ವಿನಯ್ ದೊಡ್ಡಕೊಪ್ಪಲು
ಹೊಸೂರು : ಅಧಿಕಾರ ಹಿಡಿಯಲು ಪ್ರವಾಸಕ್ಕೆ ಹೋದವರು 9 ಮಂದಿ.. ಆದರೆ ಚುನಾವಣೆಯಲ್ಲಿ ಮತಹಾಕಿದ್ದು 6 ಮಂದಿ… ನಾವು ಓಟು ಹಾಕಿದ್ದೇವೆ ಎಂದು ಬಂದು ಆಣೆ ಮಾಡಿದವರು 9 ಮಂದಿ…ಹಾಗಾದರೇ ಓಟು ಹಾಕದ 3 ಮಂದಿ ಯಾರು…? ಎಂಬುದೇ ಇಲ್ಲಿ ನಿಗೂಡವಾದರೆ ಆಣೆ ಪ್ರಮಾಣಕ್ಕೆ ಬೆಲೆ ಎಲ್ಲಿ ಎಂಬುದು ಇಲ್ಲಿ ಪ್ರಶ್ನೆಯಾಗಿದೆ.
ಇಂತಹ ನಿಗೂಢ ಪ್ರಶ್ನೆಗೆ ಸಾಲಿಗ್ರಾಮ ತಾಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯ ಫಲಿತಾಂಶ ನಿಜಕ್ಕೂ ರಾಜಕಾರಣದ ನಂಬಿಕೆಯನ್ನು ಉಲ್ಟಾ-ಪಲ್ಟಾ ಮಾಡಿ ಅಧಿಕಾರ ಸಿಗಬೇಕಾದವರು ಸೋಲನ್ನು ಅನುಭವಿಸಿದರೇ ಸೋಲಬೇಕಾದವರು ಗೆಲುವಿನ ನಗೆ ಬೀರಿದ್ದಾರೆ.
ಎ ವರ್ಗಕ್ಕೆ ಮೀಸಲಾಗಿದ್ದ ಈ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಭಾರತಿವಿಶ್ವನಾಥ್ ಅವರನ್ನು ಅಧಿಕಾರಕ್ಕೆ ಕೂರಿಸಲು 9 ಮಂದಿ ಮೊದಲಿಗೆ ಕೆ.ಆರ್.ಪೇಟೆ ತಾಲೂಕಿನ ಚಂದಗೋಳಮ್ಮ ದೇವಾಯಲದಲ್ಲಿ ಆಣೆ ಮಾಡಿ ಕೊಳ್ಳೆಗಾಲದ ಮಲೆಮಹದೇಶ್ವರ ದೇವಾಲಯಕ್ಕೆ ಪ್ರವಾಸ ತೆರಳಿದ್ದರು.
ಮಂಗಳವಾರ ನಡೆದ ಗ್ರಾ.ಪಂ.ನ ಅಧ್ಯಕ್ಷರ ಚುನಾವಣೆಗೆ ಈ 9 ಮಂದಿಯು ಒಟ್ಟಿಗೆಯೇ ಆಗಮಿಸಿ ಮೇಲೂರು ಗ್ರಾಮದ ಶಂಭುಲಿಂಗೇಶ್ವರ ದೇವಾಲಯದಲ್ಲಿ ಭಾರತಿ ವಿಶ್ವನಾಥ್ ಅವರಿಗೆ ಓಟುಹಾಕುವುದಾಗಿ ಮತ್ತೆ ಆಣೆ ಪ್ರಮಾಣ ಮಾಡಿ ಗ್ರಾ.ಪಂ.ಕಚೇರಿಗೆ ಮತಹಾಕಲು ಒಟ್ಟಿಗೆ ಆಗಮಿಸಿದ್ದರು.
ಆದರೆ ಇಲ್ಲಿ ನಡೆದಿದ್ದು ಬೇರೆ 9 ಮಂದಿಯ ಮತ ಪಡೆಯ ಬೇಕಾಗಿದ್ದ ಭಾರತಿ ವಿಶ್ವನಾಥ್ ಅವರು 6 ಮತಗಳನ್ನು ಪಡೆದು ಸೋಲು ಕಂಡರೆ ಇವರ ಪ್ರತಿ ಸ್ಪರ್ಧಿಯಾಗಿದ್ದ ಕಾಂಗ್ರೇಸ್ ಬೆಂಬಲಿತ ವಿಜಯ ರಾಮಕೃಷ್ಣೇಗೌಡ 9 ಮತಗಳನ್ನು ಪಡೆದು ರಾಜಕೀಯ ತಂತ್ರಗಾರಿಕೆಯಿಂದ ಗೆಲುವು ಕಂಡರು.
