. ಆದರೆ, ಅವರ ಅಧಿಕಾರಾವಧಿಯಲ್ಲಿ ಶೇ.೪೪ ರಷ್ಟು ನಿರುದ್ಯೋಗ ದಾಖಲಾಗಿದೆ ಇದಕ್ಕಾಗಿ ಅವರಿಗೆ ಮತ ನೀಡಬೇಕೆ ಎಂಬುದನ್ನು ಜನರು ಆಲೋಚಿಸಬೇಕು.

ನಮ್ಮದು ಭ್ರಷ್ಟಾಚಾರ, ಕಳಂಕರಹಿತ ಸರ್ಕಾರ ಎಂದು ಹೇಳುತ್ತಾರೆ. ಆದರೆ ಭ್ರಷ್ಢಾಚಾರವನ್ನೇ ಕಾನೂನುಬದ್ಧಗೊಳಿಸಲು ಹೊರಟಿದ್ದು ಇದೇ ಮೋದಿ. ಬಿಜೆಪಿಯ ಚುನಾವಣಾ ಬಾಂಡ್ ಹಗರಣ ಇದಕ್ಕೆ ಸಾಕ್ಷಿ ಬಾಂಡ್ ಪಡೆದವರಲ್ಲಿ ಅನೇಕರು ಇಡಿ ಹಾಗೂ ಐಟಿ ದಾಳಿಗೆ ಒಳಗಾದವರು. ಉದ್ಯಮಿಗಳು ಹಾಗೂ ಶ್ರೀಮಂತರನ್ನು ಹೆದರಿಸಿ ಅವರಿಂದ ಹಣ ಸುಲಿಗೆ ಮಾಡುತ್ತಿರುವ ಮೋದಿ ಸರ್ಕಾರ ಹಫ್ತಾ ವಸೂಲಿ ಸರ್ಕಾರ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವ ನಿಧಿ ಹೀಗೆ ಪಂಚ ಯೋಜನೆಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಹಾಲಕ್ಷ್ಮಿ ಯೋಜನೆ ಮೂಲಕ ಪ್ರತೀ ಕುಟುಂಬದ ಓರ್ವ ಮಹಿಳೆಗೆ ೧ ಲಕ್ಷ ರೂ. ಹಣ ದೊರಕಲಿದೆ. ರೈತರ ಸಾಲ ಮನ್ನಾ ಆಗಲಿದೆ. ಹೀಗಾಗಿ ಜನರು ನಮ್ಮ ಪಕ್ಷದ ಮೈಸೂರು-ಕೊಡಗು ಕ್ಷೇತ್ರದ ಎಂ. ಲಕ್ಷ್ಮಣ್ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಬೇಕು ಎಂದು ಕೆ. ಮರೀಗೌಡ ಅವರು ಮನವಿ ಮಾಡಿದರು.

ಕಳೆದ ೧೦ ವರ್ಷಗಳಿಂದ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ನನ್ನೊಡನೆ ಹೆಜ್ಜೆ ಹಾಕಿದ್ದೀರಿ. ಪಕ್ಷ ಕಟ್ಟಲು ತಮ್ಮದೇ ಆದ ಕೊಡುಗೆ ನೀಡಿದ್ದೀರಿ. ಇದೀಗ ಅನಾರೋಗ್ಯದ ಕಾರಣ ನಾನು ಪ್ರತೀ ಗ್ರಾಮಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಕ್ಷೇತ್ರದ ಪದಾಧಿಕಾರಿಗಳು ಒಗ್ಗಟ್ಟಿನಿಂದ ದುಡಿದು ನಮ್ಮ ಪಕ್ಷದ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ. ರವಿ, ಚಂದ್ರು, ಮೇರಿ, ಕೃಷ್ಣಪ್ಪ, ರವಿ, ರೇಖಾ ಮತ್ತಿತ್ತರು ಹಾಜರಿದ್ದರು.

RELATED ARTICLES
- Advertisment -
Google search engine

Most Popular