Saturday, April 12, 2025
Google search engine

Homeರಾಜ್ಯಸುದ್ದಿಜಾಲಸುರತ್ಕಲ್ ಟೋಲ್ ತೆರವು : ಹೋರಾಟಗಾರರಿಗೆ ಜಾಮೀನುಗಾಗಿ ಅಗತ್ಯ ಸಿದ್ಧತೆಗಳ ಕುರಿತು ಚರ್ಚೆ

ಸುರತ್ಕಲ್ ಟೋಲ್ ತೆರವು : ಹೋರಾಟಗಾರರಿಗೆ ಜಾಮೀನುಗಾಗಿ ಅಗತ್ಯ ಸಿದ್ಧತೆಗಳ ಕುರಿತು ಚರ್ಚೆ

ಮಂಗಳೂರು (ದಕ್ಷಿಣ ಕನ್ನಡ): ಯಶಸ್ವಿ ಸುರತ್ಕಲ್ ಟೋಲ್ ತೆರವು ಹೋರಾಟದಲ್ಲಿ ಭಾಗಿಗಳಾದ 101 ಜನ ಹೋರಾಟಗಾರರಿಗೆ ಜಾಮೀನು ಕೊಡಿಸುವ, ಆಗಬೇಕಾದ ಸಿದ್ದತೆಗಳ ಕುರಿತು ಚರ್ಚಿಸಲು ಇಂದು ಕರೆಯಲಾದ ಹೋರಾಟ ಸಮಿತಿ ಸಭೆಯು ನಗರದಲ್ಲಿ ಯಶಸ್ವಿಯಾಗಿ ನಡೆಯಿತು.

ಮಾಜಿ ಸಚಿವ ಅಭಯ ಚಂದ್ರ ಜೈನ್, ಮಾಜಿ ಉಪಮೇಯರ್ ಗಳಾದ ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕುಂಜತ್ತಬೈಲ್, ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಕೃಷ್ಣಾಪುರ, ದಯಾನಂದ ಶೆಟ್ಟಿ ಪ್ರಮುಖರಾದ ದಿಲ್ ರಾಜ್ ಆಳ್ವ, ವಿ ಕುಕ್ಯಾನ್, ಬಿ ಶೇಖರ್, ವಸಂತ ಬೆರ್ನಾಡ್, ಮಂಜುಳಾ ನಾಯಕ್, ರಮೇಶ್ ಟಿ ಎನ್, ರಾಘವೇಂದ್ರ ರಾವ್, ಶೇಖರ ಹೆಜಮಾಡಿ, ಇಮ್ತಿಯಾಜ್, ಶ್ರೀನಾಥ್ ಕುಲಾಲ್, ಸಾಹುಲ್ ಹಮೀದ್ ಬಜ್ಪೆ, ಮೂಸಬ್ಬ ಪಕ್ಷಿಕೆರೆ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು‌.

ಆರೋಪಪಟ್ಟಿಯಲ್ಲಿ ಹೆಸರಿರುವ 30 ಕ್ಕೂ ಹೆಚ್ಚು ಹೋರಾಟಗಾರರು ನ್ಯಾಯವಾದಿ ಚರಣ್ ಶೆಟ್ಟಿ ಮಾರ್ಗದರ್ಶನದಲ್ಲಿ ವಕಾಲತ್ತು ಫಾರಂ ಸಹಿ ಹಾಕಿದರು. ಇನ್ನುಳಿದವರು ಮುಂದಿನ ಗುರುವಾರದೊಳಗಡೆ ಹೋರಾಟ ಸಮಿತಿಯ ಆಯಾಯ ಪ್ರದೇಶದ ಪ್ರಮುಖರ ಸಹಾಯ ಪಡೆದು ವಕಾಲತ್ತು ಫಾರಂ ಭರ್ತಿ ಮಾಡಬೇಕಾಗಿ ಇಂದಿನ ಸಭೆ ವಿನಂತಿಸಿದೆ.

ಜುಲೈ 06, 2024 ರ ಶನಿವಾರದಂದು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯಬೇಕಿದ್ದು, ಅಂದು ಎಲ್ಲರೂ ಬೆಳಿಗ್ಗೆ 9:45 ರ ಒಳಗಡೆ ನ್ಯಾಯಾಲಯದಲ್ಲಿ ಹಾಜರಿದ್ದು ಸಹಕರಿಸಲು ಕೋರಲಾಗಿದೆ‌. ಅನಿವಾರ್ಯ ಆದವರು ಅಂದು ಬಂದು ವಕಾಲತ್ತು ಅರ್ಜಿ ಗೆ ಸಹಿ ಹಾಕಲು ಅವಕಾಶವಿದೆ‌. ಅಂತವರು ಬೆಳಿಗ್ಗೆ 9:30 ರ ಒಳಗಡೆ ನ್ಯಾಯಾಲಯದ ಆವರಣದಲ್ಲಿ ಹಾಜರಿರತಕ್ಕದ್ದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

RELATED ARTICLES
- Advertisment -
Google search engine

Most Popular