ಮೈಸೂರು: ನಗರದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಇಂದು ಭಾನುವಾರ ಬೆಳಗ್ಗೆ ೦೭:೦೦ ಗಂಟೆಯಿಂದ ೦೯:೩೦ ರ ವರೆಗೆ ಸ್ವಚ್ಚ ಭಾರತ ಅಭಿಯಾನದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿ (ರಿ)ಯ ನೇತೃತ್ವದಲ್ಲಿ ಬಡಾವಣೆಯ ನಿವಾಸಿಗಳು ಪಾಲ್ಗೊಂಡು ಸ್ವಚ್ಛ ಮೂಕಾಂಬಿಕಾ ಬಡಾವಣೆಯ ಸಂಕಲ್ಪ ದಲ್ಲಿ ಪ್ರತಿ ಮನೆಯಿಂದ ಭಾಗವಹಿಸಿ ಸ್ವಚ್ಚತಾ ಕಾರ್ಯ ಮಾಡಲಾಯಿತು.
ಈ ಸಂದರ್ಭದಲ್ಲಿ ಸುಮಾರು ೨೬ ಚೀಲಗಳಷ್ಟು ಒಣ ಕಸ, ಪ್ಲಾಸ್ಟಿಕ್, ಇತರೆ ತ್ಯಾಜ್ಯಗಳನ್ನು ಸಂಗ್ರಹಿಸಿ ಆರೋಗ್ಯಾಧಿಕಾರಿಗಳಾದ ಪರಮೇಶ್ವರ್ ಅವರಿಗೆ ಮುಂದಿನ ವಿಲೇವಾರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣ ಸಮಿತಿಯ ಉಪಾಧ್ಯಕ್ಷರಾದ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಪುನೀತ್ ಜಿ, ಕಾರ್ಯದರ್ಶಿ ನಾಗಭೂಷಣ ಆಚಾರ್, ಸಹ ಕಾರ್ಯದರ್ಶಿ ಪಾರ್ಶ್ವನಾಥ್ ಜೈನ್, ನಿರ್ದೇಶಕರಾದ ಶ್ರೀಮತಿ ಶುಭಾ, ಯಶ್ವಂತ್ , ನಿವಾಸಿಗಳಾದ ಮುರುಡಿ, ವೀಣಾ, ಪೂಜಾ ಎನ್, ಮಂಜುನಾಥ್, ರಮೇಶ್ , ಬಾಲಕರಾದ ಪೃಥು ಪಿ ಅದ್ವೈತ್, ವೆಂಕಟ ರಾಘವ, ಹರಣ್ ಪಿ ಜೈನ್, ಪೌಲ್, ರಾಘವ ರಾಮಕೃಷ್ಣ ಹಾಗೂ ಬಡಾವಣೆಯ ನಿವಾಸಿಗಳು ಭಾಗವಹಿಸಿ ಶ್ರಮದಾನ ಮಾಡಿದರು.
