Saturday, June 14, 2025
Google search engine

Homeಅಪರಾಧಕಾನೂನು'ಥಗ್ ಲೈಫ್' ಅಘೋಷಿತ ನಿಷೇಧದ ವಿರುದ್ಧ ಸುಪ್ರೀಂಕೋರ್ಟ್ ನೋಟಿಸ್: ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ಸೂಚನೆ

‘ಥಗ್ ಲೈಫ್’ ಅಘೋಷಿತ ನಿಷೇಧದ ವಿರುದ್ಧ ಸುಪ್ರೀಂಕೋರ್ಟ್ ನೋಟಿಸ್: ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ಸೂಚನೆ

ಬೆಂಗಳೂರು: ನಟ ಕಮಲ್ ಹಾಸನ್ ಅಭಿನಯಿಸಿರುವ ತಮಿಳು ಚಿತ್ರ ‘ಥಗ್ ಲೈಫ್’ ಅನ್ನು ಕರ್ನಾಟಕದಲ್ಲಿ ಅಘೋಷಿತವಾಗಿ ನಿಷೇಧಿಸಿರುವ ಕುರಿತು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ವೇಳೆ ನ್ಯಾಯಾಲಯ ರಾಜ್ಯದಿಂದ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.

ಈ ಹಿಂದೆ ಸುಪ್ರೀಂಕೋರ್ಟ್, ಈ ವಿಷಯವನ್ನು ಕರ್ನಾಟಕ ಹೈಕೋರ್ಟ್‌‍ನಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ಹೇಳಿತ್ತು. ಆದರೆ, ಕಮಲ್ ಪರ ವಕೀಲರು, ಹೈಕೋರ್ಟ್‌ ಸಿನಿಮಾ ಬಿಡುಗಡೆಗೆ ತಡೆ ನೀಡುತ್ತಿರುವವರ ಜೊತೆ ಸಂಧಾನ ಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದೆ ಎಂದು ಪ್ರತಿವಾದಿಸಿದರು. ಹೀಗಾಗಿ ಸುಪ್ರೀಂಕೋರ್ಟ್ ಪ್ರಕರಣವನ್ನು ಮತ್ತೆ ವಿಚಾರಣೆಗೆ ಸ್ವೀಕರಿಸಿತು.

ಕಮಲ್ ಪರ ವಕೀಲ ನವಪ್ರೀತ್ ಕೌರ್, “ಸಿಬಿಎಫ್ಸಿ ಪ್ರಮಾಣಪತ್ರ ಪಡೆದಿರುವ ಚಿತ್ರವನ್ನ ಯಾವುದೇ ಕಾನೂನು ಪ್ರಕ್ರಿಯೆಯಿಲ್ಲದೇ, ಹಿಂಸಾತ್ಮಕ ಬೆದರಿಕೆಯಡಿ ನಿಷೇಧಿಸಲಾಗಿದೆ. ಚಿತ್ರಮಂದಿರಗಳಿಗೆ ಬೆಂಕಿ ಹಾಕುವ ಬೆದರಿಕೆ ಕೂಡ ನೀಡಲಾಗಿದೆ. ಇದು ಭಾಷಾ ಅಲ್ಪಸಂಖ್ಯಾತರ ವಿರುದ್ಧದ ಪ್ರಚೋದನೆಯಾಗಿದೆ,” ಎಂದು ಹೇಳಿದರು.

ಹೈಕೋರ್ಟ್ ಹಿಂದಿನ ವಿಚಾರಣೆಯಲ್ಲಿ ಕನ್ನಡಿಗರ ಬಳಿ ಕ್ಷಮೆ ಕೇಳುವಂತೆ ಸಲಹೆ ನೀಡಿದ್ದು, ‘ಇನ್ನೂ ಕ್ಷಮೆ ಕೇಳಿಲ್ಲವೇ?’ ಎಂದು ನ್ಯಾಯಮೂರ್ತಿ ಎಂ. ನಾಗ ಪ್ರಸನ್ನ ಪ್ರಶ್ನಿಸಿದರು. ಕನ್ನಡ ಸಾಹಿತ್ಯ ಪರಿಷತ್ ಪರ ಹಿರಿಯ ವಕೀಲ ಎಸ್. ಬಸವರಾಜ್,ಕ್ಷಮೆ ಕೇಳಿಲ್ಲ. “ಕಮಲ್ ಹಾಸನ್ ಸ್ಟುಪಿಡ್ ಸ್ಟೇಟ್ಮೆಂಟ್ ಮಾಡಿದ್ದಾರೆ. ‘ಥಗ್’ ಪದ ಕರ್ನಾಟಕದ ಪುರಾಣದ ಭಾಷೆಯಲ್ಲಿ ಕೂಡ ಉಪಯೋಗವಾಗಿದೆ,” ಎಂದು ವಾದಿಸಿದರು. ಸುಪ್ರೀಂ ಕೋರ್ಟ್‌ ಇಂದು ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆಯಷ್ಟೇ ಎಂದು ಪೀಠದ ಗಮನಕ್ಕೆ ತಂದರು. ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜೂನ್ 20 ಕ್ಕೆ ಮುಂದೂಡಿದೆ.

RELATED ARTICLES
- Advertisment -
Google search engine

Most Popular