Friday, April 4, 2025
Google search engine

Homeರಾಜ್ಯಸುದ್ದಿಜಾಲಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಎನ್‌ಡಿಎ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಿ: ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್

ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಎನ್‌ಡಿಎ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಿ: ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಜ.೧೯ರಂದು ನಡೆಯಲಿರುವ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ನಾವು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್ ಹೇಳಿದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಗೆ ಸಾಮಾನ್ಯ ಕ್ಷೇತ್ರದಿಂದ ಪುರಸಭೆ ಸದಸ್ಯ ಉಮೇಶ್ ಮತ್ತು ಕೆ.ಆರ್.ನಗರ ಸಾಲಗಾರರ ಕ್ಷೇತ್ರದಿಂದ ಎಲ್.ಎಸ್.ಮಹೇಶ್ ಅವರು ನಾಮಪತ್ರ ಸಲ್ಲಿಸಿದ ನಂತರ ಶುಭಕೋರಿ ಮಾತನಾಡಿದ ಅವರು ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿಯವರು ರೈತರ ಕೆಲಸ ಸಮರ್ಪಕವಾಗಿ ಮಾಡುತ್ತಿಲ್ಲವೆಂಬ ವ್ಯಾಪಕವಾಗಿ ದೂರುಗಳಿವೆ ಎಂದರು.

ಇದರ ಜತೆಗೆ ರೈತ ಸದಸ್ಯರಿಗೆ ಸಾಲ ವಿತರಣೆ ಮಾಡುವಾಗ ತಾರತಮ್ಯ ಮಾಡುವುದರೊಂದಿಗೆ ಕೆಲವು ನಿರ್ದೇಶಕರು ರೈತರಿಂದ ಹಣ ಪಡೆಯುತ್ತಿದ್ದಾರೆಂದು ರೈತರೇ ಹೇಳುತ್ತಿದ್ದು ಇದಕ್ಕೆ ಅಂತ್ಯ ಹಾಡಬೇಕಾದರೆ ಮತದಾರ ಷೇರುದಾರ ರೈತ ಸದಸ್ಯರು ಎನ್‌ಡಿಎ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕು ಎಂದು
ಕೋರಿದರು.

ಕ್ಷೇತ್ರಧಾದ್ಯಂತ ಮೈತ್ರಿ ಕೂಟದ ಅಭ್ಯರ್ಥಿಗಳನ್ನು ಬೆಂಬಲಿಸಲು ರೈತರು ನಿರ್ಧಾರ ಮಾಡಿದ್ದು ನಾವು ಪ್ರಚಾರಕ್ಕೆ ಹೋದಾಗ ಅವರುಗಳು ಪೂರಕವಾಗಿ ಸ್ಪಂದಿಸುತ್ತಿದ್ದು ಇದು ಗೆಲುವಿನ ನಂಬಿಕೆಯನ್ನು ನೂರ್ಮಡಿಗೋಳಿಸಿದ್ದು
ಎರಡು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ರೈತ ಸದಸ್ಯರ ಮನೆಗಳಿಗೆ ತೆರಳಿ ಬೆಂಬಲ ಕೋರಬೇಕೆಂದು ತಿಳಿಸಿದರು.

ಜಿ.ಪಂ. ಮಾಜಿ ಸದಸ್ಯ ಅಮಿತ್.ವಿ.ದೇವರಹಟ್ಟಿ ಮಾತನಾಡಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಸಹಕಾರ ಸಂಘಗಳಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳನ್ನು ಚುನಾವಣೆಯಲ್ಲಿ ಸ್ಪರ್ದಿಸದಂತೆ ಹುನ್ನಾರ ನಡೆಸಿ ಎರಡು ಪಕ್ಷಗಳನ್ನು ಮುಗಿಸುವ ಕೆಟ್ಟ ರಾಜಕಾರಣ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಡಿ.ಕಾಂತರಾಜು, ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಸಂತೋಷ್‌ಗೌಡ, ಕೆ.ಎಲ್.ಜಗದೀಶ್, ಮಾಜಿ ಸದಸ್ಯ ಉಮಾಶಂಕರ್, ಬಿಜೆಪಿ ಮುಖಂಡ ಹೆಚ್.ವಿ.ಅನಿಲ್, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಳಿಕಿಟ್ಟಿ, ಸಾಲಿಗ್ರಾಮ ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್
ರಾಜಣ್ಣ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಜೆಡಿಎಸ್ ಮುಖಂಡರಾದ ರುದ್ರೇಶ್(ಅಯ್ಯ), ರಾಮನಾಥ್, ಸುರೇಶ್, ವಿಕಾಶ್, ಬಿ.ರಮೇಶ್, ಸಿ.ಜೆ.ಆನಂದ್, ಹೆಚ್.ಪಿ.ಶಿವಣ್ಣ, ಕೃಷ್ಣಶೆಟ್ಟಿ, ಎಂ.ಕೆ.ಮಹದೇವ್, ಕೆ.ಟಿ.ತ್ಯಾಗರಾಜು, ತಂದ್ರೆಮoಜು, ಜೆಲ್ಲಿರಾಜು, ಹೆಚ್.ಕೆ.ಕೀರ್ತಿ, ರಾಧಾಕೃಷ್ಣ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular