ಕೆ.ಆರ್.ನಗರ : ನಾವು ಮಾಡುವ ಸೇವೆ ಜನಪರ ವಾಗಿದ್ದಾಗ ಮಾತ್ರ ಸಾರ್ವಜನಿಕ ಜೀವನ ದಲ್ಲಿ ಹೆಸರು ಸಂಪಾದನೆ ಮಾಡಲು ಸಾಧ್ಯ ಎಂದು ಎಪಿಎಂಸಿ ಮಾಜಿ ನಿರ್ದೇಶಕ ಬಂಡಳ್ಳಿ ಕುಚೇಲ ಹೇಳಿದರು.
ಸಾಲಿಗ್ರಾಮ ತಾಲೋಕಿನ ಬಂಡಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಸಾ. ರಾ. ಮಹೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಮಾಡಿ ಮಾತನಾಡಿದ ಅವರು ಸಾರಾ ಮಹೇಶ್ ರವರ ಯೋಜನೆಗಳು, ಕಾರ್ಯಕ್ರಮಗಳು ಮತ್ತು ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ಪ್ರಸ್ತುತ ಇರುವ ರಾಜಕೀಯ ನೇತಾರರು ಅಳವಡಿಸಿಕೊಳ್ಳುತ್ತಿದ್ದು ಸಾರ ಮಹೇಶ್ ರವರ ನಡುವಳಿಕೆಗಳು ಅನುಕರಣೆಯ ವಾಗಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ರಘು ಸಹ ಶಿಕ್ಷಕರಾದ ಮಂಜು, ಕುಮಾರ್ ದ್ವಿತೀಯ ದರ್ಜೆ ಸಹಾಯಕ ಪ್ರಮೋದ್ ಮತ್ತು ಸಹಾಯಕ ಗುರುರಾಜ್ ಹಾಜರಿದ್ದರು.