ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ರವರ ನೇತೃತ್ವದಲ್ಲಿ ತಾತಯ್ಯನವರ ಪ್ರತಿಮೆಗೆ ಮಾಲಾರ್ಪಣೆ
ಮೈಸೂರು: ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಹರ್ ಘರ್ ತಿರಂಘ ಅಭಿಯಾನದ ಅಂಗವಾಗಿ ಬಿಜೆಪಿ ಯುವಮೋರ್ಚ ಕೃಷ್ಣರಾಜ ಕ್ಷೇತ್ರದ ವತಿಯಿಂದ ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂ. ವೆಂಕಟಕೃಷ್ಣಯ್ಯ ತಾತಯ್ಯನವರ ಉದ್ಯಾನವನದಲ್ಲಿ ಸ್ವಚ್ಚಭಾರತ ಅಭಿಯಾನದ ಮೂಲಕ ಸ್ವಚ್ಚ ಗೊಳಿಸಲಾಯಿತು.
ನಂತರ ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ರವರ ನೇತೃತ್ವದಲ್ಲಿ ತಾತಯ್ಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಸಕರಾದ ಟಿ.ಎಸ್. ಶ್ರೀವತ್ಸ, ಕೆ.ಆರ್. ಕ್ಷೇತ್ರದ ಅಧ್ಯಕ್ಷ ಗೋಪಾಲ್ ರಾಜ್ ಅರಸ್, ಯುವಮೋರ್ಚಾ ಅಧ್ಯಕ್ಷ ಕೆ.ಎಂ. ನಿಶಾಂತ್, ದೇವರಾಜ್ ಗೌಡ, ಪಾಲಿಕೆ ಮಾಜಿ ಸದಸ್ಯ ಬಿವಿ. ಮಂಜುನಾತ್, ಪ್ರದೀಪ್, ಯುವಮೋರ್ಚಾ ಕಾರ್ಯಕರ್ತರಾದ ಅಕ್ಷಯ್, ಮಧು, ನಿತೇಶ್, ಹರ್ಷ, ಶ್ರೀಕಂಠ, ಪ್ರತೀಕ್, ಪ್ರಶೀಕ್, ಚರಣ್, ಪವನ್, ಕಾರ್ತಿಕ್, ಅಭಿಶೇಕ್, ವಿನೀತ್, ವರುಣ್, ರವಿ, ಮನೋಜ್, ಸಾಯಿಕುಮಾರ್, ದರ್ಷನ್, ಶ್ರೇಯಸ್, ಇನ್ನಿತರರು ಉಪಸ್ಥಿತಿತರಿದ್ದರು