Friday, July 18, 2025
Google search engine

Homeರಾಜ್ಯಸುದ್ದಿಜಾಲವಿಪ್ರ ವಿಕಾಸ ಪ್ರಶಸ್ತಿಗೆ ಭಾಜನರಾದ ಸುರೇಶ್ ಎನ್. ಋಗ್ವೇದಿ : ಬೇಲೂರು ಹಬ್ಬ 2025ರಲ್ಲಿ ಗೌರವ

ವಿಪ್ರ ವಿಕಾಸ ಪ್ರಶಸ್ತಿಗೆ ಭಾಜನರಾದ ಸುರೇಶ್ ಎನ್. ಋಗ್ವೇದಿ : ಬೇಲೂರು ಹಬ್ಬ 2025ರಲ್ಲಿ ಗೌರವ

ಚಾಮರಾಜನಗರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ರವರಿಗೆ ವಿಪ್ರ ವಿಕಾಸ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಮಾನ ಮನಸ್ಕರ ಮಾಧ್ಯಮ ಮಿತ್ರರ ವೇದಿಕೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಹನುಮೇಶ್ ಕೆ ಯಾವಗಲ್ ತಿಳಿಸಿದ್ದಾರೆ.

ಸಂಸ್ಕಾರ ಸಂಸ್ಕೃತಿ ಸಂಘಟನೆಗಾಗಿ ವಿಕಾಸ ಸಾರಥ್ಯದಲ್ಲಿ ಬೇಲೂರು ಹಬ್ಬ 2025 ಜುಲೈ 20ಭಾನುವಾರ ಬೇಲೂರಿನ ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ಭಾರತಿ ತೀರ್ಥ ಸಭಾಭವನದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.

ಬೆಂಗಳೂರಿನ ವಿಕಾಸ ಸಂಸ್ಥೆಯು ಕಳೆದ ಎಂಟು ವರ್ಷ ದಿಂದ ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯಕ್ರಮ ರೂಪಿಸಲಾಗಿದ್ದು ,2025 ರಲ್ಲಿ ಹಾಸನ ಜಿಲ್ಲೆಯ ಬೇಲೂರು ನಲ್ಲಿ.ನಡೆಯುವ ವಿಕಾಸ ಹಬ್ಬ ಕಾರ್ಯಕ್ರಮವನ್ನು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಶ್ರೀ ಟಿ ಎಸ್ ಶ್ರೀವತ್ಸ ರವರು ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಅಸಗೋಡು ಜಯಸಿಂಹ ಆಗಮಿಸಲಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಪ್ರಥಮ ಅಧ್ಯಕ್ಷರಾದ ಶ್ರೀ ತೋ ಚ ಅನಂತ ಸುಬ್ಬರಾಯರು ವಹಿಸಲಿದ್ದಾರೆ.

ವಿಪ್ರ ವಿಕಾಸ ಪ್ರಶಸ್ತಿ ಸ್ವೀಕರಿಸಲ್ಲಿರುವ ಸುರೇಶ್ ಎನ್ ಋಗ್ವೇದಿ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ ರಾಷ್ಟ್ರೀಯ ಚಿಂತನೆ, ಸ್ವದೇಶಿ, ಯುವ ಸಂಘಟನೆ ,ಪರಿಸರ ಸಂರಕ್ಷಣೆ, ಸಂಸ್ಕೃತಿ, ಪರಂಪರೆ, ರಾಷ್ಟ್ರೀಯ ಮೌಲ್ಯಗಳ ಪ್ರಸಾರ, ಶಿಕ್ಷಣ, ಕನ್ನಡ ನಾಡು ನುಡಿ ಹಾಗೂ ಸಮಾಜದ ಸಮಗ್ರ ವಿಕಾಸದ ಬೆಳವಣಿಗೆಯಲ್ಲಿ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿದ್ದು ಇವರಿಗೆ ವಿಕಾಸ ಬೇಲೂರು ಹಬ್ಬ 2025 ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ದಿ.ಗರುಡನಗಿರಿ ನಾಗರಾಜ್ ಸ್ಮರಣಾರ್ಥ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಸುರೇಶ್ ಎನ್ ಋಗ್ವೇದಿಯವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ , ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ, ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು ಋಗ್ವೇದಿ ಯೂತ್ ಕ್ಲಬ್ ಗೌರವಾಧ್ಯಕ್ಷರು,ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ವಿವಿಧ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ, ಕಾರ್ಯನಿರ್ವಹಿಸಿದ್ದು, ಇತಿಹಾಸ ಉಪನ್ಯಾಸಕರಾಗಿ ಕಳೆದ 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular