Thursday, April 10, 2025
Google search engine

Homeಅಪರಾಧಕಾನೂನುಮನೀಶ್ ಸಿಸೋಡಿಯಾ ಜಾಮೀನು ನಿಯಮ ಸಡಿಲಿಸಿದ ಸುಪ್ರೀಂ

ಮನೀಶ್ ಸಿಸೋಡಿಯಾ ಜಾಮೀನು ನಿಯಮ ಸಡಿಲಿಸಿದ ಸುಪ್ರೀಂ

ನವದೆಹಲಿ: ಮದ್ಯ ನೀತಿ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಷರತ್ತುಗಳನ್ನು ಸುಪ್ರೀಂಕೋರ್ಟ್ ಸಡಿಲಿಸಿದೆ. ಈ ಮೂಲಕ ವಾರಕ್ಕೆ ಎರಡು ಬಾರಿ ತನಿಖಾ ಸಂಸ್ಥೆಗಳಿಗೆ ಮುಂದೆ ಹಾಜರಾಗುವ ಷರತ್ತಿಗೆ ತಡೆ ನೀಡಿದೆ.

ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಭ್ರಷ್ಟಾಚಾರ ಮತ್ತು ಮನಿ ಲ್ಯಾಂಡರಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಆ.9 ರಂದು ಸಿಸೋಡಿಯಾ ಅವರ ಜಾಮೀನಿನಲ್ಲಿ ಷರತ್ತುಗಳನ್ನು ವಿಧಿಸಲಾಗಿತ್ತು. ಇದೀಗ ಷರತ್ತುಗಳ ಮಾರ್ಪಡಿಸುವ ಸಂದರ್ಭದಲ್ಲಿ ಷರತ್ತುಗಳ ಅಗತ್ಯವಿಲ್ಲ ಎಂದು ಪೀಠ ಆದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್ನ ತೀರ್ಪು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣಗಳೆರಡಕ್ಕೂ ಅನ್ವಯಿಸುತ್ತದೆ. ಆದಾಗ್ಯೂ, ಸಿಸೋಡಿಯಾ ಅವರು ನಿಯಮಿತವಾಗಿ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

RELATED ARTICLES
- Advertisment -
Google search engine

Most Popular