Monday, July 21, 2025
Google search engine

Homeರಾಜ್ಯಸುದ್ದಿಜಾಲಸುರೇಶ್ ಎನ್. ಋಗ್ವೇದಿಗೆ ವಿಪ್ರ ವಿಕಾಸ ಪ್ರಶಸ್ತಿ: ಶಾಸಕರಿಂದ ಸಾಂಸ್ಕೃತಿಕ ಸೇವೆಗೆ ಗೌರವ

ಸುರೇಶ್ ಎನ್. ಋಗ್ವೇದಿಗೆ ವಿಪ್ರ ವಿಕಾಸ ಪ್ರಶಸ್ತಿ: ಶಾಸಕರಿಂದ ಸಾಂಸ್ಕೃತಿಕ ಸೇವೆಗೆ ಗೌರವ

ಚಾಮರಾಜನಗರ: ಸಂಸ್ಕೃತಿ ಚಿಂತಕ ಹಾಗೂ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ರವರಿಗೆ ವಿಪ್ರ ವಿಕಾಸ ಪ್ರಶಸ್ತಿಯನ್ನು ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದ ವಿಕಾಸ ಹಬ್ಬ 2025 ಕಾರ್ಯಕ್ರಮದಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸರವರು ಸನ್ಮಾನಿಸಿ, ಗೌರವಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರಾದ ಶ್ರೀ ವತ್ಸರವರು ಬ್ರಾಹ್ಮಣರ ಸಂಘಟನೆ ಸಂಸ್ಕೃತಿ ,ಉಳಿವು ಅಗತ್ಯವಾಗಿದೆ. ತಮ್ಮ ಜ್ಞಾನಶಕ್ತಿಯಿಂದ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಬ್ರಾಹ್ಮಣರು ಧೈರ್ಯದಿಂದ ರಾಷ್ಟ್ರದ ಏಳಿಗೆಗೆ ಶ್ರಮಿಸಬೇಕು. ಪ್ರತಿಭಾನ್ವಿತ ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ ,ಸಂಸ್ಕಾರ ಪರಂಪರೆಯೊಂದಿಗೆ ಸಮಾಜದ ಏಳಿಗೆಗೆ ಶ್ರಮಿಸಬೇಕು. ವೃದ್ಧಾಶ್ರಮಗಳು ಕಡಿಮೆಯಾಗಬೇಕು .ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವ ಸಂಸ್ಕಾರ ಹೆಚ್ಚಾಗಬೇಕು .ಬ್ರಾಹ್ಮಣ ಪ್ರತಿಭೆಗಳು ವಿಶ್ವದ ಎಲ್ಲೆಡೆ ಪ್ರಜ್ವಲಿಸುತ್ತಿವೆ. ಹಾಗೆಯೇ ಸಮಾಜದಲ್ಲಿ ಅನೇಕ ಸಮಸ್ಯೆಗಳು ಎದುರಾದಾಗ ಧೈರ್ಯದಿಂದ ಎದುರಿಸಿ ಸೇವೆಯನ್ನು ಸಲ್ಲಿಸುವುದು ಬ್ರಾಹ್ಮಣನ ಕರ್ತವ್ಯವೆಂದು ತಿಳಿಸಿ , ಪ್ರತಿಭಾ ವಿದ್ಯಾರ್ಥಿಗಳಿಗೆ ಗೌರವ ಹಾಗು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ರಾಜ್ಯದ ಸಾಧಕರನ್ನು ವಿಪ್ರ ವಿಕಾಸ ಪ್ರಶಸ್ತಿ ನೀಡಿ ಗೌರವಿಸಿದರು.

ಕಾರ್ಯಕ್ರಮ ದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಕಾಸ ಸಂಸ್ಥೆಯ ಅಧ್ಯಕ್ಷ ಬೆಂಗಳೂರಿನ ಶ್ರೀನಾಥ್ ಜೋಶಿ ಮಾತನಾಡಿ ಮಾಧ್ಯಮ ಕ್ಷೇತ್ರವು ಬಹಳ ಪ್ರಮುಖವಾದದ್ದು ಬ್ರಾಹ್ಮಣರ ಪ್ರತಿಭೆ, ಜ್ಞಾನ , ನಿರಂತರ ಬೆಳವಣಿಗೆ,ಹಾಗು ಯುವಕರಿಗೆ ಉದ್ಯೋಗಾವಕಾಶ, ತಂತ್ರಜ್ಞಾನದ ಮನವರಿಕೆಯ ಮೂಲಕ ಗಟ್ಟಿಗೊಳಿಸುವ ಹಾಗೂ ರಾಜ್ಯದ ವಿವಿಧ ಕಡೆ ಸೇವೆ ಸಲ್ಲಿಸುತ್ತಿರುವ ಪ್ರತಿಭೆಗಳನ್ನು ಗೌರವಿಸುವ ಮೂಲಕ ನಿರಂತರವಾಗಿ ಕಾರ್ಯಕ್ರಮಗಳನ್ನು ಎಂಟು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಬ್ರಾಹ್ಮಣ ಸಮುದಾಯದ ಹಿರಿಯ ಪತ್ರಕರ್ತರ ಮನೆಗೆ ತೆರಳಿ ಗೌರವಿಸುವ ಸಂಪ್ರದಾಯವನ್ನು ಬೆಳೆಸಿಕೊಂಡಿದೆ. ವಿಕಾಸ ಮಹಿಳಾ ವಿಭಾಗವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಂಜುನಾಥ್ ಸೀತಾರಾಂ ಶಾಸ್ತ್ರಿ ರವರ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಂಪಾದಕರಾದ ಗಿರಿಜಾ ಶಂಕರ್, ಅನಂತಮೂರ್ತಿ, ಮಂಜುನಾಥ್, ವಿಜಯ ಕೇಶವ, ಪ್ರಮೋದ್, ರಘುನಾಥ್ , ಸುದೀಂದ್ರ ರಾವ್, ಹಿರಿಯೂರು ರಾಘವೇಂದ್ರ ಮೋಹನ್ ಇದ್ದರು.

RELATED ARTICLES
- Advertisment -
Google search engine

Most Popular