ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ತಾಲೂಕು ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ತಾಲೂಕು ಪಂಚಾಯತಿ ಕಚೇರಿ ಸಿಬ್ಬಂದಿ ಕೆ.ಸುರೇಶ್ ಹಾಗೂ ಖಚಾಂಚಿಯಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ರವಿಕುಮಾರ್ ಅವಿರೋಧ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ಅಧ್ಯಕ್ಷರಾದ ಪರಮಶಿವಯ್ಯ ರವರ ಸಮ್ಮುಖ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಸುರೇಶ್ ಖಜಾಂಚಿ ಸ್ಥಾನಕ್ಕೆ ರವಿಕುಮಾರ್ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸಿದ ಹಿನ್ನೆಲೆ ಚುನಾವಣಾಧಿಕಾರಿ ಸಹಕಾರ ಇಲಾಖೆ ಸಿಡಿಓ ಹಿತೇಂದ್ರ ಅವಿರೋಧ ಆಯ್ಕೆ ಘೋಷಿಸಿದರು.
ಫಲಿತಾಂಶ ಬಳಿಕ ಕೆ.ಸುರೇಶ್ ಹಾಗೂ ರವಿಕುಮಾರ್ ಮಾತನಾಡಿ ನಮಗೆ ನೀಡಿರುವ ಅಧಿಕಾರವನ್ನು ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ನಿರ್ವಹಿಸಿ ಸಂಘದ ಎಲ್ಲಾ ಸದಸ್ಯರ ಹಿತ ಕಾಪಾಡಿ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರಾದ ಪಿ.ವಿ ದೇವರಾಜ್, ಜಗದೀಶಾರಾಧ್ಯ, ಮಂಜುನಾಥ್, ನಾಗರಾಜು, ಮಹೇಶ್, ಶ್ಯಾಮ್, ಗಿರೀಶ್, ಜಯಲಕ್ಷ್ಮಿ, ಸರ್ವಮಂಗಳ, ರೂಪ ಮತ್ತು ತಾಲೂಕು ಪಂಚಾಯತಿ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.