Friday, April 4, 2025
Google search engine

Homeಸಿನಿಮಾತಮಿಳು ನಟ ಜಯಂರವಿ ಹೊಸ ಸಿನಿಮಾ ಅನೌನ್ಸ್: 'ಇರೈವನ್'ಗೆ ಲೇಡಿ ಸೂಪರ್ ಸ್ಟಾರ್ ನಯನ್ ತಾರಾ...

ತಮಿಳು ನಟ ಜಯಂರವಿ ಹೊಸ ಸಿನಿಮಾ ಅನೌನ್ಸ್: ‘ಇರೈವನ್’ಗೆ ಲೇಡಿ ಸೂಪರ್ ಸ್ಟಾರ್ ನಯನ್ ತಾರಾ ನಾಯಕಿ

ಆಗಸ್ಟ್ 25, 2025ಕ್ಕೆ ಸಿನಿಮಾ ರಿಲೀಸ್

ಪೊನ್ನಿಯಿನ್ ಸೆಲ್ವನ್ ಸರಣಿ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ತಮಿಳು ನಟ ಜಯಂರವಿ ತಾರಾಮೌಲ್ಯ ಜೊತೆಗೆ ಬೇಡಿಕೆಯೂ ಹೆಚ್ಚಿಸಿಕೊಂಡಿದ್ದಾರೆ.

ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಗೆ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಕನ್ನಡ ಹೊರತುಪಡಿಸಿ ತಮಿಳು, ಹಿಂದಿ, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ‘ಇರೈವನ್’ಎಂಬ ಟೈಟಲ್ ನಡಿ ಬರ್ತಿರುವ ಹೊಸ ಸಿನಿಮಾದಲ್ಲಿ ಜಯಂರವಿ ನಾಯಕನಾಗಿ ಲೇಡಿ ಸೂಪರ್ ಸ್ಟಾರ್ ನಯನ್ ತಾರಾ ನಾಯಕಿಯಾಗಿ ನಟಿಸ್ತಿದ್ದಾರೆ.

ಈ ಮೆಗಾ ಪ್ರಾಜೆಕ್ಟ್ ಗೆ ಐ.ಅಹಮದ್ ಆಕ್ಷನ್ ಕಟ್ ಹೇಳಿದ್ದಾರೆ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೊನೆ ಹಂತದಲ್ಲಿರುವ ಇರೈವನ್ ಸಿನಿಮಾದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಮುಂದಿನ ವರ್ಷದ ಆಗಸ್ಟ್ 25ಕ್ಕೆ ವರ್ಲ್ಡ್ ವೈಡ್ ಈ ಚಿತ್ರ ತೆರೆಕಾಣಲಿದೆ.

ಆಕ್ಷನ್ ಥ್ರಿಲ್ಲರ್ ಇರೈವನ್ ನಲ್ಲಿ ರಾಹುಲ್ ಬೋಸೆ, ಅಶಿಶ್ ವಿದ್ಯಾರ್ಥಿ, ನರೇನ್, ವಿಜಯಲಕ್ಷ್ಮೀ, ಚಾರ್ಲಿ, ಬಗ್ಸ್ ಸೇರಿದಂತೆ ಇತರ ತಾರಾಬಳಗವಿದೆ. ಯುವನ್ ಶಂಕರ್ ಸಂಗೀತ, ಮಣಿಕಂದನ್ ಬಾಲಾಜಿ ಸಂಕಲನಿರುವ ಸಿನಿಮಾಗೆ ಸುಧನ್ ಸುಂದರಂ ಮತ್ತು ಜಯರಾಮ್.ಜಿ ನಿರ್ಮಾಣ ಮಾಡಿದ್ದಾರೆ.

 ಚೆನ್ನೈ ಹಾಗೂ ಪುದುಚರಿಯಲ್ಲಿ ಶೂಟಿಂಗ್ ನಡೆಸಲಾಗಿದೆ. ಇರೈವನ್ ಸಿನಿ ಮೂಲಕ ಸಿನಿಮಾಪ್ರೇಮಿಗಳಿಗೆ ಒಂದೊಳ್ಳೆ ಕಂಟೆಂಟ್ ಜೊತೆಗೆ ಎಂಟರ್ ಟೈನ್ಮೆಂಟ್ ನೀಡೋದಾಗಿ ಚಿತ್ರತಂಡ ತಿಳಿಸಿದೆ.

RELATED ARTICLES
- Advertisment -
Google search engine

Most Popular