ಮೈಸೂರು: ನಗರದ ಚಾಮುಂಡಿಪುರಂ ಬಳಿ ಇರುವ ಆರಾಧ್ಯ ಮಹಾಸಭಾ ಉಮಾ ಮಹೇಶ್ವರ ಹಾಗೂ ಪಂಚಾಚಾರ್ಯರ ದೇವಸ್ಥಾನ ವತಿಯಿಂದ 2023 – 24ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜು.21ರ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷರು ಹಾಗೂ ಆರಾಧ್ಯ ಮಹಸಭಾ ಉಪಾಧ್ಯಕ್ಷರಾದ ವರಲಕ್ಷ್ಮಿ ಕುಮಾರ್ ತಿಳಿಸಿದ್ದಾರೆ.
ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90 ಕ್ಕಿಂತ ಅಧಿಕ ಅಂಕ ಪಡೆದ ಆರಾಧ್ಯ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಆರಾಧ್ಯ ಮಹಾಸಭಾ ಮೈಸೂರು ಕಚೇರಿಗೆ ಜು.10 ರ ಒಳಗಾಗಿ ಕೈಬರಹದ ಅರ್ಜಿ, ಅಂಕಪಟ್ಟಿ ಮತ್ತು ಆಧಾರ್ ಕಾರ್ಡ್ ನಕಲು ಪ್ರತಿ, ವಿದ್ಯಾರ್ಥಿ ಭಾವಚಿತ್ರ ಸಮೇತ ಅರ್ಜಿ ಸಲ್ಲಿಸಬೇಕು, ಹೆಚ್ಚಿನ ಮಾಹಿತಿಗಾಗಿ ವರಲಕ್ಷ್ಮಿ ಕುಮಾರ್ ಅವರ ದೂರವಾಣಿ 9844935900 ಸಂಪರ್ಕಿಸಲು ಆರಾಧ್ಯ ಮಹಾಸಭಾ ನಿರ್ದೇಶಕರಾದ ನಂಜುಂಡ ಆರಾಧ್ಯ ಕೋರಿದ್ದಾರೆ.