ಮಂಡ್ಯ: ಸಚಿವ ಚಲುವರಾಯಸ್ವಾಮಿಗೆ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಎಚ್ಚರಿಕೆ ಪತ್ರ ರವಾನಿಸಿದ್ದಾರೆ.
ಮೊನ್ನೆ ಯಾರ್ರಿ ಅವನು ಪುಟ್ಟರಾಜು ಎಂದಿದ್ದ ಹಾಲಿ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ಮಾಜಿ ಸಚಿವ ಸಿಎಸ್ ಪುಟ್ಟರಾಜು ಗರಂ ಆಗಿದ್ದಾರೆ.
ಏಕವಚನದಲ್ಲಿ ಟೀಕೆ ಮಾಡಿದ ಚಲುವರಾಯಸ್ವಾಮಿ ಗೆ ಪುಟ್ಟರಾಜು ತಿರುಗೇಟು ನೀಡಿದ್ದು, ತಮ್ಮ ಲೆಟರ್ ಹೆಡ್ ಮೂಲಕ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಚಲುವರಾಯಸ್ವಾಮಿ ಸ್ವಾಮಿ ತನ್ನನ್ನು ತಾನು ಮೇಲುಕೋಟೆ ಚಲುವನಾರಾಯಣಸ್ವಾಮಿ ಅಂದುಕೊಂಡಿದ್ದಾರೆ. ಚಲುವರಾಯಸ್ವಾಮಿ ಗೆ ಅವರಿವರ ಮೇಲೆ ಕೂಗಾಡುವುದು ಬಿಟ್ಟರೆ ಬೇರೇನು ಗೊತ್ತಿಲ್ಲ. ಕಾವೇರಿ ಸಮಸ್ಯೆ ಇದ್ದು ಅದನ್ನ ಬಗೆಹರಿಸದೆ ರಾಜಕಾರಣ ಮಾಡ್ತಿದ್ದಾರೆ. ಚಲುವರಾಯಸ್ವಾಮಿಯಂತೆ ನಾನು ಮೂರುಸಲ ಶಾಸಕ, ಸಚಿವ, ಸಂಸದನೂ ಆಗಿದ್ದೇನೆ. ಬೇರೆಯವ್ರ ರೀತಿ ಯಾಚಕ ಮಾಡಿಕೊಂಡು ರಾಜಕೀಯಕ್ಕೆ ಬಂದಿಲ್ಲ ಕಷ್ಟಪುಟ್ಟು ದುಡಿದು ಬಂದಿದ್ದೇನೆ. ನಿಮ್ಮ ತರ ಮಿತ್ರದ್ರೋಹ, ಕತ್ತು ಕುಯ್ಯೋದು ನಮಗೆ ಗೊತ್ತಿಲ್ಲ. ಕುಮಾರಸ್ವಾಮಿ ಸಚಿವರಾಗಿ 1 ತಿಂಗಳಾಗಿದೆ ಸ್ವಲ್ಪ ತಡೆದುಕೊ ಚಲುವಣ್ಣ. ಕುಮಾರಸ್ವಾಮಿಯನ್ನ ದೇವ್ರೇನ್ರಿ, ಜಿಲ್ಲೆಯಲ್ಲಿ ಗಂಡಸ್ರೆ ಇಲ್ವಾ ಎಂದವ್ರುಗೆ ಮತದಾರರು ಬಿದ್ದಿ ಕಲಿಸಿದ್ದಾರೆ. ಮಾತನಾಡುವಾಗ ಗೌರವದಿಂದ ಮಾತನಾಡಿ ಇಲ್ದಿದ್ರೆ ನಿನಗಿಂತ ಚೆನ್ನಾಗಿ ಏಕವಚನದಲ್ಲಿ ಮಾತನಾಡಲು ನನಗೆ ಬರತ್ತೆ. ಸಚಿವ ಚಲುವರಾಯಸ್ವಾಮಿ ಗೆ ಎಚ್ಚರಿಕೆ ನೀಡಿದ್ದಾರೆ.