ಆದರೆ ತಮ್ಮದೇ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಿ ವಿಶ್ವನಾಥ್ ಅವರಿಗೆ ತಮ್ಮ ಸೋಲನ್ನ ನಿಜಕ್ಕೂನಂಬದಾಗುವಂತೆ ಆ ಕ್ಷಣ ಮಾಡಿತ್ತು. ಯಾಕೆಂದರೆ ತಮ್ಮ ಜೊತೆ 9 ಮಂದಿ ಬಂದವರು ಇದೀಗ ಆರುಮಂದಿ ಮತ ಹಾಕಿದ್ದಾರೆ, ಇನ್ನು ಉಳಿದ ಮೂರು ಮಂದಿ ಅಡ್ಡ ಮತದಾನ ಮಾಡಿದ್ದು
ಆನಂತರ ನಡೆದಿದ್ದು ಹೈ ಡ್ರಾಮ ನಾವು ನಿಮಗೆ ಓಟು ಹಾಕಿದ್ದೇವೆ ಎಂದು ಒಟ್ಟಿಗೆಯೇ ಪ್ರವಾಸ ತೆರಳಿದ್ದ 9 ಮಂದಿಯು ಚರ್ಚೆ ಶುರು ಮಾಡಿ ನಡೆಯಿರಿ ಸತ್ಯಕ್ಕೆ ಹೆಸರು ವಾಸಿಯಾಗಿರುವ ಕಪ್ಪಡಿ ರಾಜಪ್ಪಾಜಿ ಗದ್ದುಗೆ ಮುಂದೆ ಸದಸ್ಯರಾದ ಗೌತಮ್, ಲೀಲಾವತಿ, ನರೇಂದ್ರ ಕುಮಾರ್ ,ಮಹದೇವಮ್ಮ, ದೀಪಿಕಾ, ವೆಂಕಟೇಶ್, ಪುಟ್ಟಸ್ವಾಮೀಗೌಡ, ಕುಳ್ಳಯ್ಯ ಕುಮಾರ್ ಅವರು ಬಂದು ಆಣೆ ಪ್ರಮಾಣ ಮಾಡಿದ್ದಾರೆ.
ಕಪ್ಪಡಿ ರಾಜಪ್ಪಾಜಿ ಗದ್ದುಗೆ ಯಲ್ಲಿ ಆಣೆ ಪ್ರಮಾಣ ಮಾಡಲು ಹೆದರುತ್ತಾರೆ. ಇಲ್ಲಿ ತಪ್ಪು ಮಾಡಿದವರು ಯಾರು ಆಣೆ ಮಾಡಲ್ಲ ಮಾಡಿದರೇ ತಮಗೆ ಇಲ್ಲಾ ತಮ್ಮ ಕುಟುಂಬದವರಿಗೆ ಕೇಡು ಆಗುತ್ತದೆ ಎಂಬ ಸಾಕಷ್ಟು ನಂಬಿಕೆ ಇದ್ದರು ಸಹ ಇಲ್ಲಿ 6 ಮಂದಿ ಓಟು ಹಾಕಿ ಸತ್ಯ ಮಾಡಿರುವುದು ಸರಿ . ಆದರೆ ಓಟು ಹಾಕದೇ ನಾವು ಹಾಕಿದ್ದಿವಿ ಎಂದು ಒಂದು ಆಣೆ ಪ್ರಮಾಣ ಮಾಡಿರುವುದು ಇದ್ದೋರು 9 ಮಂದಿ ಕದ್ದವರು ಯಾರು ಆ ಮೂರು ಮಂದಿ ಎಂಬದು ಇಲ್ಲಿ ಮಾತ್ರ ಕೊನೆಗೂ ನಿಗೂಢತೆಯ ಪ್ರಶ್ನೆಯಾಗಿಯೇ ಉಳಿದು ಕೊಂಡರೇ ಅಧ್ಯಕ್ಷರಾಗಲು ಹೋಗಿ ಖರ್ಚು ಮಾಡಿದ ಲಕ್ಷಾಂತರ ರೂ ಹಣ ನೀರಿನಲ್ಲಿ ಹೋಮಮಾಡಿದಂತೆ ಆಗಿದೆ.
ಮೇಲೂರು ಗ್ರಾ.ಪಂ.ನ ಅಧ್ಯಕ್ಷರ ಚುನಾವಣೆಯಲ್ಲಿ ಭಾರತಿವಿಶ್ವನಾಥ್ ಅವರಿಗೆ ಓಟು ಹಾಕಿದವರು ಮತ್ತು ಹಾಕದವರು ಬಂದು ಸತ್ಯಕ್ಕೆ ಹೆಸರು ವಾಸಿಯಾಗಿರುವ ಕಪ್ಪಡಿಯಲ್ಲಿ ಆಣೆ ಪ್ರಮಾಣ ಮಾಡಿದ್ದು ಮೋಸಮಾಡಿದವರಿಗೆ ಅ ದೇವರೇ ಶಿಕ್ಷೆ ನೀಡಲಿ ಮುಂದೆ ನಂಬಿಕೆ ದ್ರೋಹ ಮಾಡುವರಿಗೆ ಎಚ್ಚರಿಕೆ ಘಂಟೆ ಆಗಲಿ.
ಗೌತಮ್ ಮೇಲೂರು ಗ್ರಾ.ಪಂ.ಸದಸ್ಯ
