ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸರ್ವಧರ್ಮಗಳ ಸಾಮರಸ್ಯದ ಅಭಿವೃದ್ದಿಗಾಗಿ ನರೇಂದ್ರ ಮೋದಿಯವರ ಮತ್ತೋಮ್ಮೆ ಪ್ರಧಾನಿ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮತ ನೀಡಿ ಎಂದು ಮೈಸೂರು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯದ್ ಅಕ್ರಂ ಹೇಳಿದರು.
ಕೆ.ಆರ್.ನಗರ ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರೊಂದಿಗೆ ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮೈಸೂರು ಲೋಕಸಭಾ ಮೈತ್ರಿ ಅಭ್ಯರ್ಥಿ ಯದುವೀರ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ೨೮ ಲೋಕಸಭಾ ಸ್ಥಾನಗಳ ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮತ ಯಾಚನೆಗೆ ಚಾಲನೆ ನೀಡಿದ ಅವರು ಅಲ್ಪಸಂಖ್ಯಾರು ಮತ್ತು ಹಿಂದುಳಿದ ವರ್ಗದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರೊಂದಿಗೆ ಹಾಸನ-ಮೈಸೂರು ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ಬೇಟಿನೀಡಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಮೂಲಕ ಮತ ಯಾಚನೆ ಮಾಡಿದರು.
ಅಬ್ಕಾ ಬಾರ್ ಚಾರ್‌ಸೌ ಪಾರ್ ಈಗಾಗಲೇ ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಶುಭ ಮುಸ್ಸೂಚನೆ ಇದಾಗಿದೆ ಹಾಗಾಗಿ ಮಂಡ್ಯದಿಂದ ಹೆಚ್.ಡಿ.ಕೆ ಗೆಲ್ಲಿಸಿದರೆ ದೇಶದ ಕೃಷಿ ಮಂತ್ರಿಯಾಗುತ್ತಾರೆ ಏಕೆಂದರೆ ರೈತ ಮತ್ತು ಕೃಷಿಯ ಬಗ್ಗೆ ಹೆಚ್ಚು ಆಲೋಚನೆಯನ್ನು ಇಟ್ಟಿಕೊಂಡಿರುವ ಇವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಕಾಯ್ದಿರಿಸಿದೆ ಆದ್ದರಿಂದ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ನೇಮಿತ್ ಚಂದ್ ಜೈನ್, ಜಿಲ್ಲಾ ಕಾರ್ಯದರ್ಶಿ ಕೇಸರಿ ಮಾಲ್ ಜೈನ್, ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷೆ ಸ್ವಪ್ನನಾಗೇಶ್, ತಾ.ಬಿಜೆಪಿ ಅಧ್ಯಕ್ಷ ಹೊಸೂರುಧರ್ಮ, ಹೆಚ್.ಡಿ.ಕೋಟೆ ಅಲ್ಪಸಂಖ್ಯಾ ತಾ ಅಧ್ಯಕ್ಷ ಎಂ.ದಾಸಯ್ಯ, ಕಾರ್ಯದರ್ಶಿ ರಂಗಸ್ವಾಮಿ, ಮಹಿಳಾ ಮೋರ್ಚ ಅಧ್ಯಕ್ಷೆ ಅಂಬುಜಾಮಹೇಶ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಂಜುಂಡ, ಯುವ ಮೋರ್ಚ ಅಧ್ಯಕ್ಷ ಅವಿನಾಶ್, ಕಾರ್ಯದರ್ಶಿ ಪ್ರವೀಣ್, ಉಪಾಧ್ಯಕ್ಷ ಪ್ರಜ್ವಾಲ್, ಮಾಜಿ ಆಶ್ರಯ ಕಮಿಟಿ ಮುಕ್ಕೂಟಿ, ಸುರೇಂದ್ರ, ಪ್ರದೀಪ್, ಪುನೀತ್, ಆಶೋಕ್ ಖೇಣಿ, ಸಂದೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.