Friday, April 11, 2025
Google search engine

Homeರಾಜ್ಯಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಿಂದ ಸ್ವರಾಜ್ಯ, ಸುರಾಜ್ಯ ಕವಿಗೋಷ್ಠಿ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಿಂದ ಸ್ವರಾಜ್ಯ, ಸುರಾಜ್ಯ ಕವಿಗೋಷ್ಠಿ

ಚಾಮರಾಜನಗರ: ದೇಶಭಕ್ತಿ ಹಾಗೂ ದೇಶ ಚಿಂತನೆಯ ಸಾಹಿತ್ಯ ರಚನೆಗೆ ಪೂರಕ ವಾತವರಣವನ್ನು ಪ್ರೇರೆಪಿಸಲು ಸ್ವರಾಜ್ಯ ಮತ್ತು ಸುರಾಜ್ಯ ಪರಿಕಲ್ಪನೆಯ ಕವಿಗೋಷ್ಠಿಯನ್ನು ರಾಜ್ಯದ ಎಲ್ಲಾಕಡೆ ಆಯೋಜಿಸಲಾಗಿದೆ. ಚಾಮರಾಜನಗರದಲ್ಲು ಯಶಸ್ವಿ ಕವಿಗೋಷ್ಠಿ ನಡೆದು ಸಾಹಿತ್ಯ ರಚನೆಯ ಆಸಕ್ತಿಯನ್ನು ಹೆಚ್ಚಿಸಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮೈಸೂರು ವಿಭಾಗದ ಮುಖ್ಯಸ್ಥರಾದ ಡಾ. ವಿ.ರಂಗನಾಥ್ ತಿಳಿಸಿದರು.

 ಅವರು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸ್ವರಾಜ್ಯ ಮತ್ತು ಸುರಾಜ್ಯ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಷ್ಟ್ರದ ಸಾವಿರಾರು ಅಗೋಚರ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಗೌರವಿಸಲಾಯಿತು. ಸ್ವರಾಜ್ಯ ಮತ್ತು ಸುರಾಜ್ಯ ಪರಿಕಲ್ಪನೆಯ ಮೂಲಕ ದೇಶಕ್ಕಾಗಿ ತ್ಯಾಗ ಬಲಿದಾನವಾಗಿರುವ ಲಕ್ಷಾಂತರ ವೀರ ಪುರುಷರನ್ನು ಸ್ಮರಿಸುವ ಮೂಲಕ ಅವರ ತ್ಯಾಗ ಬಲಿದಾನಗಳು ವ್ಯರ್ಥ್ಯವಾಗದಾಗೆ ರಾಷ್ಟ್ರವನ್ನು ಉತ್ತಮವಾಗಿ ರೂಪಿಸಬೇಕು ಎಂದು ಹೇಳಿದರು.

ಅತಿಥಿಗಳಾದ ಡಾ. ಗುರುಕಿರಣ್ ಮಾತನಾಡಿ ವಿಷಯಕ್ಕೆ ಪೂರಕವಾಗಿ ಸಾಹಿತ್ಯವನ್ನು ರಚಿಸುವುದು ಬಹಳ ಮುಖ್ಯವಾದುದು ಸ್ವರಾಜ್ಯ ಮತ್ತು ಸುರಾಜ್ಯ ಪದವು ಅತ್ಯುತ್ತಮವಾದುದು ರಾಷ್ಟ್ರೀಯತೆ,ರಾಷ್ಟ್ರದ ಬೆಳವಣಿಗೆ, ಉನ್ನತಿ ಪ್ರಜೆಗಳ ಕಾರ್ಯ ಯೋಜನೆಗಳಲ್ಲಿ ಸಾಧ್ಯವಾಗುವುದು. ಕವಿಗಳು ಕವಿತೆಗಳನ್ನು ವಾಚಿಸುವಾಗ ಶಬ್ದದ ಅರ್ಥ, ಭಾವನೆ, ಸಂವೇದನೆ ಹಾಗೂ ಭಾಷಾ ಶುದ್ದತೆಗೆ ಮುಖ್ಯ ಸ್ಥಾನ ನೀಡಬೇಕು ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಋಗ್ವೇದಿ ಮಾತನಾಡಿ ರಾಷ್ಟ್ರೀಯ ಸಾಹಿತ್ಯ ರಚನೆಯು ಇಂದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿ ಮತ್ತು ಯುವಕರಲ್ಲಿ ರಾಷ್ಟ್ರೀಯ ಮೌಲ್ಯಗಳನ್ನು ಅರ್ಥ ಮಾಡಿಸುವ ಸಾಹಿತ್ಯ ರಚನೆ ಅವಶ್ಯವಿದೆ. ಸಂಸ್ಕೃತಿ, ಪರಂಪರೆ, ಸ್ವಾತಂತ್ರ್ಯದ ಚಿಂತನೆ, ಅಭಿವೃದ್ದಿ ಕುರಿತು ಯೋಚಿಸುವ, ಬರೆಯುವ ಕಾರ್ಯಗಳನ್ನು ಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶೈಲಕುಮಾರ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುದರ್ಶನ್, ಗೌರವಾಧ್ಯಕ್ಷರಾದ ಡಾ. ನಿರ್ಮಲ, ಕವಿಗಳಾದ ಕೀರ್ತಿ ಶೇಖರ್, ಶೃತಿ, ಅನಂದ್ ಬೆಂಡರವಾಡಿ, ಸುರೇಶ್ ದೊಡ್ಡಮೋಳೆ, ಗುಂಡ್ಲುಪೇಟೆ ಯೋಗನಂದ್, ಅರುಂದತಿಶೇಖರ್, ಸ್ವರಾಜ್ಯ ಮತ್ತು ಸುರಾಜ್ಯ ಕುರಿತು ಕವನ ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಹಾಲಿಂಗಗಿರ್ಗಿ, ಕಲೆನಟರಾಜು, ಶಿವಸ್ವಾಮಿ, ಸರಸ್ವತಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular