ಅಂಧರಿಗೆ ಮಾಹೇಶ್ವರಿ ಶಾಲೆ ಬೆಳಕು
ವರದಿ : ಸ್ಟೀಫನ್ ಜೇಮ್ಸ್.
ಅವರೆಲ್ಲ ದೃಷ್ಟಿಹೀನರು, ಬೇರೆಯವರ ಆಸರೆಯಿಲ್ಲದೇ ಜೀವನವೇ ಇಲ್ಲ ಎನ್ನುವಂತಹ ಸ್ಥಿತಿಯಲ್ಲಿ ಬೆಳಗಾವಿಯ ಮಹೇಶ್ವರ ಅಂಧಮಕ್ಕಳ ಶಾಲೆ ಸೇರಿ, ನ್ಯೂನತೆ మిరి ಬೆಳೆದವರು. ಭಗವಂತನೊಲುಮೆಯ ದಿವ್ಯದೃಷ್ಟಿಯಿಂದ ತಾವೂ ಕಲಿತು ಇತರರಿಗೂ ಹಲವು ಮೌಲ್ಯಗಳನ್ನು ಕಲಿಸಿದವರು. ಅದರಲ್ಲಿ ಹಲವರು ದೇಶಾದ್ಯಂತ ವಿವಿಧ ಉನ್ನತ ಸ್ಥಾನಗಳಲ್ಲಿದ್ದಾರೆ. ತಮಗೆ ಕಲಿಸಿದ ಶಾಲೆಗೂ ಆಸರೆಯಾಗಿದ್ದಾರೆ.ಬೆಳಗಾವಿ ಅಂಧರ ಸೇವಾ ಸಂಸ್ಥೆಯಡಿ ನಡೆಯುತ್ತಿರುವ ಮಾಹೇಶ್ವರಿ ಅಂಧಮಕ್ಕಳ ಶಾಲೆಯ ಹಿರಿಯ ವಿದ್ಯಾರ್ಥಿಗಳ ಯಶೋಗಾಥೆ ಬಹುದೊಡ್ಡದು. 52 ವರ್ಷಗಳ ಹಿಂದೆ 5 ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಪ್ರಸ್ತುತ 117 ವಿದ್ಯಾರ್ಥಿಗಳು ಓದುತ್ತಿದ್ದಾರೆ. 14 ಶಿಕ್ಷಕರು ಸರ್ಕಾರದ ಅನುದಾನದಡಿ, 16 ಶಿಕ್ಷಕರು ಸಂಸ್ಥೆಯ ವೇತನದಡಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಕಲಿತ ನಾಲ್ವರು ವಿದ್ಯಾರ್ಥಿಗಳು ಇಲ್ಲೇ ಶಿಕ್ಷಕರಾಗಿದ್ದಾರೆ. ಸರ್ಕಾರ ಇಲ್ಲಿನ ವಿದ್ಯಾರ್ಥಿಗಳಿಗೆ ತಿಂಗಳಿಗೆ ತಲಾ 1750 ರೂ. ನಿರ್ವಹಣಾ ವೆಚ್ಚ ನೀಡುತ್ತಿದೆ.

ವಾಸ್ತವವಾಗಿ ಅಂದಾಜು 5000 ซ. ಖರ್ಚಾಗುತ್ತದೆ. ಅದನ್ನು ದಾನಿಗಳ ಸಹಾಯದಿಂದ ಸರಿದೂಗಿಸಿಕೊಂಡು ಹೋಗಲಾಗುತ್ತಿದೆ. ಇಲ್ಲಿ ಕಲಿತ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಹುದ್ದೆಯಲ್ಲಿದ್ದು, ಕಲಿತ ಶಾಲೆಗೆ ಆಸರೆ ಯಾಗಿ ನಿಂತಿದ್ದಾರೆ ಶಾಲೆಯ ಆವರಣದಲ್ಲಿ ಲೂಯಿ ಬೈಲ್ ಪ್ರತಿಮೆಯನ್ನು ಹಿರಿಯ ವಿದ್ಯಾರ್ಥಿಗಳ ಕೊಡುಗೆಯಿಂದ ನಿರ್ಮಿಸಲಾಗಿದೆ.ಜನವರಿ 4ಇಂದು ವಿಶ್ವ ಬೈಲ್ ದಿನ ವಿವಿಧ ಪ್ರಶಸ್ತಿಕಳೆದ ವರ್ಷ ಈ ಶಾಲೆಯ ವಿದ್ಯಾರ್ಥಿ ಸಿದ್ಧಪ್ಪ ಸುತಗಟ್ಟಿಗೆ ಸಂಗೀತ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ಕಲಾಶ್ರೀ ಪ್ರಶಸ್ತಿ ಲಭಿಸಿದೆ. 1996ರಲ್ಲಿ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಶಾಲೆ ಪುರಸ್ಕಾರ, ಎನ್.