Friday, April 18, 2025
Google search engine

Homeಸಿನಿಮಾತಮಿಳು ನಟ ವಿಜಯ್ ರಾಜಕೀಯಕ್ಕೆ ಎಂಟ್ರಿ

ತಮಿಳು ನಟ ವಿಜಯ್ ರಾಜಕೀಯಕ್ಕೆ ಎಂಟ್ರಿ

ಚೆನ್ನೈ: ನಟ ವಿಜಯ್ ತಮಿಳು ನಟ ಕಳಗಂ ಎಂಬ ನೂತನ ರಾಜಕೀಯ ಪಕ್ಷವನ್ನು ಘೋಷಿಸಿದ್ದು, ಈ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ತಮಿಳ ವೆಟ್ರಿ ಕಳಗಂ ನಾಯಕರು ತಮ್ಮನ್ನು ಪಕ್ಷದ ಮುಖ್ಯಸ್ಥನನ್ನಾಗಿ ನೇಮಕ ಮಾಡಿದ ನಂತರ ವಿಜಯ್ ಆ ಪಕ್ಷಕ್ಕೆ ತಮಿಳುನಾಡಿನಲ್ಲಿ ಚಾಲನೆ ನೀಡಿದ್ದಾರೆ.

ತಮ್ಮ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ತಮಿಳ ವೆಟ್ರಿ ಕಳಗಂ ಇನ್ನಿತರ ಯಾವುದೇ ಪಕ್ಷಗಳನ್ನು ಬೆಂಬಲಿಸುವುದಿಲ್ಲ ಎಂದು ಇತ್ತೀಚೆಗೆ ನಡೆದ ಸಾಮಾನ್ಯ ಮಂಡಳಿ ಹಾಗೂ ಕಾರ್ಯಕಾರಿ ಮಂಡಳಿ ಸಭೆಗಳಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಪ್ರಕಟಣೆಯನ್ನು ವಿಜಯ್ ಅಭಿಮಾನಿಗಳು ಸಂಭ್ರಮಾಚರಣೆಯೊಂದಿಗೆ ಸ್ವಾಗತಿಸಿದ್ದು, ತಮಿಳುನಾಡು ರಾಜಕಾರಣಕ್ಕೆ ಹಿರಿಯ ನಟರಾದ ಎಂ.ಜಿ.ರಾಮಚಂದ್ರನ್ ಹಾಗೂ ಜೆ.ಜಯಲಲಿತಾರಂಥವರು ಪದಾರ್ಪಣೆ ಮಾಡಿದ ನಂತರ ವಿಜಯ್ ಕೂಡಾ ಅದೇ ಹಾದಿ ಹಿಡಿದಿದ್ದಾರೆ.

RELATED ARTICLES
- Advertisment -
Google search engine

Most Popular