Thursday, April 3, 2025
Google search engine

Homeಅಪರಾಧಟಾರ್ಗೆಟ್ ಮಾಡಿದ್ದು ತಮ್ಮನನ್ನ, ಹಂತಕರ ಕೈಯಲ್ಲಿ ತಗಲಾಕಿ ಕೊಂಡಿದ್ದು ಅಣ್ಣ.!

ಟಾರ್ಗೆಟ್ ಮಾಡಿದ್ದು ತಮ್ಮನನ್ನ, ಹಂತಕರ ಕೈಯಲ್ಲಿ ತಗಲಾಕಿ ಕೊಂಡಿದ್ದು ಅಣ್ಣ.!

ಮಂಡ್ಯ: ತಮ್ಮನ ಮೇಲಿನ ಸೇಡಿಗೆ ಅಣ್ಣನನ್ನ ಕಿಡ್ಯ್ನಾಪ್ ಮಾಡಿ ಮರ್ಡರ್ ಮಾಡಿರುವ ಆಘಾತಕಾರಿ ಘಟನೆಗೆ ಸಕ್ಕರೆ ನಗರಿ ಮಂಡ್ಯ ಸಾಕ್ಷಿಯಾಗಿದೆ.

ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ವೆಂಕಟೇಶ್ ಎಂಬಾತನ ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು ಬಳಿಕ ಕೊಲೆಗೈದು ಸುಟ್ಟು ಹಾಕಿರುವ ಘಟನೆ ಮಂಡ್ಯ ತಾಲೂಕಿನ ಸಾತನೂರು ಗ್ರಾಮದಲ್ಲಿ ಘಟನೆ.

ಹಣ ಕಾಸಿನ ವಿಚಾರಕ್ಕೆ ತಮ್ಮ ರಮೇಶ್ ಜೊತೆ ರಮೇಶ್ ಸ್ನೇಹಿತರಾದ ಭೀಮೇಶ್ ಹಾಗೂ ವಿನಯ್ ಎಂಬುವವರು ಗಲಾಟೆ ಮಾಡಿದ್ದರು.

ಮೇ 23 ರಂದು ತಡರಾತ್ರಿ ಪೊಲೀಸರೆಂದು ಹೇಳಿಕೊಂಡು ಬಂದಿದ್ದ 6 ಮಂದಿ ಗ್ಯಾಂಗ್ ಮನೆಯಲ್ಲಿ ತಮ್ಮ ರಮೇಶ್ ಇಲ್ಲದ ಕಾರಣ ಅಣ್ಣ ವೆಂಕಟೇಶ್ ನನ್ನು ಅಪಹರಿಸಿದ್ದರು.

ವೆಂಕಟೇಶ್ ನನ್ನು ಅಪಹರಿಸಿ ಹತ್ಯೆಗೈದು ಈರೇಗೌಡನ ಕೊಪ್ಪಲು ಅರಣ್ಯಪ್ರದೇಶದಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.

ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರಿಗೆ ಅಪಹರಣದ ಕುರಿತು ಪೋಷಕರು ದೂರು ನೀಡಿದ್ದರು. ಆದರೆ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.

ಇದು ಪೋಷಕರ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಕರಣ ನಡೆದು 13 ದಿನಗಳ ಬಳಿಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ಕೈಗೊಂಡ ಮಂಡ್ಯ ಗ್ರಾಮಾಂತರ ಪೊಲೀಸರು ನಾಲ್ವರು ಕೊಲೆ ಪಾತಕಿಗಳನ್ನು ಬಂಧಿಸಿದ್ದಾರೆ.

RELATED ARTICLES
- Advertisment -
Google search engine

Most Popular