Friday, May 16, 2025
Google search engine

Homeರಾಜ್ಯಸುದ್ದಿಜಾಲಸುರೇಶ್ ಎನ್. ಋಗ್ವೇದಿ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕ

ಸುರೇಶ್ ಎನ್. ಋಗ್ವೇದಿ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕ

ಚಾಮರಾಜನಗರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಉಪಾಧ್ಯಕ್ಷರಾಗಿ ವಿಪ್ರಶ್ರೀ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ರವರನ್ನು ರಾಜ್ಯಾಧ್ಯಕ್ಷರಾದ ಎಸ್ ರಘುನಾಥ್ ನೇಮಕ ಮಾಡಿದ್ದಾರೆ.

ಬ್ರಾಹ್ಮಣ ಸಮಾಜಕ್ಕೆ ನಿರಂತರವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ರಾಜ್ಯದ ವಿಪ್ರ ಸಮುದಾಯಕ್ಕೆ ಹಾಗು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯನ್ನು ಒಂದು ಸದೃಢ ಹಾಗೂ ಬಲಾಢ್ಯ ಸಂಸ್ಥೆಯನ್ನಾಗಿ ರೂಪಿಸಲು ತಮ್ಮ ಸೇವೆಯನ್ನ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಸುರೇಶ್ ಎನ್ ಋಗ್ವೇದಿರವರು ಚಾಮರಾಜನಗರದ ನಿವಾಸಿಯಾಗಿದ್ದು ಜಿಲ್ಲಾ ಬ್ರಾಹ್ಮಣ ಸಂಘದಲ್ಲಿ ಕಳೆದ ದಶಕಗಳಿಂದ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 22 ವರ್ಷಗಳಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಸುರೇಶ್ ಎನ್ ಋಗ್ವೇದಿ ರವರನ್ನು ಹಲವಾರು ಸಂಘ ಸಂಸ್ಥೆಗಳು ಅಭಿನಂದಿಸಿವೆ.

RELATED ARTICLES
- Advertisment -
Google search engine

Most Popular