Wednesday, April 23, 2025
Google search engine

Homeವಿದೇಶಸಿಡ್ನಿ: ಶಾಪಿಂಗ್ ಮಾಲ್ ನಲ್ಲಿ ಐವರನ್ನು ಇರಿದು ಕೊಂದ ಆಗಂತುಕ

ಸಿಡ್ನಿ: ಶಾಪಿಂಗ್ ಮಾಲ್ ನಲ್ಲಿ ಐವರನ್ನು ಇರಿದು ಕೊಂದ ಆಗಂತುಕ

ಸಿಡ್ನಿ: ವ್ಯಕ್ತಿಯೊಬ್ಬ ಸಿಡ್ನಿಯಲ್ಲಿನ ಶಾಪಿಂಗ್ ಮಾಲ್ ಒಂದರಲ್ಲಿ ಐದು ಜನರನ್ನು ಹತ್ಯೆ ಮಾಡಿದ ಘಟನೆ ಶನಿವಾರ ನಡೆದಿದೆ. ಚೂರಿ ಇರಿತ ಮತ್ತು ಗುಂಡಿನ ದಾಳಿ ನಡೆದ ಕಾರಣ ಬೋಂಡಿ ಬೀಚ್ ಬಳಿಯ ವೆಸ್ಟ್‌ಫೀಲ್ಡ್ ಬೋಂಡಿ ಜಂಕ್ಷನ್‌ ನಿಂದ ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ.

ಸಿಡ್ನಿ ಹೆರಾಲ್ಡ್ ವರದಿಯ ಪ್ರಕಾರ ಇನ್ನು ಎಂಟು ಮಂದಿ ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಆಗಂತುಕನು ಐವರು ಜನರನ್ನು ಚೂರಿಯಿಂದ ಇರಿದು ಕೊಂದು ಹಾಕಿದ್ದಾನೆ. ಆತನನ್ನು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದಾಳಿಯು ನಗರದ ಪೂರ್ವ ಉಪನಗರದಲ್ಲಿ ಮಧ್ಯಾಹ್ನ 3:40 ರ ಸುಮಾರಿಗೆ (ಸ್ಥಳೀಯ ಕಾಲಮಾನ) ನಡೆಯಿತು. ಅನೇಕ ಜನರು ಇರಿತಕ್ಕೊಳಗಾದ ವರದಿಗಳ ನಂತರ ಸಂಜೆ 4 ಗಂಟೆಯ ವೇಳೆಗೆ ಆ್ಯಂಬುಲೆನ್ಸ್ ಸೇರಿ ತುರ್ತು ಸೇವೆಗಳು ಧಾವಿಸಿದವು ಎಂದು ವರದಿ ಹೇಳಿದೆ.

ಇರಿತಕ್ಕೆ ಒಳಗಾದವರಲ್ಲಿ ತಾಯಿ ಮತ್ತು ಆಕೆಯ ಒಂಬತ್ತು ತಿಂಗಳ ಮಗು ಸೇರಿದೆ. ಆದರೆ ಇಬ್ಬರು ವ್ಯಕ್ತಿಗಳು ಅವರ ಮೇಲೆ ದಾಳಿ ಮಾಡಲು ಬಂದ ಆಗಂತುಕನ ಹೆಚ್ಚಿನ ಪ್ರಯತ್ನಗಳನ್ನು ವಿಫಲಗೊಳಿಸಿದರು. ಮಗುವಿನ ರಕ್ತಸ್ರಾವವನ್ನು ನಿಲ್ಲಿಸಲು ಅಂಗಡಿಯ ಬಟ್ಟೆಗಳನ್ನು ಬಳಸಿದರು ಎಂದು ವರದಿಯಾಗಿದೆ.

RELATED ARTICLES
- Advertisment -
Google search engine

Most Popular