ನಂಜನಗೂಡು :ಇಂದು ನಂಜನಗೂಡು ತಾಲೂಕು ಪತಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕ್ರೀಡಾಕೂಟವನ್ನು ಡಿ ವೈ ಎಸ್ ಪಿ ಗೋವಿಂದರಾಜು ಗುಂಡು ಎಸೆಯುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಮುಂದುವರೆದು ಮಾತನಾಡಿದ ಅವರು ಪತ್ರಕರ್ತರು ನಿಮ್ಮ ವೃತ್ತಿಯ ಜೊತೆ ಕ್ರೀಡೆಗಳನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯ ದಿಂದ ಇರಬಹುದು ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ್ ಮಾತನಾಡಿ ಪ್ರತಿಯೊಬ್ಬರು ಆರೋಗ್ಯದಿಂದ ಇರಲು ಪ್ರತಿನಿತ್ಯ ಯಾವುದಾದರೂ ಒಂದು ಕ್ರೀಡೆಯನ್ನು ಅಳವಡಿಸಿಕೊಂಡು ಇದ್ದರೆ ಆರೋಗ್ಯದಿಂದ ಇರಬಹುದು ಹಾಗೂ ಪ್ರತಿಯೊಬ್ಬರೂ ಕೂಡ ಒತ್ತಡದಿಂದ ಬದುಕುತ್ತಿದ್ದಾರೆ ಒತ್ತಡದಿಂದ ದೂರವಿರಬೇಕೆಂದರೆ ಪ್ರತಿನಿತ್ಯ ಕ್ರೀಡಾ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಸಿಟಿಜನ್ ಶಾಲೆಯ ಮುಖ್ಯಸ್ಥೆ ವಸುದ ಬೇಗಂ, ಕಾರ್ಯದರ್ಶಿ ಅಲಿ ಪತ್ರಕರ್ತರ ಸಂಘದ ಎಲ್ಲಾ ಪತ್ರಕರ್ತರು ಕುಟುಂಬದವರು ಭಾಗವಹಿಸಿದ್ದರು.