ವಜ್ರಕುಮಾರ ಅಭಿನಂದನಾ ಪ್ರಶಸ್ತಿ, ಕಳೆದ 8 ವರ್ಷಗಳಿಂದ ಎಸ್ಎಸ್ಎಲ್‌ಸಿ ಫಲಿತಾಂಶಕ್ಕಾಗಿ ಪ್ರೌಢಶಿಕ್ಷಣ ಮಂಡಳಿಯಿಂದ ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ಲಭಿಸಿದೆ.ಸರ್ಕಾರದ ಅನುದಾನಿತ ಶಾಲೆಯಾಗಿ ದ್ದರೂ ಇನ್ನೂ ಕನಿಷ್ಠ 8 ಶಿಕ್ಷಕರನ್ನಾದರೂ ಸರ್ಕಾರ ನೇಮಕ ಮಾಡಬೇಕಿದೆ. ಇದರಿಂದ ಸಂಸ್ಥೆ ಮೇಲಿನ ಹೊರೆ ಕಡಿಮೆಯಾಗಿ ಇನ್ನೊಂದಿಷ್ಟು ಹೊಸ ಶಿಕ್ಷಕರನ್ನು ನೇಮಿಸಿಕೊಂಡು ಶಿಕ್ಷಣದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ. ಇತರ ಅನುದಾನಿತ ಶಾಲೆಗಳಿಗೆ ಕೊಡುವ ಸೌಲಭ್ಯಗಳನ್ನು ನಮ್ಮ ಶಾಲೆಗೂ ಕೊಡಬೇಕು. ಈ ಕುರಿತು ಕಾಲಕಾಲಕ್ಕೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. | ಚಿಂತಾಮಣಿ ಗ್ರಾಮೋಪಾಧ್ಯೆ ಸಂಸ್ಥೆ ಅಧ್ಯಕ್ಷಬೆಳಗಾವಿಯ ಮಾಹೇಶ್ವರಿ ಅಂಧಮಕ್ಕಳ ಶಾಲೆ.ರಾಷ್ಟ್ರಮಟ್ಟದ ಸಾಧನೆಈ ಶಾಲೆಯ ಹಿರಿಯ ವಿದ್ಯಾರ್ಥಿ ಬಸಪ್ಪ ವಡ್ಡಗೋಳ ಭಾರತೀಯ ಅಂಧರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ಯಾರಾ ಸ್ವಿಮ್ಮಿಂಗ್ ಕರ್ನಾಟಕ ತಂಡದಲ್ಲಿ ಈ ಶಾಲೆಯ 16 ವಿದ್ಯಾರ್ಥಿಗಳಿದ್ದಾರೆ. ವಿವಿಧ ಕ್ರೀಡೆಗಳ ರಾಜ್ಯಮಟ್ಟದ ತಂಡಗಳಲ್ಲಿ 20 ಜನ ಹಾಗೂ ರಾಷ್ಟ್ರಮಟ್ಟದ ತಂಡಗಳಲ್ಲಿ 16 ವಿದ್ಯಾರ್ಥಿಗಳಿದ್ದಾರೆ. ಪ್ಯಾರಾ ಸ್ವಿಮ್ಮಿಂಗ್‌ನಲ್ಲಿ ಕರ್ನಾಟಕ 2023ರಿಂದ 25ರವರೆಗೆ ನಿರಂತರ ಮೂರು ವರ್ಷ ಚಾಂಪಿಯನ್ ಆಗಿದ್ದು, ಇದರಲ್ಲಿ ಈ ಶಾಲೆಯ ವಿದ್ಯಾರ್ಥಿಗಳ ಚಿನ್ನದ ಪದಕಗಳ ಸಿಂಹಪಾಲಿದೆ. ನಡೆದಾಡುವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಸೇರಿ ಹಲವು ಸಾಧಕರು ಈ ಶಾಲೆಯ ವಿದ್ಯಾರ್ಥಿಗಳೆಂಬುದು ಹೆಮ್ಮೆ. ಈವರೆಗೆ 36 ಎಸ್ಎಸ್ಎಲ್‌ಸಿ ಬ್ಯಾಟ್ ಗಳನ್ನು ಶಾಲೆ ಪೂರ್ಣಗೊಳಿಸಿದ್ದು ಪ್ರತಿ ವರ್ಷವೂ ಶೇ.100 ಫಲಿತಾಂಶ ಸಾಧಿಸಿದೆ. ಮಕ್ಕಳ ಜ್ಞಾನಾರ್ಜನೆಗಾಗಿ 13 ಲಕ್ಷ ರೂ. ವೆಚ್ಚದಲ್ಲಿ ಬೈಲ್ ಗ್ರಂಥಾಲಯ ನಿರ್ಮಿಸಲಾಗಿದೆ.



