ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸರ್ಕಾರಿ ಶಾಲೆಯಲ್ಲಿ ಸಿಗುತ್ತಿರುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಪೋಷಕರಿಗೆ ಹೊಸೂರು ಹಾರಂಗಿ ಉಪ ವಿಭಾಗ ನಿವೃತ್ತ ಎಇಇ ಕೆ.ಬಿ.ಪ್ರಕಾಶ್ ಹೇಳಿದರು
ಕೆ.ಆರ್.ನಗರ ತಾಲೂಕಿನ ಕಂಚಗಾರ ಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡಿರುವ ಉಚಿತ ಶೂ ಮತ್ತು ಸಾಕ್ಸ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ಪೋಷಕರ ಖಾಸಗಿ ಶಾಲೆಯ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಪ್ರಸಕ್ತ ಶಿಕ್ಷಣ ವ್ಯವಸ್ಥೆಯಲ್ಲಿ ಬಿಸಿಊಟ, ಉಚಿತ ಸಮವಸ್ತ್ರ, ಉಚಿತ ಶಿಕ್ಷಣ ನೀಡಲು ಕೋಟ್ಯಾಂತರ ರೂಗಳನ್ನು ಸರ್ಕಾರ ಖರ್ಚು ಮಾಡಿ ಪೈಟೋಟಿ ನೀಡುವಂತೆ ಅಗಿದ್ದು ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿ ಶಾಲೆಗಳ ಉಳಿವಿಗೆ ಮುಂದಾಗ ಬೇಕೆಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ವಿಷ್ಣು ಶೆಟ್ಟಿ, ಶಿಕ್ಷಕ ಮಾರುತಿ ಚಿಕ್ಕನಾಯನಹಳ್ಳಿ, ಅತಿಥಿ ಶಿಕ್ಷಕಿ ಲಕ್ಷ್ಮಿ, ಎಸ್.ಡಿ.ಎಂ.ಸಿ.ಸದಸ್ಯ ಸುನೀಲ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.