Friday, April 11, 2025
Google search engine

Homeಅಪರಾಧಮಗಳ ಅನುಮಾನಸ್ಪದ ಸಾವು: ನ್ಯಾಯಕ್ಕಾಗಿ ಚಿಕ್ಕಮಗಳೂರು ಎಸ್ ಪಿ ಕಚೇರಿ ಮುಂದೆ ಕುಟುಂಬಸ್ಥರ ಗೋಳಾಟ

ಮಗಳ ಅನುಮಾನಸ್ಪದ ಸಾವು: ನ್ಯಾಯಕ್ಕಾಗಿ ಚಿಕ್ಕಮಗಳೂರು ಎಸ್ ಪಿ ಕಚೇರಿ ಮುಂದೆ ಕುಟುಂಬಸ್ಥರ ಗೋಳಾಟ

ಚಿಕ್ಕಮಗಳೂರು: ಮಗಳ ಅನುಮಾನಾಸ್ಪದ ಸಾವಿನ ನ್ಯಾಯಕ್ಕಾಗಿ ಎಸ್ ಪಿ ಕಚೇರಿ ಮುಂದೆ ಕುಟುಂಬವೊಂದು ಕಣ್ಣೀರಿಟ್ಟು, ಗೋಳಾಡಿರುವ ಘಟನೆ ವರದಿಯಾಗಿದೆ.

ರುಕ್ಮಿಣಿ (31) ಕಡೂರು ನಗರದಲ್ಲಿ ಅನುಮಾನಸ್ಪದ ಸಾವನ್ನಪ್ಪಿದ ಮಹಿಳೆ.

ನಿನ್ನೆ ಮಧ್ಯಾಹ್ನ ರುಕ್ಮಿಣಿ ಸಾವನ್ನಪ್ಪಿದ್ದು, ರುಕ್ಮಿಣಿ ಸಾವಿನ ಬಳಿಕ ಇಬ್ಬರು ಮೊಮ್ಮಕ್ಕಳು ಕಣ್ಮರೆಯಾಗಿದ್ದಾರೆ.

ಮಂಡ್ಯ ಜಿಲ್ಲೆ ರಾಗಿ ಮುದ್ದನಹಳ್ಳಿ ಮೂಲದ ರುಕ್ಮಿಣಿಯನ್ನು ಕಳೆದ 14 ವರ್ಷಗಳ ಹಿಂದೆ ಕಡೂರಿನ ಕಣ್ಣನ್ ಗೆ ಮಾಡಿಕೊಡಲಾಗಿದೆ.

ಮದುವೆ ಆದಾಗಿನಿಂದಲೂ ಅತ್ತೆ, ಮಾವ, ಗಂಡನಿಂದ ರುಕ್ಮಿಣಿಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂದು ಕುಟುಂಬಸ್ಥರು.

ರುಕ್ಮಿಣಿ ಕುಟುಂಬಸ್ಥರು ಗಂಡ ಕಣ್ಣನ್ ವಿರುದ್ಧ ಕೊಲೆ ಆರೋಪ ಮಾಡುತ್ತಿದ್ದು, ರುಕ್ಮಿಣಿ ಸಾವಿನ ನಂತರ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಕಣ್ಣನ್  ಆಡಿಯೋ ಲಭ್ಯವಾಗಿದೆ.

ಎಸ್ ಪಿ ಕಚೇರಿಯ ಮುಂದೆ ಮೊಮ್ಮಕ್ಕಳನ್ನು ಹುಡುಕಿ ಕೊಡುವಂತೆ ಕುಟುಂಬಸ್ಥರು ಅಂಗಲಾಚಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಳ್ಳದೇ ಆತ್ಮಹತ್ಯೆಯೆಂದು ಪ್ರಕರಣ ಮರೆಮಾಚಲು ಕಡೂರು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಾವಿನ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

ಸದ್ಯ ಚಿಕ್ಕಮಗಳೂರಿನ ಶವಗಾರಕ್ಕೆ ಶವವನ್ನು ತರಲಾಗಿದೆ.

RELATED ARTICLES
- Advertisment -
Google search engine

Most Popular