Friday, April 11, 2025
Google search engine

Homeಕಲೆ-ಸಾಹಿತ್ಯಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸುರೇಶ್ ಎನ್ ಋಗ್ವೇದಿ ನೇಮಕ

ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸುರೇಶ್ ಎನ್ ಋಗ್ವೇದಿ ನೇಮಕ

ಚಾಮರಾಜನಗರ: ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಂಸ್ಕೃತಿ ಚಿಂತಕ ,ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿಯವರನ್ನು ರಾಜ್ಯ ಅಧ್ಯಕ್ಷರಾದ ಡಾ. ಎ ವಿ ಪ್ರಸನ್ನ ರವರು ನೇಮಕ ಮಾಡಿದ್ದಾರೆ.

ಕರ್ನಾಟಕ ಗಮಕ ಕಲಾ ಪರಿಷತ್ತು ರಾಜ್ಯದ ಎಲ್ಲಾ ಕಡೆ ಗಮಕ ಕಲೆಯ ಪ್ರಸಾರ ಮತ್ತು ಉಳಿವಿಗಾಗಿ ಶ್ರಮಿಸುತ್ತಿರುವ ಸಂಸ್ಥೆ. ಚಾಮರಾಜನಗರ ಜಿಲ್ಲೆಯಲ್ಲಿ ಗಮಕದ ಕಲೆಯ ಅಭಿವೃದ್ಧಿ ಹಾಗೂ ಪ್ರೋತ್ಸಾಹ, ಸಂಘಟನೆಯನ್ನು ಉತ್ತಮವಾಗಿ ನಿರ್ವಹಿಸುವಂತೆ ರಾಜ್ಯಾಧ್ಯಕ್ಷ ಪ್ರಸನ್ ಕುಮಾರ್ ತಿಳಿಸಿ ಋಗ್ವೇದಿಯವರನ್ನು ನೇಮಿಸಿದ್ದಾರೆ.

ಸುರೇಶ್ ಎನ್ ಋಗ್ವೇದಿ ಇತಿಹಾಸ ಉಪನ್ಯಾಸಕರಾಗಿ, ಹಲವಾರು ಸಂಘಟನೆಗಳಲ್ಲಿ ಮೂರು ದಶಕಗಳಿಂದ ನಿರಂತರವಾಗಿ ನಾಡು ,ನುಡಿ, ಜಲ ,ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ರಾಷ್ಟ್ರೀಯ ವಿಚಾರಧಾರೆಗಳ ಸಮಗ್ರ ಕಾರ್ಯಕ್ರಮಗಳನ್ನು ರೂಪಿಸಿ ,ಸದಾ ಕ್ರಿಯಾಶೀಲರಾಗಿ ಉತ್ತಮ ಸಂಘಟಕ, ಚಿಂತಕರಾಗಿ, ಬರಹಗಾರರಾಗಿ ,ವಾಗ್ಮಿ ಗಳಾಗಿ ಹಲವು ಸಂಘಟನೆಗಳ ಅಧ್ಯಕ್ಷರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ಗಮಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಸುರೇಶ್ ಎನ್ ಋಗ್ವೇದಿಯವರನ್ನು ಹಲವಾರು ಸಂಘ ಸಂಸ್ಥೆಗಳ ಮುಖಂಡರು ಅಭಿನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular