ಮೈಸೂರು: ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ 2.0 ಕಾರ್ಯಕ್ರಮದ ಅಂಗವಾಗಿ R-R-R(Reduce, Re-use, Re-cycle, ಯೋಜನೆಯಡಿ ಶ್ರೀರಾಂಪುರ ಟೌನ್ ವ್ಯಾಪ್ತಿಯ ಎಲ್ಲಾ ಬಡಾವಣೆಗಳಿಂದ ವಿವಿಧ ಆಟಿಕೆ ಸಾಮಗ್ರಿಗಳು, ಬಟ್ಟೆಗಳು, ಪುಸ್ತಕಗಳು ಮತ್ತು ದಿನಬಳಕೆಯ ಇತರೆ ಪದಾರ್ಥ/ಸಾಮಗ್ರಿಗಳನ್ನು ರಮಾಬಾಯಿ ನಗರದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಸಂಗ್ರಹಿಸಿ ಇಡಲಾಗಿತ್ತು.
ಸದರಿ ಸಾಮಗ್ರಿಗಳನ್ನು ಇಂದು ಜಯನಗರ ಚಿಕ್ಕ ಅರದನಹಳ್ಳಿ ಶ್ರೀ ಛಾಯಾದೇವಿ ಅನಾಥ ಆಶ್ರಮ, ಶ್ರೀರಾಂಪುರ ಟೌನ್ ಪ್ರೀತಿ ವೃದ್ದಾಶ್ರಮ ಹಾಗೂ ಜೆಪಿ ನಗರದ ಶ್ರೀ ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯಗಳಿಗೆ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ಶ್ರೀಧರ್ ರವರ ಅಧ್ಯಕ್ಷತೆಯಲ್ಲಿ ಶ್ರೀ ಮೂಕಾಂಬಿಕಾ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಮೈಸೂರು ವಿಶ್ವವಿದ್ಯಾನಿಲಯ ನೌಕರರ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಸಹಯೋಗದಲ್ಲಿ ಸಮವಸ್ತ್ರ, ಮಹಿಳೆಯರ ಮತ್ತು ಮಕ್ಕಳ ಉಡುಪುಗಳು, ದಿನಬಳಕೆಯ ಗೃಹಬಳಕೆ ಸಾಮಗ್ರಿಗಳು, ಆಟಿಕೆ ಸಾಮಗ್ರಿಗಳು ಹಾಸಿಗೆ -ದಿಂಬು, ಬೆಡ್ ಶೀಟ್ಸ್, ಶರ್ಟ್,ಪ್ಯಾಂಟು ಸೀರೆಗಳು, ಸ್ವೆಟರ್ಸ್ ಇನ್ನು ಮುಂತಾದ ಸಾಮಗ್ರಿಗಳನ್ನು ಶ್ರೀರಾಂಪುರ ಟೌನ್ ರಮಾಬಾಯಿ ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಮುಖ್ಯಾಧಿಕಾರಿಗಳಿಂದ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಸಮುದಾಯ ಸಂಘಟನಾಧಿಕಾರಿಗಳಾದ ಶ್ರೀನಿವಾಸ್, ಆರೋಗ್ಯ ಅಧಿಕಾರಿಗಳಾದ ಪರಮೇಶ್, ಮೇಸ್ತ್ರಿ ಮುತ್ತು ಸ್ವಾಮಿ, ಕಚೇರಿಯ ಅಧಿಕಾರಿ, ನೌಕರರು ಸಿಬ್ಬಂದಿಗಳು, ಪೌರಾಕಾರ್ಮಿಕರು ಹಾಗೂ ಮೂಕಾಂಬಿಕ ಸಮೃದ್ದಿ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಗಣೇಶ್, ಪ್ರಧಾನ ಕಾರ್ಯದರ್ಶಿ ಪುನೀತ್, ಕಾರ್ಯದರ್ಶಿ ನಾಗಭೂಷಣ ಆಚಾರ್, ಖಜಾಂಚಿ ನಾಗರಾಜ್ ಹಾಗೂ ಪದಾಧಿಕಾರಿಗಳು ಮತ್ತು ಅನಾಥಾಶ್ರಮ ಮತ್ತು ಹಾಸ್ಟೆಲ್ ಗಳ ಮುಖ್ಯಸ್ಥರು, ಕಾರ್ಯಕರ್ತರು, ಸ್ವಯಂಸೇವಕರು ಉಪಸ್ಥಿತರಿದ್ದರು.