ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ- ಹಿರಿಯ ಹಾಗೂ ಬಡ್ತಿಮುಖ್ಯ ಶಿಕ್ಷಕರಸಂಘದ ನೂತನ ಅಧ್ಯಕ್ಷರಾಗಿ ಸಯ್ಯದ್ ರಿಜ್ವಾನ್ ಮತ್ತು ನೂತನ ಪ್ರದಾನ ಕಾರ್ಯದರ್ಶಿಯಾಗಿ ಎ.ಎಲ್.ಸುರೇಶ್ ಸರ್ವಸಮ್ಮತ ಆಯ್ಕೆಯಾಗಿದ್ದಾರೆ
ಕೆ.ಆರ್.ನಗರ ಪಟ್ಟಣದ ಜಿಜಿಎಂಎಸ್ ಶಾಲೆಯಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಟಿ.ಎನ್. ಕುಮಾರೇಗೌಡರವರ ಅಧ್ಯಕ್ಷತೆಯಲ್ಲಿ,ಮೈಸೂರು ಜಿಲ್ಲಾಸಂಘದ ಗೌರವಾಧ್ಯಕ್ಷರಾದ ರಾಮಕೃಷ್ಣ, ಹಿರಿಯವರಾದ ಪುಟ್ಟಯ್ಯರವರ ಉಪಸ್ಥಿತಿಯಲ್ಲಿ ಬಡ್ತಿಮುಖ್ಯಶಿಕ್ಷಕರ ಸಮ್ಮುಖ ನಡೆದ ಸಭೆಯಲ್ಲಿ2024-25 ನೇ ಸಾಲಿಗೆ ಬಡ್ತಿಮುಖ್ಯಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಕಾರ್ಯಕಾರಿಣಿ ಸಮಿತಿಯ ಹಾಗೂ ಸದಸ್ಯರನ್ನು ಸರ್ವಸಮ್ಮತವಾಗಿ ಆಯ್ಕೆಮಾಡಲಾಯಿತು.
ಸಂಘದ ಗೌರವಾಧ್ಯಕ್ಷರಾಗಿ ರಾಮೇಗೌಡ, ಅಧ್ಯಕ್ಷರಾಗಿ ಸಯ್ಯದ್ ರಿಜ್ವಾನ್, ಉಪಾಧ್ಯಕ್ಷರಾಗಿ ದೇವರಾಜೇಗೌಡ, ಎಚ್.ಟಿ ಮಂಜುಳ, ದೇವಕುಮಾರ, ಪ್ರದಾನ ಕಾರ್ಯದರ್ಶಿ ಎ.ಎಲ್. ಸುರೇಶ, ಖಜಾಂಚಿ ಎನ್.ಎಲ್ ರಾಮಪ್ರಸಾದ್, ಸಹಕಾರ್ಯದರ್ಶಿಯಾಗಿ ಲೋಹಿತಾಶ್ವ, ಎನ್.ಕೆ ಮಂಜುನಾಥ, ಸಂಘಟನಾ ಕಾರ್ಯದರ್ಶಿಗಳಾಗಿ ಸಿದ್ದೇಗೌಡ, ವೀರಭದ್ರ ಸ್ವಾಮಿ ಅಯ್ಕೆಯಾಗಿದ್ದಾರೆ.
ಉಳಿದಂತೆ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ, ಜಲೇಂದ್ರ, ಶಶಿಧರ, ಎಂ ಸುಮಾಮಣಿ ಮಂಜುರಾಜ್ ನೇಮಕಗೊಂಡರು.
ಈ ಸಂದರ್ಭದಲ್ಲಿ ಕೆ.ಆರ್.ನಗರ ಶಾಖೆಯ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ , ರಾಜ್ಯ ಪರಿಷತ್ ಸದಸ್ಯರಾದ ಕೆ.ವಿ. ರಮೇಶ್, ರಾಜ್ಯ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾದ ರಾಜಶೇಖರ್ ಕಲ್ಯಾಣಪುರ, ಕಾರ್ಯದರ್ಶಿ ಚಿಕ್ಕಕೊಪ್ಪಲು ಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದ, ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ತಿಮ್ಮಶೆಟ್ಟಿ, ಖಜಾಂಚಿ ರಾಜಯ್ಯ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಭಾಸ್ಕರ್, ಮೈಸೂರು ಜಿಲ್ಲಾ ಸಂಘದ ಅಧ್ಯಕ್ಷ ದುಂಡಯ್ಯ, ಪ್ರಧಾನ ಕಾರ್ಯದರ್ಶಿ ಶಿವಶಂಕರ್ , ರಾಜ್ಯ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರು ನಿವೃತ್ತ ಮುಖ್ಯ ಶಿಕ್ಷಕ ಕುಚೇಲ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ಪ್ರಸನ್ನ,ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪುರುಷೋತ್ತಮ ರವರು ಶುಭಕೋರಿದರು.