Friday, April 18, 2025
Google search engine

Homeರಾಜ್ಯಸುದ್ದಿಜಾಲತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿಗಳು ಅಣ್ಣೂರು ಗ್ರಾಮಕ್ಕೆ ದಿಢೀರ್ ಭೇಟಿ, ಪರಿಶೀಲನೆ

ತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿಗಳು ಅಣ್ಣೂರು ಗ್ರಾಮಕ್ಕೆ ದಿಢೀರ್ ಭೇಟಿ, ಪರಿಶೀಲನೆ

  • ವರದಿ: ಎಡತೊರೆ ಮಹೇಶ್

ಹೆಚ್.ಡಿ.ಕೋಟೆ: ಈ ದಿನ ತಾಲ್ಲೂಕಿನ ಆಹಾರ ಸುರಕ್ಷತಾ ಅಧಿಕಾರಿಗಳಾದ ಟಿ. ರವಿಕುಮಾರ್ ರವರು ಮತ್ತು ತಂಡದವರು ಹೆಚ್.ಡಿ.ಕೋಟೆ ತಾಲ್ಲೂಕಿನ ಅಣ್ಣೂರು ಗ್ರಾಮದ ,ಆಹಾರ ಪರವಾನಗಿ(FSSA ಲೈಸೆನ್ಸ್ ) ಇಲ್ಲದೆ, ಹೋಟೆಲ್, ಬೇಕರಿ ಮತ್ತುತಿಂಡಿ ಆಹಾರ ಪದಾರ್ಥಗಳನ್ನು ತಯಾರಿಸುವ ಗೋಡನ್ ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ನೋಟಿಸ್ ನೀಡಿದರು.

ಮಾಲೀಕರು ಮತ್ತು ವ್ಯಾಪಾರಸ್ಥರು ಗ್ರಾಹಕರಿಗೆ ಉತ್ತಮವಾದ ಮತ್ತು ಶುದ್ಧವಾದ ಒಳ್ಳೆ ಗುಣಮಟ್ಟದ ತಿಂಡಿ ಪದಾರ್ಥ ಮತ್ತು ಆಹಾರವನ್ನು ನೀಡಬೇಕು ,ಯಾವುದೇ ಕಾರಣಕ್ಕೂ ನೆನ್ನೆ ಮೊನ್ನೆ ತಯಾರಿಸಿರುವ ತಿಂಡಿ ಪದಾರ್ಥಗಳು, ಆಹಾರವನ್ನು ನೀಡಬಾರದು , ತಿಂಡಿ ಮತ್ತು ಆಹಾರ ಪದಾರ್ಥ ಗಳನ್ನು ಮಾಡಿದ ನಂತರ ಅವುಗಳನ್ನು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿಡಬೇಕು ಯಾವುದೇ ಕಾರಣಕ್ಕೂ ನೊಣ ಮತ್ತು ಇನ್ನಿತರ ಕೀಟಗಳು ಕೂರದ ಹಾಗೆ ನೋಡಿಕೊಳ್ಳಬೇಕು, ಮತ್ತು ಆವಾಗ ಆವಾಗ ಜಾಗವನ್ನು ಪೆನಲ್ ನಿಂದ ಸ್ವಚ್ಛಗೊಳಿಸಬೇಕು , ಘನತ್ಯಾಜ್ಯಗಳನ್ನು ಗ್ರಾಮ ಪಂಚಾಯಿತಿ ಯವರು ನೇಮಿಸಿರುವ ವಾಹನಕ್ಕೆ ಮಾತ್ರ ನೀಡಬೇಕು, ರಸ್ತೆ,ಬದಿ, ಕೆರೆ,ಕಟ್ಟೆ ,ನದಿಗಳಲ್ಲಿ ಬಿಸಾಡಬಾರದು ಹಾಗೂ ಹೆಚ್.ಡಿ. ಕೋಟೆ ಮತ್ತು ಸರಗೂರು ತಾಲ್ಲೂಕಿನ ಎಲ್ಲಾ ಹೋಟೆಲ್ ಮತ್ತು ಬೇಕರಿ ಮಾಲೀಕರು, ಮತ್ತು ವ್ಯಾಪಾರಸ್ಥರು 1ವಾರದ ಒಳಗೆ ಕಡ್ಡಾಯವಾಗಿ ಆಹಾರ ಪರವಾನೆ ಲೈಸೆನ್ಸ್ ಪಡೆಯಬೇಕು, ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಸ್ಥಳದಲ್ಲೇ ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಡತೊರೆ ಮಹೇಶ್ , ಚೌಡ ನಾಯ್ಕ, ಮುಖಂಡರಾದ ಗೋವಿಂದೇಗೌಡ ಸುರೇಶ್ ಆರೋಗ್ಯ ನಿರೀಕ್ಷಣಾಧಿಕಾರಿ ,ರವಿರಾಜ್ ಗ್ರಾಮ ಪಂಚಾಯತಿ ಸಿಬ್ಬಂದಿ ಮಮತಾ ,ಸೂರ್ಯ ಕುಮಾರ್ ದಾಸ, ಗಂಗರಾಜ ವರ್ಗದವರು , ಗ್ರಾಮದ ಮುಖಂಡರು,ಇನ್ನಿತರರು,ಹಾಜರಿದ್ದರು.

RELATED ARTICLES
- Advertisment -
Google search engine

Most Popular