Saturday, April 19, 2025
Google search engine

Homeರಾಜಕೀಯಸರ್ಕಾರಿ ಕಾರ್ಯಕ್ರಮಗಳಲ್ಲಿ ಶಾಸಕರ ಹಿಂಬಾಲಕರು ವೇದಿಕೆ ಹಂಚಿಕೆ:ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ

ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಾಸಕರ ಹಿಂಬಾಲಕರು ವೇದಿಕೆ ಹಂಚಿಕೆ:ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ

ಹನೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗುವ ಮಹನೀಯರ ಜಯಂತಿ ಹಾಗೂ ಇನ್ನಿತರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಾಸಕರ ಹಿಂಬಾಲಕರು ವೇದಿಕೆ ಹಂಚಿಕೊಳ್ಳುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ನಿಯಮದಂತೆ ಶಾಸಕರು, ಜನಪ್ರತಿನಿಧಿಗಳು, ಕಾರ್ಯಕ್ರಮಕ್ಕೆ ಆಹ್ವಾನ ಇರುವವರು ಮಾತ್ರ ವೇದಿಕೆ ಹಂಚಿಕೊಳ್ಳಬೇಕಿದೆ . ಶಾಸಕರಾಗಿ ಮಂಜುನಾಥ್ ಆಯ್ಕೆಯಾದ ನಂತರ ಇವರ ಹಿಂಬಾಲಕರು ಹಾಗೂ ಕಾರ್ಯಕರ್ತರುಗಳು ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ .ಈ ಬಗ್ಗೆ ಅಧಿಕಾರಿಗಳು ಪ್ರಶ್ನಿಸುವುದು ಬಿಡುವುದೊ ಎನ್ನುವಂತಾಗಿದೆ. ಇತರರಿಗೆ ಮಾದರಿಯಾಗಬೇಕಿದ್ದ ಶಾಸಕರು ತಮ್ಮ ಬೆಂಬಲಿಗರನ್ನು ತಮ್ಮ ಸುತ್ತಮುತ್ತ ಕೂರಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ?

ಶಿಷ್ಟಾಚಾರ ಪಾಲನೆಯ ಬಗ್ಗೆ ಪತ್ರಿಕೆಯಲ್ಲಿ ವರದಿಯಾದ ನಂತರ ಕೆಲವು ಮುಖಂಡರುಗಳು ಎಚ್ಚೆತ್ತುಕೊಂಡಿದ್ದಾರೆ .ಆದರೆ ಇನ್ನೂ ಕೆಲವು ಬೇಜವಾಬ್ದಾರಿಯುತ ಕಾರ್ಯಕರ್ತರುಗಳು ಎಚ್ಚೆತ್ತುಕೊಳ್ಳಬೇಕಿದೆ .ಇನ್ನು ಕೆಲವರು ದುರಂಕಾರದಿಂದ ಶಿಷ್ಟಾಚಾರದ ಅರಿವಿದ್ದರೂ ಶಾಸಕರ ಜೊತೆ ವೇದಿಕೆ ಹಂಚಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ!

ಶಿಷ್ಟಾಚಾರ ಉಲ್ಲಂಘನೆ ಕ್ರಮ ಕೈಗೊಳ್ಳುವವರು ಯಾರು?:
ಪಟ್ಟಣದ ಹೊರ ವಲಯದಲ್ಲಿ ಕರ್ನಾಟಕ ಗೃಹ ಮಂಡಳಿ ಆವರಣದಲ್ಲಿ ಹಮ್ಮಿಕೊಂಡಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕರ ಬೆಂಬಲಿಗರು ವೇದಿಕೆಯಲ್ಲಿ ಕುಳಿತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಪಟ್ಟಣದ ಶ್ರೀ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಸಕರ ಬೆಂಬಲಿಗರು ವೇದಿಕೆಯಲ್ಲಿ ಕುಳಿತಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಮುಖಂಡರುಗಳಾದ ಶಿವಮೂರ್ತಿ, ಚಿನ್ನವೆಂಕಟ, ಗುರುಸ್ವಾಮಿ ಹಾಗೂ ಇನ್ನಿತರು ವೇದಿಕೆಯಲ್ಲಿ ಕುಳಿತಿದ್ದರು. ಇನ್ನು ಜೆಡಿಎಸ್ ಮುಖಂಡ ಶಿವಮೂರ್ತಿ ಮೊದಲ ಸಾಲಿನಲ್ಲಿಯೇ ಕುಳಿತುಕೊಂಡು ಎಲ್ಲರಿಗೂ ಪೋಸ್ ನೀಡುತ್ತಿದ್ದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು . ಮುಖಂಡರುಗಳು ಅಸನದಲ್ಲಿ ಕುಳಿತಿದ್ದರೆ ಇತ್ತ ಸೆಸ್ಕಾಂ ಎಇಇ ಶಂಕರ್ ಕೃಷಿ ಇಲಾಖೆಯ ರಘುವೀರ್, ಕಾವೇರಿ ವನ್ಯಜೀವಿ ವಿಭಾಗದ ಎಸಿಎಫ್ ಅಂಕರಾಜು, ಅಸನವಿಲ್ಲದೆ ನಿಂತಿದ್ದರು, ತದನಂತರ ಅಧಿಕಾರಿಗಳು ಅಸನದ ವ್ಯವಸ್ಥೆ ಮಾಡಿ ಕೂರಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆ ಮಾಡಬೇಕಿದ್ದ ಅಧಿಕಾರಿಗಳು ಮೌನ ವಹಿಸಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಶಾಸಕರೇ ನಿಮ್ಮ ಕಾರ್ಯಕರ್ತರಿಗೆ ನೀತಿ ಪಾಠ ಹೇಳಿ:

ಎಂ ಆರ್ ಮಂಜುನಾಥ್ ರವರು ಶಾಸಕರಾಗಿ ಆಯ್ಕೆಯಾದ ನಂತರ ಅಧಿಕಾರಿಗಳಿಗೆ ತಲೆನೋವು ಸಹ ಹೆಚ್ಚಾಗಿದೆ. ಶಾಸಕರು ಬರುವ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಿಗೆ ಹಿಂಬಾಲಕರು ನೂರಾರು ಸಂಖ್ಯೆಯಲ್ಲಿ ತುಂಬಿಕೊಳ್ಳುತ್ತಾರೆ. ಇದಲ್ಲದೆ ಅಧಿಕಾರಿಗಳಿಗೆ ಸರಿಯಾದ ವ್ಯವಸ್ಥೆ ಮಾಡುವಂತೆಯೂ ವಾಗ್ವಾದ ನಡೆಸುತ್ತಿರುವುದು ಆಗಾಗ ಬೆಳಕಿಗೆ ಬರುತ್ತಿದೆ. ಇನ್ನು ಮುಂದಾದರೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆ ಮಾಡಲು ತಮ್ಮ ಕಾರ್ಯಕರ್ತರಿಗೆ ನೀತಿ ಪಾಠ ಹೇಳುತ್ತಾರೋ ಅಥವಾ ಆಗಿದ್ದು ಆಗಲಿ ನಡೆಯುವುದು ನಡೆಯಲಿ ಎಂದು ಸುಮ್ಮನಿರುತ್ತಾರೋ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.

RELATED ARTICLES
- Advertisment -
Google search engine

Most Popular