Saturday, April 19, 2025
Google search engine

Homeರಾಜ್ಯಹೆಚ್.ಡಿ.ಕೋಟೆ ಬೇಕರಿ,ಹೋಟಲ್ ಗಳಿಗೆ ತಾಲೂಕಿನ ಆಹಾರ ಸುರಕ್ಷಿತ ಅಧಿಕಾರಿಗಳ ದಿಡೀರ್ ಭೇಟಿ: ಪರಿಶೀಲನೆ

ಹೆಚ್.ಡಿ.ಕೋಟೆ ಬೇಕರಿ,ಹೋಟಲ್ ಗಳಿಗೆ ತಾಲೂಕಿನ ಆಹಾರ ಸುರಕ್ಷಿತ ಅಧಿಕಾರಿಗಳ ದಿಡೀರ್ ಭೇಟಿ: ಪರಿಶೀಲನೆ

ವರದಿ : ಎಡತೊರೆ  ಮಹೇಶ

ಹೆಚ್.ಡಿ.ಕೋಟೆ: ಪಟ್ಟಣದ ಗ್ರಾಹಕರ ಒಬ್ಬರು ಅವಧಿ ಮೀರಿರುವ ತಂಪು ಪಾನೀಯವನ್ನು ಕುಡಿದು  ದೂರು ನೀಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಆಹಾರ ಸುರಕ್ಷಿತ ಅಧಿಕಾರಿಗಳಾದ ಟಿ. ರವಿಕುಮಾರ್ ರವರು  ಮತ್ತು ತಂಡದವರು ಪಟ್ಟಣದ ಬೇಕರಿಗಳಿಗೆ ಮತ್ತು ಹೋಟಲ್ ಗಳಿಗೆ  ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಆಹಾರ ಸುರಕ್ಷಿತ ಅಧಿಕಾರಿಗಳು ಬೇಕರಿಯಲ್ಲಿನ ತಿಂಡಿ ಮತ್ತು ತಂಪು ಪಾನೀಯಗಳ ತಯಾರಿಸಿರುವ ದಿನಾಂಕ ಮತ್ತು ಅವಧಿ ಮೀರುವ ದಿನಾಂಕಗಳನ್ನು ಪರಿಶೀಲನೆ ನಡೆಸಿ ಸ್ಥಳ ದಲ್ಲೆ ನೋಟಿಸ್ ನೀಡಿದರು.

ಅಂಗಡಿಯ ಮಾಲೀಕರು ಗ್ರಾಹಕರಿಗೆ ಉತ್ತಮವಾದ ತಂಪು ಪಾನೀಯ ಮತ್ತು ಶುದ್ಧವಾದ ಆಹಾರ ಪದಾರ್ಥಗಳನ್ನು ನೀಡಬೇಕು, ಹಾಗೂ ಎಲ್ಲಾ ತಿಂಡಿ ಪದಾರ್ಥಗಳ ಮೇಲೆ ತಯಾರಿಸಿರುವ ದಿನಾಂಕ ಮತ್ತು ಅವಧಿ ಮೀರುವ ದಿನಾಂಕಗಳನ್ನು ಕಡ್ಡಾಯವಾಗಿ ನಮೂದಿಸಬೇಕು, ಹಾಗೂ ಅವಧಿ ಮೀರಿರುವ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ನೀಡಬಾರದು, ಹಾಗೂ ಎಲ್ಲಾ ಹೋಟೆಲ್ ಮತ್ತು ಬೇಕರಿ ಮಾಲೀಕರು ಕಡ್ಡಾಯವಾಗಿ ಆಹಾರ ಪರವಾನೆ ಲೈಸೆನ್ಸ್ ಪಡೆಯಬೇಕು, ಇಲ್ಲದಿದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಸ್ಥಳದಲ್ಲೇ ಸೂಚಿಸಿದರು.

ಕೋಟ್ಬ ಕಾಯ್ದೆ ಅಡಿಯಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದವರಿಗೆ ದಂಡ ವಿಧಿಸಿದರು. ಹಾಗೂ ಯಾವುದೇ ಕಾರಣಕ್ಕೂ ತಂಬಾಕು ನಿಷೇಧ ಪ್ರದೇಶದಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಬಾರದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಾದ ರವಿರಾಜ್ ಪ್ರತಾಪ್ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular