Friday, April 11, 2025
Google search engine

Homeರಾಜಕೀಯತಾಕತ್​ ಇದ್ರೆ ಎಫ್​ಸಿಐ ಬಗ್ಗೆ ಚರ್ಚೆಗೆ ಬನ್ನಿ: ಪ್ರತಾಪ್ ಸಿಂಹಗೆ ಪ್ರದೀಪ್ ಈಶ್ವರ್ ಸವಾಲ್

ತಾಕತ್​ ಇದ್ರೆ ಎಫ್​ಸಿಐ ಬಗ್ಗೆ ಚರ್ಚೆಗೆ ಬನ್ನಿ: ಪ್ರತಾಪ್ ಸಿಂಹಗೆ ಪ್ರದೀಪ್ ಈಶ್ವರ್ ಸವಾಲ್

ಚಿಕ್ಕಬಳ್ಳಾಫುರ: ಪ್ರತಾಪ್ ಸಿಂಹ ಅವರೇ ನೀವು ಪತ್ರಕರ್ತರಾಗಿದ್ದಾಗ ಸ್ವಲ್ಪ ಓದುತ್ತಿದ್ರಿ. ಸಂಸದರಾದ ಮೇಲೆ ಓದುವುದೇ ಬಿಟ್ಟಿದ್ದೀರಿ. ನಿಮಗೆ ತಾಕತ್​ ಇದ್ದರೆ ಎಫ್​ಸಿಐ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಚಿಕ್ಕಬಳ್ಳಾಫುರ ಶಾಸಕ ಪ್ರದೀಪ್​ ಈಶ್ವರ್​ ತಿರುಗೇಟು ನೀಡಿದ್ದಾರೆ.

ಮೊದಲ ಬಾರಿಗೆ ಗೆದ್ದಿರುವ ಶಾಸಕರಿಗೆ, ಗೊತ್ತಿಲ್ಲದವರಿಗೆ ಹಿರಿಯ ಶಾಸಕರು ಒರಿಯಂಟೇಶನ್ ಪ್ರೋಗ್ರಾಂ ನಡೆಸುವ ಅಗತ್ಯವಿದೆ ಎಂದಿದ್ದ ಚಿಕ್ಕಬಳ್ಳಾಪುರದಲ್ಲಿ ಇಂದು  ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಬಗ್ಗೆ ವೈಯಕ್ತಿಕ ಹೇಳಿಕೆ ಕೊಡುತ್ತಿದ್ದಾರೆ. ವಿಷಯಾಧಾರಿತ ಬಿಟ್ಟು ವೈಯಕ್ತಿಕ ವಿಚಾರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸೋಲಿನ ಭೀತಿಯಿಂದ ಪ್ರತಾಪ್ ಸಿಂಹ ಏನೇನೋ ಮಾತನಾಡುತ್ತಾರೆ. ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಆಗುತ್ತೇನ್ರಿ? ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡೇ ಗೆದ್ದಿದ್ದೀರಿ. ನಿಮ್ಮ ವೈಯಕ್ತಿಕ ವರ್ಚಸ್ಸು ಏನು, ನಿಮ್ಮ ಸಾಧನೆ ಏನು ಹೇಳಿ? ನೀವು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುತ್ತೀರಿ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಪ್ರತಾಪ್ ಏನೇನೋ ಮಾತನಾಡುತ್ತಿದ್ದಾರೆ ಎಂದು​ ವಾಗ್ದಾಳಿ ನಡೆಸಿದರು.

