ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಸುರತ್ಕಲ್ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಹೆಚ್ಚಳ ಹಾಗೂ ವಿದ್ಯಾರ್ಥಿಗಳು ಅಪಾಯಕಾರಿಯಾಗಿ ರಸ್ತೆ ದಾಟುತ್ತಿದ್ದರಿಂದ ಅಪಘಾತವೂ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಸುರತ್ಕಲ್ ಸಮೀಪದ ವಿದ್ಯಾದಾಯಿನಿ ಬಳಿ ಇರುವ ಅಂಡರ್ ಪಾಸ್ ದುರಸ್ತಿ ಪಡಿಸಿಕೊಡಬೇಕು ಎಂಬ ಸ್ಥಳೀಯರ, ಮಕ್ಕಳ ಪೋಷಕರ ಮನವಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮೇಯರ್ ಸುಧೀರ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ವಿಭಾಗೀಯ ಆಯುಕ್ತರಿಗೆ ಸೂಚಿಸಿದರು.