Tuesday, April 15, 2025
Google search engine

Homeರಾಜ್ಯಸುದ್ದಿಜಾಲಸ್ವಾಮಿ ವಿವೇಕಾನಂದ ಯೂತ್ ಆರೋಗ್ಯ, ಅಕ್ಷರ, ಹಸಿವು ಮುಕ್ತ ಸಮಾಜವಾಗಿ ಪರಿವರ್ತಿಸಲು ಹಗಲಿರುಳು ಶ್ರಮಿಸುತ್ತಿದೆ: ಎಂ.ಪಿ....

ಸ್ವಾಮಿ ವಿವೇಕಾನಂದ ಯೂತ್ ಆರೋಗ್ಯ, ಅಕ್ಷರ, ಹಸಿವು ಮುಕ್ತ ಸಮಾಜವಾಗಿ ಪರಿವರ್ತಿಸಲು ಹಗಲಿರುಳು ಶ್ರಮಿಸುತ್ತಿದೆ: ಎಂ.ಪಿ. ರಮೇಶ್

ಹುಣಸೂರು,ಡಿ.16: ಸ್ವಾಮಿ ವಿವೇಕಾನಂದ ಯೂತ್ 1984 ರಿಂದ ಆರೋಗ್ಯ, ಅಕ್ಷರ, ಹಸಿವು ಮುಕ್ತ ಸಮಾಜವಾಗಿ ಪರಿವರ್ತಿಸಲು ಹಗಲಿರುಳು ಶ್ರಮಿಸುತ್ತಿದೆ ಎಂದು ಸಂಸ್ಥೆ ವ್ಯವಸ್ಥಾಪಕ ಎಂ.ಪಿ. ರಮೇಶ್ ತಿಳಿಸಿದರು.

ನಗರದ ರೋಟರಿ ಕ್ಲಬ್ ಹುಣಸೂರು ಮತ್ತು ಸ್ವಾಮಿ ವಿವೇಕಾನಂದ ಯೂಥ್ ಮುಮೆಂಟ್ ಹಾಗೂ ಇನ್ನರ್ವಿಲ್ ಕ್ಲಬ್ ಸಹಯೋಗದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಯಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು, ಜಿಲ್ಲೆಯ ನಾಲ್ಕು ತಾಲೂಕಿನ ಎಲ್ಲೆಡೆ ಕಛೇರಿ ತೆರದು, ಮಹಿಳೆಯರಿಗೆ ಉಚಿತ ತರಬೇತಿ, ಹೊಲಿಗೆ ಯಂತ್ರ, ವಿಕಲ ಚೇತನರಿಗೆ ಸರಕಾರದ ಸೌಲಭ್ಯಗಳ ಸಮಗ್ರ ಮಾಹಿತಿ ಮತ್ತು ಅವರ ಸ್ವಾಲಂಬನೆಗೆ ಬೇಕಾದ ಪರಿಕರಣಗಳನ್ನು ನೀಡುವ ಮೂಲಕ ಸಮಾಜದ ಸಮಾನತೆ ಸಿಗುವಂತೆ ನೋಡಿಕೊಳ್ಳುವ ಪ್ರಯತ್ನವನ್ನು ಸಂಸ್ಥೆ ನಿರಂತರ ಮಾಡುತ್ತಿದೆ ಎಂದರು.

ರೋಟರಿ ಅಧ್ಯಕ್ಷ ಡಾ.ಪ್ರಸನ್ನ ಕೆ.ಪಿ. ಪ್ರಸನ್ನ ಮಾತನಾಡಿ, ಸಮಾಜದಲ್ಲಿ ವಿಕಲ ಚೇತನರಿಗೆ, ಅನುಕಂಪದ ಅಗತ್ಯವಿಲ್ಲ ಆದರೆ ಅವರ ಬದುಕಿಗೆ ಬೇಕಾದ ಕಲಿಕೆ ಅಥವಾ ಗುರಿಮುಟ್ಟುವ ಸಲಹೆ ಸಹಕಾರದ ಅವಶ್ಯಕತೆ ಇದೆ ಎಂದರು.

ರೋಟರಿ ಕಾರ್ಯದರ್ಶಿ ಹೆಚ್‌.ಆರ್.ಕೃಷ್ಣಕುಮಾರ್ ಮಾತನಾಡಿ, ಆರೋಗ್ಯದ ವಿಚಾರದಲ್ಲಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆ. ವಿಶೇಷಚೇತನರ ಅಂಗವೈಕಲ್ಯ ನಿರ್ಮೂಲನೆಗಾಗಿ ಹಲವಾರು ವರ್ಷಗಳಿಂದ ವಿಶ್ವಸಂಸ್ಥೆಯೊಂದಿಗೆ ನಿಂತು ಆರ್ಥಿಕ ನೆರವು ನೀಡಿ ಪೋಲಿಯೊ ನಿರ್ಮೂಲನೆಗೆ ಮುಂದಾಗಿರುವುದು ಶ್ಲಾಘನೀಯವೆಂದರು.

ಅಧ್ಯಕ್ಷತೆಯನ್ನು ವೆಂಕಟಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂಯೋಜನಾಧಿಕಾರಿಗಳಾದ ಮುಖ್ಯ ಅತಿಥಿಗಳಾಗಿ ಇನ್ನರ್ವೀಲ್ ಅಧ್ಯಕ್ಷೆ ಸ್ಮಿತಾ ದಯಾನಂದ್, ನಗರಸಭಾ ಸದಸ್ಯರಾದ ದೇವರಾಜು, ರಾಣಿ ಪೆರುಮಾಳ್, ಆರೋಗ್ಯ ಇಲಾಖೆಯ ರಾಜೇಶ್ವರಿ, ಸಂಯೋಜಕರಾದ ಫರೀನಾ, ದೇವರಾಜು, ನಾಗೇಂದ್ರ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೃಷ್ಣೆಗೌಡರು ಶ್ರೀ ಮರೂರಮ್ಮ ವಿಕಲಚೇತನರ ಕ್ಷೇಮಾಭಿವೃದ್ಧಿ ಒಕ್ಕೂಟ ಹುಣಸೂರು, 150ಕ್ಕೂ ಹೆಚ್ಚು ವಿಕಲಚೇತನರು ಭಾಗವಹಿಸಿದ್ದರು.

ವಿಕಲಚೇತನ ಮಕ್ಕಳು ಮತ್ತು ವಿಕಲಚೇತನರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನಗಳನ್ನು ವಿಕಲಚೇತನರಿಗೆ ವಿತರಿಸಲಾಯಿತು.

RELATED ARTICLES
- Advertisment -
Google search engine

Most Popular