ಫುಡ್ ಕಾರ್ಪೊರೇಷನ್ ಇಂಡಿಯಾಗೆ ಒಂದು ಇತಿಹಾಸ ಇದೆ. ಅದಕ್ಕೆ ದೊಡ್ಡ ವ್ಯವಸ್ಥೆ ಇದೆ. ಅಲ್ಲಿ ಶೇಖರಣೆಯಾಗುವ ದವಸ ಧಾನ್ಯ ಬಡವರಿಗೆ ತಲುಪಿಸಬೇಕಾಗಿರುವುದು ಅದರ ಜವಾಬ್ದಾರಿ. ಅದೆ ರೀತಿಯಾಗಿ ಫುಡ್ ಕಾರ್ಪೊರೇಷನ್ ಇಂಡಿಯಾ ಹಕ್ಕಿ ಕೊಡುತ್ತೇವೆ ಎಂದು ಹೇಳಿತ್ತು. ಅದಕ್ಕೆ ಹಣ ಕಟ್ಟಿ ಅಂತ ಹೇಳಿತ್ತು, ಇದನ್ನು ಗೊಡನ್ನಾ ಎಂದು ಕರಿತರಲ್ಲ ಇಂಥವರಿಗೆ ಏನು ಹೇಳಬೇಕು. ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಬೈದರೆ ಸ್ಥಾನಮಾನ ಸಿಗುತ್ತದೆ ಎಂಬ ಭ್ರಮೆಯಲ್ಲಿ ಪ್ರತಾಪ್​​ಸಿಂಹ ಇದ್ದಾರೆ. ಹಾಗಾಗಿ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ​​ರನ್ನು ಬೈಯ್ಯುತ್ತಿದ್ದಾರೆ ಎಂದು ಕಿಡಿಕಾರಿದರು.

ಪುಡ್ ಕಾರ್ಪೋರೇಷನ್ ಆಪ್ ಇಂಡಿಯಾ ಅಕ್ಕಿ ಕೊಡದಿರುವುದರ ಹಿಂದೆ ರಾಜ್ಯ ಬಿಜೆಪಿ ನಾಯಕರ ಕೈವಾಡ ಇದೆ. ರಾಜ್ಯ ಸರ್ಕಾರ ಜನರಿಗೆ ಅಕ್ಕಿ ಕೊಟ್ಟರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತೆ. ರಾಜಕೀಯ ಕುತಂತ್ರದಿಂದ ಕೇಂದ್ರದ ಅಕ್ಕಿ ರಾಜ್ಯಕ್ಕೆ ಬರದಿರುವಂತೆ ತಡೆಯಲಾಗಿದೆ. ರಾಜ್ಯ ಸರ್ಕಾರ ಅಕ್ಕಿ ಕೊಡಬಾರದು ಬಿಜೆಪಿಯವರ ಪ್ರತಿಭಟನೆ ಯಶಸ್ವಿಯಾಗಬೇಕು ಎನ್ನುವುದು ಅವರ ಧೋರಣೆ. ಇದರ ಹಿಂದೆ ರಾಜ್ಯ ಬಿಜೆಪಿ ಸಂಸದರ ಕುತಂತ್ರ ಇದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವ ಭಿತಿಯಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ಇದೇ ವೇಳೆ ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಿದ ಪ್ರದೀಪ್ ಈಶ್ವರ್, ಚಿಕ್ಕಬಳ್ಳಾಪುರವನ್ನ ಸಿಂಗಾಪುರ ಮಾಡುವುದಕ್ಕೆ ಆಗಲ್ಲ. ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ಆಗುವುದಕ್ಕೆ ಇನ್ನೂ 20 ವರ್ಷಗಳು ಬೇಕು. ಚಿಕ್ಕಬಳ್ಳಾಪುರದಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ. ಇಷ್ಟು ವರ್ಷಗಳ ಕಾಲ ಶಾಸಕರು ಆಗಿದ್ದವರು ಏನ್ ಮಾಡಿದ್ದಾರೋ ಗೊತ್ತಿಲ್ಲ. ಹಿಂದಿನ ಶಾಸಕರ ಭ್ರಷ್ಟಾಚಾರ ಮಾಡಿದ್ದಕ್ಕೆ ನನ್ನನ್ನು ಜೈಲಿಗೆ ಹಾಕಿಸಿದ್ದರು. ನನಗೆ ಟಾರ್ಚರ್ ಕೊಟ್ಟಿದ್ದಕ್ಕೆ ಇಂದು ನಾನು ಶಾಸಕ ಆಗಿದ್ದೇನೆ. ನನ್ನಂತವರು ಸಮಾಜದಲ್ಲಿ ತುಂಬಾ ವಿರಳ. ನಗರದಲ್ಲಿರುವ ಒಂದೊಂದೆ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದರು.

RELATED ARTICLES
- Advertisment -
Google search engine

Most Popular