ರಾಮನಗರ: ಜಿಲ್ಲೆಯಲ್ಲಿಅವಧಿ ಮೀರಿದ ಔಷಧಗಳ ಬಳಕೆಅಥವಾ ವಿತರಣೆ ಮಾಡಿದರೆ ಸಂಬಂಧಿಸಿದವರನ್ನು ಮುಲಾಜಿಲ್ಲದೆ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜು.೧೨ರ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಲಸಿಕೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಮನಗರದ ಕೂಗಳತೆಯಲ್ಲಿರುವ ರಾಜಧಾನಿ ಬೆಂಗಳೂರಿನಿಂದ ಆರೋಗ್ಯ ಇಲಾಖೆಗೆ ಅಗತ್ಯವಿರುವ ಔಷಧ, ಮಾತ್ರೆಗಳನ್ನು ತರಲುಕವಾದರೂಏನಿದೆ. ಅವಧಿ ಮೀರಿದ ಔಷಧ ಮಾತ್ರೆಗಳಿದ್ದರೆ ನನ್ನ ಗಮನಕ್ಕೆ ತರಬೇಕು, ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ ನೀಡುವ ಲಸಿಕೆಯನ್ನು ಎರಡೆರಡು ಬಾರಿಪರೀಕ್ಷಿಸಿಯೇ ನೀಡಬೇಕು.ಅವಧಿ ಮೀರಿದ ಔಷಧಗಳ ಬಳಕೆ ಸಲ್ಲ, ಈ ಬಗ್ಗೆಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಧಿಕಾರಿ ವೈಯಕ್ತಿಕ ಗಮನ ಹರಿಸಬೇಕು ಎಂದರು.
ಲಸಿಕೆಗಳು, ಔಷಧಿಗಳು, ಮಾತ್ರೆ ಸೇರಿದಂತೆ ಮೆಡಿಕಲ್ ಸರಂಜಾಮುಗಳನ್ನು ದಾಸ್ತಾನಿಗೆ ತೆಗೆದುಕೊಳ್ಳುವ ಸಮಯದಲ್ಲಿ ಅವುಗಳ ಅವಧಿಯನ್ನುಸಹ ಪರಿಶೀಲಿಸಬೇಕು, ಒಂದು ವೇಳೆ ದಾಸ್ತಾನಿರಿಸಿದ ಔಷಧಮಾತ್ರೆಗಳ ಅವಧಿಮುಕ್ತಾಯಗೊಂಡಿದ್ದರೆ ವಿಲೇವಾರಿಗೆಕ್ರಮ ವಹಿಸಬೇಕು. ಮಾಗಡಿಯಲ್ಲಿಅವಧಿ ಮೀರಿದಗ್ಲುಕೋಸ್ ನೀಡಿಕೆ ಪ್ರಕರಣವನ್ನುಉದಾಹರಿಸಿ ಮಾತನಾಡಿದಅವರುಇನ್ನು ಮುಂದೆಈರೀತಿಯಯಾವುದೇ ಘಟನೆಗಳು ಮರುಕಳಿಸಿದರೆ ಸಂಬಂಧಿಸಿದವರನ್ನೇ ಹೊಣೆಗಾರರನ್ನಾಗಿಸಿಅಮಾನತು ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯ ಆಸ್ಪತ್ರೆಗಳಲ್ಲಿ ಹಾವು ಕಡಿತ ಔಷಧಿಗಳನ್ನು ಸಿದ್ಧಪಡಿಸಿಟ್ಟುಕೊಂಡಿರಬೇಕು. ಖಾಲಿಯಾದಾಗ ಮರುದಾಸ್ತಾನಿಗೆ ಕ್ರಮ ವಹಿಸಬೇಕು ಇಲಾಖೆಗೆ ಸಂಬಂಧಿಸಿದ ಮಾಹಿತಿಗಳು ಅಧಿಕಾರಿಗಳ ಕೈ ಬೆರಳಿನಲ್ಲಿರಬೇಕು ಎಂದರು. ಇದೂವರೆಗೂ ಜಿಲ್ಲೆಯಲ್ಲಿಒಟ್ಟು ೯೩ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು,ರೋಗಿಗಳಲ್ಲಿ ಡೆಂಗ್ಯೂ ಲಕ್ಷಣಗಳು ಪತ್ತೆಯಾದರೆ ರಾಮನಗರ ಜಿಲ್ಲಾಆಸ್ಪತ್ರೆಯಲ್ಲಿ ತೆರೆಯಲಾಗಿರುವ ವಾರ್‌ರೂಮ್ ಸಂಖ್ಯೆ ೯೪೪೯೮೪೩೨೬೬ಗೆ ಸಾರ್ವಜನಿಕರು ಸಂಪರ್ಕಿಸಬಹುದು,ಇದು ದಿನದ ೨೪ ಗಂಟೆಕಾರ್ಯನಿರ್ವಹಿಸುತ್ತದೆ ಎಂದು ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್ ಅವರು ತಿಳಿಸಿದರು.
ಆರ್‌ಸಿಎಚ್ ಅಧಿಕಾರಿಡಾ.ರಾಜು,ಜಿಲ್ಲಾ ಶಸ್ತ್ರಚಿಕಿತ್ಸಕರಾದಡಾ. ಮಂಜುನಾಥ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಡಾ. ಶಶಿಧರ್, ಜಿಲ್ಲಾಕ್ಷಯರೋಗ ನಿಯಂತ್ರಣಧಿಕಾರಿಡಾ.ಕುಮಾರ್,ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿತಾಲ್ಲೂಕುಆರೋಗ್ಯಾಧಿಕಾರಿಗಳು ಹಾಗೂ ಸಂಬಂಧಿಸಿದವರು ಸಭೆಯಲ್ಲಿದ್ದರು.